ಸಂಭ್ರಮದ ಬಾವಿಹಳ್ಳಿ ಕರಿಬಸವೇಶ್ವರ ಸ್ವಾಮಿ ರಥೋತ್ಸವ

ಹೂವಿನಹಡಗಲಿ 23; ತಾಲ್ಲೂಕಿನ ಬಾವಿಹಳ್ಳಿ  ಗ್ರಾಮದ ಕರಿಬಸವೇಶ್ವರ ಸ್ವಾಮಿಯ ರಥೋತ್ಸವ ಮಂಗಳವಾರ ಸಂಭ್ರಮದಿಂದ ನೆರವೇರಿತು. 

ದೇವಾಲಯ ದಿಂದ  ಪಲಕ್ಕಿಯ ಭವ್ಯ ಮೆರವಣಿಗೆಯಲ್ಲಿ ಸ್ವಾಮಿಯ ಉತ್ಸವ ಮೂರ್ತಿ ತಂದು ರಥಕ್ಕೆ ಪ್ರದಕ್ಷಿಣೆ ಹಾಕಲಾಯಿತು. ನಾನಾ ಬಗೆಯ ಹೂಮಾಲೆ, ತಳಿರು ತೋರಣಗಳಿಂದ ಅಲಂಕರಿಸಿದ್ದ  ಗಡ್ಡಿ ತೇರಿಗೆ ಸಾಂಪ್ರದಾಯಿಕ విధి ವಿಧಾನಗಳಿಂದ ಪೂಜೆ, ಮಹಾಮಂಗಳಾರತಿ ನೆರವೇರಿಸಿದರು. ಸ್ವಾಮಿಯ ಜಯಘೋಷ ಹರ್ಷೋದ್ಗಾರ ನಡುವೆ ರಥೋತ್ಸವ ವನ್ನು ಎಳೆಯಲಾಯಿತು. ಭಕ್ತರು ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿ ಮೆರೆದರು. ಸಮಾಳ, ನಂದಿಕೋಲು, ಮಂಗಳವಾದ್ಯಗಳು ರಥೋತ್ಸವ ಕ್ಕೆ ಮೆರುಗು ತಂದವು. ಹೊಳಗುಂದಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಾಗವಹಿಸಿದ್ದರು. ಇದಕ್ಕೂ ಮುನ್ನ ಸ್ವಾಮಿಯ ನಿಶಾನೆಯನ್ನು ಬಾವಿಹಳ್ಳಿ ನಿವೃತ್ತಿ ‌ಉಪನ್ಯಾಸಕ  ಎಲ್.ಮಲ್ಲಣ್ಣ ಅವರಿಗೆ 65000 ರೂ.ಪಡೆದು ಕೊಂಡರು.