ಧಾರವಾಡ02: ವರ ಕವಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಓಡಾಡಿ, ಅವರ ಸಾಹಿತ್ಯಕ್ಕೆ ಪ್ರೇರಣೆಯಾದ ಪ್ರಶಸ್ತ ತಾಣವಾದ ಸಾಧನಕೇರಿ ಇಂದು ಅವ್ಯವಸ್ಥೆಯ ಆಗರವಾಗಿದೆ. ಸುತ್ತಮುತ್ತಲಿನ ಬಡಾವಣೆಗಳ ಕೊಳಚೆ ನೀರು ಕೆರೆಗೆ ಸೇರಿ ಸಾಧನಕೇರಿಯ ಕೆರೆಯೂ ಸಂಪೂರ್ಣ ಮಲೀನಗೊಂಡಿರುವುದು ನೋವಿನ ಸಂಗತಿ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ತಿಳಿಸಿದ್ದಾರೆ.
ಈ ಕುರಿತು ಧಾರವಾಡ ಜಿಲ್ಲಾಡಳಿತಕ್ಕೆ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದ್ದು, ಈ ಪಾರ್ಕಗೆ ಮೂರು ಕೋಟಿಗೂ ಅಧಿಕ ಹಣ ಸುರಿದು ಜಿಲ್ಲಾಡಳಿತ ಅಭಿವೃದ್ದಿ ಪಡಿಸಿದೆ. ಈ ಪ್ರವಾಸಿ ತಾಣಕ್ಕೆ ಪ್ರತಿ ನಿತ್ಯ ಸಾವಿರಾರು ಜನ ಬಂದು ಹೋಗುವ ಈ ಸಾಧನಕೇರಿಯ ಪರಿಸ್ಥಿತಿ ಅಯೋಮಯೋವಾಗಿರುವುದು. ಸೂಕ್ತ ನಿರ್ವಹಣೆ ಇಲ್ಲದೆ, ಸೋರಗುತ್ತಿದೆ ಎಂದರು.
ಈ ಹಿಂದೆ ನಿಮರ್ಿತಿ ಕೇಂದ್ರ ಅಷ್ಟು ಇಷ್ಟು ನಿರ್ವಹಣೆ ಮಾಡುತ್ತಿತ್ತು. ಆದರೆ ಕಳೆದ ಒಂದು ವರ್ಷಗಳಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸುರ್ಪದಿಗೆ ಹಸ್ತಾಂತರಗೊಂಡ ಬಳಿಕ ಸೂಕ್ತ ನಿರ್ವಹಣೆ ಇಲ್ಲದೆ ಸೊರಗುತ್ತಿದೆ ಎಂದು ದೂರಿದರು.
ಸಾಧನಕೇರಿಯಂತೂ ಸಂಪೂರ್ಣವಾಗಿ ಕೊಳಚೆ ನೀರಿನಿಂದ ಗಬ್ಬೇದ್ದ ನಾರುತ್ತಿದೆ. ಅಲ್ಲದೆ, ಅಲ್ಲಿಯ ಸುತ್ತಮುತ್ತಲಿನ ಪರಿಸರದಲ್ಲಿರುವ ಬಡಾವಣೆಗಳಾದ ಮಂಗಳಗಟ್ಟಿ ಪ್ಲಾಟ್, ನಾಡಗೇರ ಪಾರ್ಕ, ಬ್ರಹ್ಮ ಚೈತನ್ಯ ಪಾರ್ಕ, ಹುಬ್ಬಳ್ಳಿಕರ್ ಪ್ಲಾಟ್ ಸೇರಿದಂತೆ ಅನೇಕ ಬಡಾವಣೆಗಳ ಜನರ ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರುತ್ತಿದೆ.
ಈ ಬಗ್ಗೆ ಜಿಲ್ಲಾಡಳಿತಕ್ಕೆ ಹತ್ತು ಹಲವು ಬಾರಿ ಮನವಿ ಸಲ್ಲಿಸಿದರೂ ಈವರೆಗೆ ಯುಜಿಡಿ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಈ ಹಿಂದೆ ಕೇವಲ ಯುಜಿಡಿ ವ್ಯವಸ್ಥೆ ಕಲ್ಪಿಸಿದ್ದರೂ ಸಹ ಅದು ಮಣ್ಣು ಬಿದ್ದ ಪರಿಣಾಮ ಸಾಧನಕೇರಿಗೆ ಹೋಗಿ ಸೇರುತ್ತಿದೆ.
ಈ ಬಗ್ಗೆ ಕಾಟಾಚಾರಕ್ಕೆ ನಿರ್ವಹಣೆ ಮಾಡುವುದು ಸರಿಯಲ್ಲ. ಶಾಶ್ವತ ಪರಿಹಾರ ಕಲ್ಪಿಸುವ ಜೊತೆಗೆ ಯಾವುದೇ ಕಾರಣಕ್ಕೂ ಸಾಧನಕೇರಿಗೆ ಈ ಕೊಳಚೆ ನೀರು ಹೋಗದಂತೆ ತಡೆಗಟ್ಟಬೇಕು.
ಅಲ್ಲದೆ, ಈಗಾಗಲೇ ಈ ಸಾಧನಕೇರಿಯಲ್ಲಿ ಸೇರಿರುವ ಕೊಳಚೆ ನೀರನ್ನು ಸಂಪೂರ್ಣ ಹೊರ ಹಾಕಿ ಜನರಿಗೆ ಮುಕ್ತವಾಗಿ ಓಡಾಡಲು ಸಾಧ್ಯವಾಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ.
ಅಲ್ಲದೆ, ಸಾಧನಕೇರಿಯ ದಂಡೆಯ ಮೇಲಿರುವ ಸಾಧನಕೇರಿಯಿಂದ ಪೆಪ್ಸಿ ಕಂಪನಿಗೆ ಹೋಗುವ ರಸ್ತೆ ಲೋಕೋಪಯೋಗಿ ಇಲಾಖೆಯ ರಸ್ತೆಯಾಗಿದ್ದು, ಅದು ಕಳೆದ ಹಲವು ವರ್ಷಗಳಿಂದ ಸೂಕ್ತ ನಿರ್ವಹಣೆ ಇಲ್ಲದ್ದರಿಂದ ನಡೆದಾಡಲು ಸಹ ಯೋಗ್ಯವಾಗಿಲ್ಲ.
ಈ ರಸ್ತೆಯಲ್ಲಿ ಬಸ್ ಸಂಚಾರ, ವಾಹನ ಸಂಚಾರ ಯತೇಚ್ಛವಾಗಿದೆ. ಹೀಗಾಗಿ ದಿನನಿತ್ಯ ದ್ವಿಚಕ್ರ ವಾಹನ ಸವಾರು ಬೀದ್ದು, ಗಾಯಗೊಳ್ಳುವ ಪರಿಸ್ಥಿತಿ ನಿಮರ್ಾಣವಾಗಿದೆ. ಕೂಡಲೇ ಈ ರಸ್ತೆಯನ್ನು ದುರಸ್ತಿ ಕಾರ್ಯ ಕೈಗೊಳ್ಳಲು ಸೂಕ್ತ ನಿದರ್ೇಶನ ನೀಡುವಂತೆ ಈ ಮೂಲಕ ಕೋರುತ್ತೇವೆ.
ಒಂದು ವಾರದಲ್ಲಿ ಈ ಬಗ್ಗೆ ಧಾರವಾಡ ಜಿಲ್ಲಾಡಳಿತ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸ್ಥಳೀಯ ನಿವಾಸಿಗಳ ಜೊತೆಗೆ ಸೇರಿ ಜನ ಜಾಗೃತಿ ಸಂಘದ ನೇತೃತ್ವದಲ್ಲಿ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಈ ಮೂಲಕ ತಿಳಿಸಬಯಸುತ್ತೇವೆ ಎಂದು ಬಸವರಾಜ ಕೊರವರ ಎಚ್ಚರಿಸಿದ್ದಾರೆ.