ಬಸವ ಉದ್ಯಾನವನಕ್ಕೆ ಬೇಕಿದೇ ಕಾಯಕಲ್ಪ
ಗದಗ 01: ನಗರದ ಹೃದಯ ಭಾಗದಲ್ಲಿರುವ ಬಸವೇಶ್ವರ ನಗರ ಶುದ್ಧ ನೀರಿನ ಘಟಕದ ಹತ್ತಿರವಿರುವ ಬಸವ ಉದ್ಯಾನವದಲ್ಲಿರುವ ಬಸವೇಶ್ವರ ಪುತ್ಥಳಿ ಬೆಳಕಿನ ವ್ಯವಸ್ಥೆ ಇಲ್ಲದೇ ಅಂಧಕಾರದಲ್ಲಿ ಬಸವ ಪುತ್ಥಳಿಯಿದ್ದು ಜೊತೆಗೆ ಉದ್ಯಾನವನಕ್ಕೆ ಮಾಡಿದ ಬೆಳಕಿನ ವ್ಯವಸ್ಥೆಯ ವೈರುಗಳು ಕಟ್ಟಾಗಿ ವಿದ್ಯುತ್ತ ತಗುಲಿ ಮಕ್ಕಳು ಅಪಾಯದ ಅಂಚಿನಿಂದ ಪಾರಾದ ಉದಾಹರಣೆ ಇದ್ದು ಜೊತೆಗೆ ಉದ್ಯಾನವನದ ತುಂಬ ಗಿಡಗಳ ಎಲೆ ಬಿದ್ದು ಉದ್ಯಾನವನ ಕಾಡಿನ ಮಾದರಿಯಲ್ಲಿ ಕಾಣುತ್ತಿರುವುದು ವಿಶೇಷ. ಕೊಡಲೇ ಇತ್ತ ಸಂಭಂಧಿಸಿ ಅಧಿಕಾರಿಗಳು ಗಮನ ಹರಿಸಿ ಶೀಘ್ರವಾಗಿ ಸ್ವಚ್ಛಗೊಳಿಸಿ, ಬೆಳಕಿನ ವ್ಯವಸ್ಥೆ ಮಾಡಿ, ಕಟ್ಟಾದ ವಿದ್ಯುತ್ತ ತಂತಿಗಳನ್ನು ಸರಿ ಪಡಿಸಿ ಜ್ಞಾನದ ಬೆಳಕು ಚೆಲ್ಲಿದ ವಿಶ್ವಗುರು ಬಸವಣ್ಣವರು ಇರುವ ಬಸವ ಉದ್ಯಾನವನಕ್ಕೆ ಕಾಯಕಲ್ಪ ಮಾಡಬೇಕೆಂದು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.