ಹಾವೇರಿ14: ಜಿಲ್ಲಾ ತಂಬಾಕು ನಿಯಂತ್ರಣ ತಂಡ ಬ್ಯಾಡಗಿ ನಗರದಲ್ಲಿ ಸೋಮವಾರ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ, ತನಿಖಾ ವೇಳೆಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆ 2003ರನ್ನು ಉಲ್ಲಂಘನೆಮಾಡಿದ ಅಂಗಡಿ ಮಾಲೀಕರಿಗೆ ಸೂಚನಾ ಪತ್ರ ನೀಡಿ, 18 ಪ್ರಕರಣಗಳಲ್ಲಿ ಕೋಟ್ಪಾ ಕಾಯ್ದೆ 2003ರ ಕಲಂ 4ರಡಿಯಲ್ಲಿ ರೂ.6000 ದಂಡ ವಸೂಲಿಮಾಡಿದೆ.
ದಾಳಿಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಎಂ.ಲಮಾಣಿ, ಜಿಲ್ಲಾ ತಂಬಾಕು ನಿಯಂತ್ರಣ ಸಲಹೆಗಾರ ಡಾ.ಸಂತೋಷ ವಿ.ದಡ್ಡಿ, ತಾಲೂಕಾ ಆಹಾರ ಸುರಕ್ಷತೆ ಅಧಿಕಾರಿ ರಂಗಣ್ಣ ರಾಥೋಡ, ಪೊಲೀಸ್ ಇಲಾಖೆ ಸಿಬ್ಬಂದಿ ಇತರರು ಉಪಸ್ಥಿತರಿದ್ದರು.