ಹಿಂದಿ ಕಂಠ ಪಾಠದಲ್ಲಿ ಅಸಾದುಲ್ಲಾ ಹಳ್ಳೂರ ಜಿಲ್ಲಾ ಮಟ್ಟಕ್ಕೆ ಆಯ್ಕೆ
ವಿಜಯಪುರ 06: ದರಬಾರ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾವರ್ಧಕ ಸಂಘದ ಕನ್ನಡ ಪ್ರಾಥಮಿಕ ಶಾಲೆಯ ಏಳನೇ ವರ್ಗದ ವಿದ್ಯಾರ್ಥಿ ಅಸಾದುಲ್ಲಾ ಹಳ್ಳೂರ ಜಿಲ್ಲಾ ಪಂಚಾಯತ ವಿಜಯಪುರ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಾರ್ಯಾಲಯ ಏರಿ್ಡಸಿದ 2024-2025ರ ಇತ್ತೀಚಿಗೆ ನಡೆದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ಭಾಗವಹಿಸಿ ಹಿಂದಿ ಕಂಠ ಪಾಠದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಪ್ರಯುಕ್ತ ಸಂಸ್ಥೆಯ ಅಧ್ಯಕ್ಷರಾದ ರಾಜೇಶ್ ಡಿ. ದರಬಾರ ಗೌರವ ಕಾರ್ಯದರ್ಶಿಗಳಾದ ಪ್ರಕಾಶ್ ಉಡುಪಿಕರ, ಸಮನ್ವಯಾ ಅಧಿಕಾರಿಗಳಾದ ಡಾ. ವಿ.ಬಿ. ಗ್ರಾಮಪುರೋಹಿತ ಅಭಿನಂದಿಸಿದ್ದಾರೆ ಎಂದು ಮುಖ್ಯೋಪಾಧ್ಯಾಯ ರಮೇಶ್ ಕೋಟ್ಯಾಳ ತಿಳಿಸಿದ್ದಾರೆ.