ಮತದಾನದ ಬಗ್ಗೆ ಅಸಡ್ಡೆ, ಆತ್ಮವಂಚನೆ ಮಾಡಿಕೊಂಡಂತೆ: ಡಾ.ಅಜಿತ ಪ್ರಸಾದ

ಧಾರವಾಡ25: ಯುವಕ-ಯುವತಿಯರಲ್ಲಿ ಮತದಾನದ ಬಗ್ಗೆ ಆಸಕ್ತಿಯೇ ಇಲ್ಲವಾಗಿದೆ. ಇದರಿಂದ ದೇಶದ ಚುನಾಯಿತ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಬಾರಿ ಹಿನ್ನಡೆ ಉಂಟಾಗುತ್ತದೆ ನಮ್ಮ ಹಕ್ಕುಗಳ ಬಗ್ಗೆ ಹೊರಾಡುವ ನಾವು ಮತದಾನವು ನಮ್ಮ ಕರ್ತವ್ಯವೆಂದು ತಿಳಿದು ಅದನ್ನು ಪಾಲಿಸಬೇಕಾಗಿದೆ. ಇಲ್ಲವಾದಲ್ಲಿ ಕೆಲವೇ ಕೆಲವು ಜನ ಆಯ್ಕೆ ಮಾಡುವ ಪ್ರತಿ ನಿಧಿಗಳು ದೇಶವನ್ನು ಆಳುವ ಕಾಲ ದೂರವಿಲ್ಲ ಹಾಗಾಗೀ ಪ್ರತಿಯೊಬ್ಬ ವಿದ್ಯಾಥರ್ಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳುವುದರ ಮೂಲಕ ಮತದಾನದಲ್ಲಿ ಭಾಗವಹಿಸಿ ಪ್ರಬುದ್ದತೆಯನ್ನು ತೋರಬೇಕೆಂದು ಜೆ.ಎಸ್.ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಮತದಾರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಡಾ. ಅಜಿತ ಪ್ರಸಾದರವರು ವಿದ್ಯಾಥರ್ಿಗಳಿಗೆ ಪ್ರತಿಜ್ಞಾ ವಿಧಿ ಭೋಧಿಸಿ ಮಾತನಾಡುತ್ತಿದ್ದರು. 

 ಮತದಾನ ಪ್ರಜಾ ಪ್ರಭುತ್ವದ ಬುನಾದಿಯಾಗಿದೆ ಹಾಗೂ ಸುಬದ್ರ ಸರಕಾರದ ಸ್ಥಾಪನೆಗೆ ಸಹಾಯವಾಗುತ್ತದೆ ಎಂದು ಹೇಳಿದರು. ಈ ಸಂಧರ್ಭದಲ್ಲಿ ಸಂಸ್ಥೆಯ ಉಪನ್ಯಾಸಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.