ಕ್ರೀಡೆಯಲ್ಲಿ ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ - ಎ.ಎ.ಖಾಜಿ
Accept defeat and victory equally in sports – A.A. Khaji
ಲೋಕದರ್ಶನ ವರದಿ
ಯರಗಟ್ಟಿ 17: ಮಕ್ಕಳ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಕ್ರೀಡಾಕೂಟಗಳು ವೇದಿಕೆಯಾಗಿವೆ ಎಂದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ ಖಾಜಿ ಹೇಳಿದರು. ಪಟ್ಟಣದ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು‘ಶಿಕ್ಷಣದ ಜೊತೆಗೆ ಕ್ರೀಡೆಯನ್ನು ಸಮತೋಲನವಾಗಿ ನೋಡಬೇಕು. ಕ್ರೀಡೆಯಲ್ಲಿ ಸೋಲು, ಗೆಲುವು ಸಮಾನವಾಗಿ ಸ್ವೀಕರಿಸಿದಾಗ ಮಾತ್ರ ನಾವೆಲ್ಲರೂ ಒಂದೇ ಎಂಬ ಮನೋಭಾವ ಮೂಡುತ್ತದೆ’ ಎಂದರು.
ತಹಶೀಲ್ದಾರ ಎಂ. ವ್ಹಿ. ಗುಂಡಪ್ಪಗೋಳ ಮಾತನಾಡಿ, ಆಟೋಟಗಳು ಮಕ್ಕಳ ಸ್ನಾಯುಗಳನ್ನು ಬಲಪಡಿಸುತ್ತವೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಅವರನ್ನು ಸದಾ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳುತ್ತವೆ. ಇದು ಇಂದಿನ ದಿನಗಳಲ್ಲಿ ಕಾಡುವ ಬಾರೀ ತೂಕ (ಬೊಜ್ಜು) ಮತ್ತು ಸೋಮಾರಿತನವನ್ನು ತಡೆಯುತ್ತದೆ ಆಟವಾಡುವಾಗ ಮಕ್ಕಳು ತಂತ್ರಗಳನ್ನು ರೂಪಿಸುತ್ತಾರೆ, ಸಮಸ್ಯೆಗಳನ್ನು ಪರಿಹರಿಸಲು ಕಲಿಯುತ್ತಾರೆ. ಇದು ಅವರ ಸೃಜನಶೀಲತೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷ ಲಕ್ಕಪ್ಪ ಜಗದಾರ, ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ಪ.ಪಂ ನಾಮನಿರ್ದೇಶಕ ಸದಸ್ಯ ನಿಖಿಲ ಪಾಟೀಲ, ಬಿಸಿ ಉಟ ಅಧಿಕಾರಿ ಮೈತ್ರಾದೇವಿ ವಸ್ತ್ರದ, ದೈಹಿಕ ಶಿಕ್ಷಣಾಧಿಕಾರಿ ಸಂತೋಷ ಬಿರಾಜನವರ, ಬಸವೇಶ್ವರ ಪ್ರೌಢಶಾಲೆ ಅಧ್ಯಕ್ಷ ರಮೇಶಗೌಡ ದೇವರಡ್ಡಿ, ಶಿಕ್ಷಣ ಸಂಯೋಜಕ ಎಂ.ಬಿ.ಕಡಕೋಳ, ಎ.ಬಿ.ಕಾಮಣ್ಣವರ, ಮುಖ್ಯ ಶಿಕ್ಷಕ ಬಿ.ಎಸ್.ಆಲದಕಟ್ಟಿ, ಎ.ಎ.ಮಕ್ತುಮನವರ, ಪಿಟಿಪಿಎಸ್ ಅಧ್ಯಕ್ಷ ಎಂ.ಸಿ.ಕುಂಬಾರ, ವಿಜಯ ಮೇಳವಂಕಿ, ಡಿ.ಎಸ್.ಭಜಂತ್ರಿ, ಎಸ್.ಬಿ.ಮಿಕಲಿ, ಸ್ವೇತಾ ನೈನಾರ, ಜಿ.ಎನ್.ಮಲಕನ್ನವರ, ಬಿ.ಎಸ್.ಸಿದ್ದಬಸನ್ನವರ, ವಸಂತ ಬಡಿಗೇರ, ಎಂ.ಎಂ.ಮಲಕನ್ನವರ, ಎಸ್.ಎಂ.ಪೂಜೇರ ಸೇರಿದಂತೆ ಯರಗಟ್ಟಿ ವಲಯ ದ್ಯಹಿಕ ಶಿಕ್ಷಕರು ಅನೇಕರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 