ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯ ವರದಿಯನ್ನು ಪ್ರಕಟಿಸುವ ಕುರಿತು

About publication of report of national level karate competition


ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯ ವರದಿಯನ್ನು ಪ್ರಕಟಿಸುವ ಕುರಿತು 


ನಾನು ಬಂಡ್ರಾಳ್ ಎಂ.ಮೃತ್ಯುಂಜಯಸ್ವಾಮಿ, ಅಧ್ಯಕ್ಷರು ಶ್ರೀ ಪಂಚಾಕ್ಷರಿ ಮರ್ಷಿಯಲ್ ಆಟ್ಸ್‌ ಟ್ರಸ್ಟ್‌ (ರಿ), ಗಾಂಧಿನಗರ, ಬಳ್ಳಾರಿ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ. ದಿನಾಂಕ:29, 30-12-2024ರಂದು ಹುಬ್ಬಳ್ಳಿಯ ವಾಸವಿ ಮಹಲ್‌ನಲ್ಲಿ, ಆಸ್ಪರಿ ಕರಾಟೆ ಅಕಾಡೆಮಿ, ಹುಬ್ಬಳ್ಳಿ ಇವರು ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯನ್ನು ಏರಿ​‍್ಡಸಿದ್ದರು. ಈ ಸ್ಪರ್ಧೆಯ ಮುಖ್ಯಸ್ಥರಾಗಿ ರಾಜ್ಯ ಕರಾಟೆಯ ಅಸೋಷಿಯೇನ್ ಮುಖ್ಯಸ್ಥರಾದ ಭಾಗರ್ವರೆಡ್ಡಿ ಇವರು ವಹಿಸಿದ್ದರು. ಈ ಸ್ಪರ್ಧೆಯಲ್ಲಿ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ್ದರು. ನಮ್ಮ ಟ್ರಸ್ಟ್‌ನ 08 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನವನ್ನು ನೀಡಿ ಬಹುಮಾನಗಳನ್ನು ಪಡೆದಿದ್ದಾರೆ. 15 ವರ್ಷದ ಕೆಳಗಿನ ವಿಭಾಗದಲ್ಲಿ 1) ಹೆಚ್‌.ಕೆ.ಮೌನಿಕಾ, ಕಟಾ ವಿಭಾಗದಲ್ಲಿ ದ್ವೀತಿಯ ಸ್ಥಾನ, ಕುಮತಿ ವಿಭಾಗದಲ್ಲಿ ತೃತೀಯ ಸ್ಥಾನ, 2) ನಿಹಾಲ್ ಶೇಖ್, ಕಟಾವಿಭಾಗದಲ್ಲಿ ದ್ವೀತಿಯ, ಕುಮತಿ ವಿಭಾಗದಲ್ಲಿ ಪ್ರಥಮ, 3) ಓಜಸ್ ವಿ.ಇಂದು ಪ್ರೀಯಾ, ಕಟಾ ವಿಭಾಗದಲ್ಲಿ ತೃತೀಯ, 4) ದುರ್ಗ ವಿ.ತೇಜಸ್ವಿನಿ, ಕಟಾ ವಿಭಾಗದಲ್ಲಿ ತೃತೀಯ, ಕುಮತಿ ವಿಭಾಗದಲ್ಲಿ ದ್ವೀತಿಯ, 5) ಪ್ರತೀಕ್ಷ, ಕಟಾ ವಿಭಾಗದಲ್ಲಿ ತೃತೀಯ, 6) ನಮನ್‌.ಕೆ. ಕಟಾ ವಿಭಾಗದಲ್ಲಿ ತೃತೀಯ, 7) ಲಕ್ಷೀತ್‌.ಎಂ. ಕಟಾ ವಿಭಾಗದಲ್ಲಿ ದ್ವೀತಿಯ, 8) ಮಾಹಿತ್‌ರೆಡ್ಡಿ, ಕಟಾವಿಭಾಗದಲ್ಲಿ ತೃತೀಯ, ಕುಮತಿ ವಿಭಾಗದಲ್ಲಿ ಪ್ರಥಮ, ಸಾಧನೆ ಮಾಡಿ ವಿದ್ಯಾರ್ಥಿ, ವಿದ್ಯಾರ್ಥಿನೀಯರನ್ನು ಟ್ರಸ್ಟ್‌ನ ಅಧ್ಯಕ್ಷರು ಮತ್ತು ತರಬೇತಿದಾರರು, ಬಂಡ್ರಾಳ್ ಎಂ.ಮೃತ್ಯುಂಜಯಸ್ವಾಮಿ, ವಾಸುದೇವರಾಜುಲು, ಗೌರವಾಧ್ಯಕ್ಷರಾದ ವಿಕ್ರಮ್ ಮಹಿಪಾಲ್, ಸಂಯೋಜಕರಾದ ಶಬರಿ ರವಿಚಂದ್ರನ್, ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.