ಅರ್ಥಪೂರ್ಣವಾಗಿ ಎಳ್ಳ ಅಮಾವಾಸಿ ಆಚರಣೆ
A meaningful New Moon celebration
ಇಂಡಿ 19: ನಗರ ಹಾಗೂ ತಾಲೂಕಿನಾದ್ಯಂತ ಎಳ್ಳ ಅಮಾವಾಸ್ಯೆಯನ್ನು ಸಾರ್ವಜನಿಕರು ಅತೀ ವಿಜೃಂಭಣೆಯಿಂದ ಆಚರಿಸಿದರು. ಸಾರ್ವಜನಿಕರು ತಮ್ಮ-ತಮ್ಮ ಜಮೀನುಗಳಿಗೆ ಹೋಗಿ “ಚರಗಾ” ಚಲ್ಲಿ ಛಜ್ಜಿ ರೊಟ್ಟಿ ಚವಳಿಕಾಯಿ ಚೋಂಗೆಬಲೋ ಎಂಬ ಉದ್ಘಾರ ಮಾಡಿ, ಕುಟುಂಬಸ್ಥರು, ಗೆಳೆಯರು, ಸಂಭಂದಿಕರೊಂದಿಗೆ ವಿವಿಧ ಬಗೆಯಾಗಿ ತಯಾರಿಸಿದ ಬೋಜನವನ್ನು ತಮ್ಮ ಜಮೀನಿನಲ್ಲಿಯೇ ಕುಳಿತು ಸವಿದರು.ಕಾಸುಗೌಡ ಬಿರಾದಾರ ಅವರ ಜಮೀನಿನಲ್ಲಿ ನೂರಾರು ಜನ ಚರಗಾ ಚಲ್ಲಿ ಭೋಜನ ಸವಿದರು.ಖೇಡಗಿ ಗ್ರಾಮದ ಪಾಟೀಲ್ ಅವರ ಜಮೀನಿನಲ್ಲಿ ವಿದ್ಯಾಶ್ರೀ ಪಾಟೀಲ, ಉಮಾ ಪಟ್ಟದಕಲ್, ಪ್ರಿಯಾಂಕಾ ಅಂಬರಕರ, ರಾಜಶ್ರೀ ಕ್ಷತ್ರಿ, ಭಾರತಿ ಪತ್ರಿಮಠ ಶ್ಯಾಮಲಾ ಬಗಲಿ, ಶಶಿಕಲಾ ಉಮರ್ಜಿ, ರಾಜಶ್ರೀ ಭಜಂತ್ರಿ, ಪ್ರೀತಿ ಕ್ಷತ್ರಿ, ಸುಜಾತಾ ಬಡಿಗೇರ ಮತ್ತಿತರರು ಎಳ್ಳ ಅಮಾವಾಸ್ಯೆಯ ಪ್ರಯುಕ್ತ ಚರಗಾ ಚಲ್ಲಿ ಸಂಭ್ರಮದಿಂದ ಎಳ್ಳ ಅಮಾವಾಸ್ಯ ಆಚರಿಸಿದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 