ನಗರಸಭೆಯಿಂದ ವಿಜೃಂಭಣೆಯ ಗೌರಿ-ಗಣೇಶೋತ್ಸವ

ನಗರಸಭೆಯಿಂದ ವಿಜೃಂಭಣೆಯ ಗೌರಿ-ಗಣೇಶೋತ್ಸವ  A grand Gauri-Ganeshotsava celebration by the Municipal Council


ಸವದತ್ತಿ 15: ಗೌರಿ-ಗಣೇಶ ಹಬ್ಬದ ಅಂಗವಾಗಿ ಸವದತ್ತಿ ಯಲ್ಲಮ್ಮಾ ನಗರಸಭೆ ವತಿಯಿಂದ ವಿಶೇಷ ಸ್ವಾಗತ ಕಾರ್ಯಕ್ರಮ ಹಾಗೂ ಸಂಭ್ರಮಾಚರಣೆ ವಿಜೃಂಭಣೆಯಿಂದ ನಡೆಯಿತು. ನಗರಸಭೆ ಪೌರಾಯುಕ್ತ ಸಂಗನಬಸಯ್ಯ ಗದಗಿಮಠ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಉತ್ಸಾಹದಿಂದ ಪಾಲ್ಗೊಂಡರು. ಬೆಂಡ್ಬಾಜಾ ಹಾಗೂ ಸಾಂಪ್ರದಾಯಿಕ ಕಲಾ ಪ್ರಕಾರಗಳೊಂದಿಗೆ ನಡೆದ ಮೆರವಣಿಗೆಯು ಎಸ್‌ಎಲ್‌ಎಒ ಕ್ರಾಸ್, ಪೊಲೀಸ್ ಠಾಣೆ ಹಾಗೂ ಪೋಸ್ಟ್‌ ಆಫೀಸ್ ಮಾರ್ಗವಾಗಿ ಸಾಗಿತು. ನಂತರ ನಗರಸಭೆ ಕಾರ್ಯಾಲಯದ ಆವರಣದಲ್ಲಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತ ಸಂಗನಬಸಯ್ಯ ಗದಗಿಮಠ, ಹಬ್ಬಗಳನ್ನು ಎಲ್ಲರೂ ಒಗ್ಗಟ್ಟಿನಿಂದ, ಸೌಹಾರ್ದಯುತವಾಗಿ ಹಾಗೂ ಪರಿಸರಸ್ನೇಹಿಯಾಗಿ ಆಚರಿಸಬೇಕು. ವಿಘ್ನಹರ್ತ ಗಣೇಶ ಹಾಗೂ ತಾಯಿ ಗೌರಿಯ ಕೃಪೆ ನಾಡಿನ ಜನರ ಮೇಲಿರಲಿ ಎಂದು ಹಾರೈಸಿದರು. ಹಿರಿಯ ಆರೋಗ್ಯ ನೀರೀಕ್ಷಕ ಚಂದ್ರಶೇಖರ ಮಲಕಣ್ಣವರ, ಕಿರಿಯ ಆರೋಗ್ಯ ನೀರೀಕ್ಷಕ ರಾಘವೇಂದ್ರ ವಾಡಕರ ಸೇರಿದಂತೆ ನಗರಸಭೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.