ಪಟ್ಟಣದ ಹೊರವಲಯದ ಭೀಮಾ ಯುನಿವರ್ಸಲ್ ಸೆಂಟ್ರಲ್ ಶಾಲೆಯಲ್ಲಿ 77 ನೇಯ ಗಣರಾಜ್ಯೋತ್ಸವ
77th Republic Day at Bhima Universal Central School on the outskirts of the town
ಸಿಂದಗಿ 27; ಭಾರತವು ಲಿಖಿತ ಸಂವಿಧಾನ ಹೊಂದಿದ್ದು, ಎಲ್ಲಾ ವರ್ಗ, ಪಂಥದವರು ಇದರ ಅಡಿಯಲ್ಲೇ ಕಾನೂನು, ನಿಯಮ, ಕರ್ತವ್ಯ, ಜವಾಬ್ದಾರಿಯ, ಸಮಾನತೆ, ಭಾತೃತ್ವದಿಂದ ಪ್ರತಿ ಭಾರತೀಯರು ಇದರ ಅಡಿಯಲ್ಲಿ ಬದುಕು ಕಟ್ಟಿಕೊಂಡಿದ್ದೇವೆ ಎಂಬುವುದು ನಮಗೆ ಹೆಮ್ಮೆಯ ವಿಷಯ ಎಂದು ಶಾಲೆಯ ಅಧ್ಯಕ್ಷ ವಿಠ್ಠಲ ಜಿ. ಕೂಳ್ಳುರ ಹೇಳಿದರು. ಪಟ್ಟಣದ ಹೊರವಲಯದ ಭೀಮಾ ಯುನಿವರ್ಸಲ್ ಸೆಂಟ್ರಲ್ ಶಾಲೆಯಲ್ಲಿ 77 ನೇಯ ಗಣರಾಜ್ಯೋತ್ಸವದ ಧ್ವಜಾರೋಹಣ ನೇರವೇರಿಸಿ, ಭಾರತ ದೇಶ ಸ್ವಾತಂತ್ರ್ಯ ಬಂದ ನಂತರ ಜನೇವರಿ 26 ರಂದು ಸಂವಿಧಾನ ಜಾರಿಗೆ ಬಂದಿದ್ದು, ಕರುಡು ಸಮಿತಿಯ ಅಧ್ಯಕ್ಷರಾದ ಡಾಽಽ ಬಿ.ಆರ್, ಅಂಬ್ಕೇಡರವರ ನೇತೃತ್ವದಲ್ಲಿ ಸಮಿತಿ ರಚಿಸಿ ಭಾರತ ಪರಿಸರ, ಹವಾಗುಣ, ಎಲ್ಲ ವರ್ಗದವರ ಸಮಾನತೆ ದೃಷ್ಟಿಕೋಣ ಆಧಾರಿತ ಸಂವಿಧಾನ ರಚಿಸಲು ಪ್ರಾಮಾಣಿಕತೆ ಪ್ರಯತ್ನ ಮಾಡಿದ ಕೀರ್ತಿ ಅಂಬೆಡ್ಕರ್ ಅವರಿಗೆ ಸಲ್ಲುತ್ತದೆ, ಸಂವಿಧಾನ ರಚನೆಯಾಗಿ ಜಾರಿಗೆಬಂದು 77 ವರ್ಷ ಕಳೆದು ಪ್ರತಿ ವರ್ಷ ನಾವು ಗಣರಾಜ್ಯೋತ್ಸ ಆಚರಣೆ ಮಾಡುವ ಉದ್ದೇಶ ನಮ್ಮ ಭಾವಿ ಪ್ರಜೆಗಳಾದ ನಮ್ಮ ಎಲ್ಲಾ ಮಕ್ಕಳು ಸಂವಿಧಾನ ಮಹತ್ವ, ರಚನೆಯ ಕರ್ತೃ, ಸಂವಿಧಾನದ ಅಡಿಯಲ್ಲಿಯೂ ಪ್ರತಿ ಭಾರತೀಯ ಸಮಾನತೆ, ಭಾತೃತ್ವ, ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಪ್ರತಿ ವರ್ಷ ಶಾಲೆ, ಕಾಲೇಜು, ಸಂಘ ಸಂಸ್ಥೆಗಳ ಸಹಿತ ಗಣರಾಜ್ಯೋತ್ಸವ ಆಚರಿಸುತ್ತಾರೆ, ಪ್ರತಿ ಮಗುವಿಗೂ ಶಿಕ್ಷಣವನ್ನು ನೀಡಬೇಕು, ಸವಾಂರ್ಗಿಣಿ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಶಾಲೆ ಪ್ರಾಂಶುಪಾಲೆ ಶಾಹಿನ್ ಶೇಖ್ ಮಾತನಾಡಿ, ಸಂವಿಧಾನದ ರೀತ್ಯ ಕಾನೂನು, ಕಾಲಂ, ಆರ್ಟಿಕಲ್ ವಿಶೇಷತೆಯ ಕುರಿತು ಮಾತನಾಡಿ ಸಂವಿಧಾನದ ಪಿಠೀಕೆ ಓದಿದರು. ಕಾರ್ಯಕ್ರಮದಲ್ಲಿ ಶಾಲೆ ನಿರ್ದೆಶಕರಾದ ಜಿ.ಕೆ. ಪಡಗಾನೂರ, ಡಾಽಽ ಎಂ.ಎಂ. ಪಡಶೇಟ್ಟಿ ಭೀಮಾಶಂಕರ ಮಾವೂರ, ಶ್ರೀಮಂತ ಮಲ್ಲೇದ, ಭೀಮಾಶಂಕರ ತಾರಾಪೂರ, ಶರಣು ಮಾವೂರ, ಪ್ರಶಾಂತ ಕಮತಗಿ, ದತ್ತು ಮಾವೂರ, ಶಿಕ್ಷಕ ವೃಂದ ಪಾಲ್ಗೊಂಡಿದ್ದರು.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 