773 ಮಹಿಳೆಯರಿಗೆ ಅನಧಿಕೃತ ಶಸ್ತ್ರ ಚಿಕಿತ್ಸೆ: ಪರಿಹಾರ ಮನವಿ
773 women undergo unauthorized surgeries: Appeal for compensation
ರಾಣೇಬೆನ್ನೂರು 07: ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ 2010ರಿಂದ 2016 ರ ವರೆಗೂ 773ಕ್ಕೂ ಹೆಚ್ಚು ಅಮಾಯಕ ಮಹಿಳೆಯರಿಗೆ ಡಾ. ಶಾಂತ್ ಪಿ ವೈದ್ಯರು ಅನಾವಶ್ಯಕವಾಗಿ ಸಂತಾನ ಹರಣ ಚಿಕಿತ್ಸೆ ಮಾಡಿ ಮಹಿಳೆಯರ ಬದುಕಿನಲ್ಲಿ ಚಲ್ಲಾಟ ಮಾಡಿದ್ದಾರೆ. ಅಂದು ಆರೋಗ್ಯ ಸಚಿವರು ನೀಡಿದ ಭರವಸೆಯಂತೆ ತಕ್ಷಣವೇ ಪರಿಹಾರ ಘೋಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದ ಹೋರಾಟ ಸಮಿತಿಯ ಮುಖಂಡರು ಪುನ: ಮನವಿ ಸಲ್ಲಿಸಿ ಒತ್ತಾಯಿಸಿದರು.
ಗಂಗಾಜಲ, ಹುಲ್ಲತ್ತಿ, ಗೋವಿಂದ ಬಡಾವಣೆ, ಕಾಕೋಳ ನೂಕಾಪುರ, ಆನ್ವೇರಿ ಹೊನ್ನತ್ತಿ ದೇವರಗುಡ್ಡ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಬಹುತೇಕ ಲಂಬಾಣಿ ಸಮುದಾಯದ ಮಹಿಳೆಯರು ಅನಧಿಕೃತ ಗರ್ಭ ಚಿಕಿತ್ಸೆಗೆ ಒಳಗಾಗಿ ಇಂದಿಗೆ 16 ವರ್ಷಗಳು ಕಳೆದಿವೆ. ಅಂದಿನಿಂದ ಇಂದಿನವರೆಗೂ, ರಾಜ್ಯ ಮಟ್ಟದಲ್ಲಿ ಧರಣಿ, ಪ್ರತಿಭಟನೆ, ಉಪವಾಸ ಸತ್ಯಾಗ್ರ ಮೊದಲಾದ ಹೋರಾಟಗಳು ನಡೆದಿವೆ. ಹೋರಾಟದ ಅಂತಿಮ ಹಂತದಲ್ಲಿ ಬಂದು ಪರಿಹಾರ ಘೋಷಿಸುವ ಮತ್ತು ಜೀವನ ಭದ್ರತೆ ದೊರಕಿಸುವ ಭರವಸೆ ನೀಡಿದ್ದರು. ಇಲ್ಲಿವರೆಗೂ ಪರಿಹಾರ ಸಿಕ್ಕಿಲ್ಲ ಎಂದು ಪ್ರತಿಭಟನಾ ಮಹಿಳೆಯರು ಆರೋಪಿಸಿದರು.
ಅಂದಿನ ವೈದ್ಯಾಧಿಕಾರಿಗಳಾಗಿದ್ದ, ಡಾ.. ಪಿ.ಶಾಂತ್ ಅವರು 2010ರಲ್ಲಿ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ 2016ರವರೆಗೆ ಒಟ್ಟು 773 ಕ್ಕೂ ಹೆಚ್ಚು ಮಹಿಳೆಯರನ್ನು, ಯಾವುದೇ ವೈದ್ಯಕೀಯ ಕಾರಣಗಳಿಲ್ಲದೆ ಅನಧಿಕೃತವಾಗಿ ಗರ್ಭಕೋಶ ಶಸ್ತ್ರ ಚಿಕಿತ್ಸೆ ಮಾಡಿದ್ದರು. ಚಿಕಿತ್ಸೆಗೆ ಒಳಗಾದ ಮಹಿಳೆಯರಲ್ಲಿ ಈಗಾಗಲೇ ಅನಾರೋಗ್ಯಕ್ಕೆ ಒಳಗಾಗಿ 50ಕ್ಕೂ ಹೆಚ್ಚು ಮಹಿಳೆಯರು, ನಿಶಕ್ತಿಯಿಂದ, ಅಸಹಾಯಕರಾಗಿ ಸಾವು ಕಂಡಿದ್ದಾರೆ. ಉಳಿದವರು ಇಂದು ಜೀವನ ನಡೆಸುವುದು ತುಂಬಾ ಕಷ್ಟದಾಯಕ ಸ್ಥಿತಿಯಲ್ಲಿದ್ದಾರೆ.
ಅಂದು ಸರ್ಕಾರ ನೀಡಿದ ಭರವಸೆಯಂತೆ ಭದ್ರತೆ ಮತ್ತು ಪರಿಹಾರ ಘೋಷಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು. ಬರೋಬ್ಬರಿ 16 ವರ್ಷಗಳು ಗತಿಸುತ್ತಲಿವೆ, ಇಂದು ಪುನಹ ತನಿಖೆಯಾಗಲಿ ಎನ್ನುವ ನೆಪದಲ್ಲಿ ಅನಾವಶ್ಯಕವಾಗಿ ಕಾಲಹರಣ ಮಾಡಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಈಗಾಗಲೇ ಸರ್ಕಾರ ಮತ್ತು ಆರೋಗ್ಯ ಇಲಾಖೆ ಅಂದು ತಪಾಸಣೆ ನಡೆಸಿ ಅಕ್ರಮ ಗರ್ಭಪಾತಕ್ಕೆ ಒಳಗಾಗಿದ್ದಾರೆ ಎಂದು ದೃಢೀಕರಿಸಿ ವೈದ್ಯಕೀಯ ವರದಿ ನೀಡಿದ್ದಾರೆ. ಮತ್ತೆ ತನಿಖೆಯ ನೆಪ ಮಾಡಲು ಮುಂದಾಗಿರುವ ಕ್ರಮವನ್ನು ಖಂಡಿಸಿ, ಪ್ರತಿಭಟನಾ ನಿರತರು ಬೆಳಗಾವಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಾ. ಮಾಯಣ್ಣನವರ ಮತ್ತು ಡಾ. ಆಡಳಿತ ವೈದ್ಯಾಧಿಕಾರಿ ಡಾ ರಾಜು ಶಿರೂರ, ಅವರಿಗೆ ತಮ್ಮ ಮನವಿ ಸಲ್ಲಿಸಿದರು.
ಪ್ರಕರಣವು 2016 ರಿಂದ 2026 ರ ವರೆಗೂ ನಿರಂತರವಾಗಿ ನಡೆಯುತ್ತಿದ್ದು ಕಳೆದ 9 ವರ್ಷಗಳಿಂದ ಸರ್ಕಾರದ ಗಮನಕ್ಕೆ ತರುವ ಅನೇಕ ಹೋರಾಟಗಳನ್ನ ಮಾಡಲಾಗಿದೆ. ಪ್ರತಿ ಅಧಿವೇಶನದಲ್ಲಿ ಚರ್ಚೆಸಿಲಾಗಿದೆ ಆದರೂ ಸರ್ಕಾರ ಸಂತ್ರಸ್ತ ಮಹಿಳಾ ಹೋರಾಟದ ದಿಕ್ಕುತಪ್ಪಿಸಲು, ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ತನಿಖೆ ನೆಪದಲ್ಲಿ ಪ್ರಕರಣವನ್ನು ಮುಂದೂಡುತ್ತಾ ಸಾಗಿದೆ. ಎಂದು ಬಲವಾಗಿ ಆರೋಪಿಸಿದರು. ಮನವಿ ಸಲ್ಲಿಕೆ ಮುಂಚೂಣಿಯಲ್ಲಿ ರೈತ ಮುಖಂಡ ಹನುಮಂತಪ್ಪ ಕಬ್ಬಾರ, ಜಗದೀಶ ಕೆರೋಡಿ, ಲಲಿತವ್ವ ಲಮಾಣಿ, ಲಕ್ಷ್ಮವ್ವ ಲಮಾಣಿ, ಗಂಗವ್ವ ಲಮಾಣಿ, ಶೈಲವ್ವ ಹರನಗಿರಿ, ಹೊಳಿಯಪ್ಪ ಲಮಾಣಿ, ರಾಜು ಓಲೆಕಾರ, ಹುಚ್ಚೆಂಗೆಪ್ಪ ಹರನಗಿರಿ, ಅಜ್ಜಪ್ಪ ಲಮಾಣಿ ಸೇರಿದಂತೆ ಮೊದಲಾದವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 