ಹೆಚ್.ಎಸ್.ಕೆ ಪಾಲಿಟೆಕ್ನಿಕ್ನಲ್ಲಿ37ನೇ ರಸ್ತೆ ಸುರಕ್ಷತಾ ಮಾಸಾಚರಣೆ
37th Road Safety Month Celebration at HSK Polytechnic
ಬಳ್ಳಾರಿ 21: ಜಿಲ್ಲೆಯ ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಿನ್ನೆ ಬಳ್ಳಾರಿಯ ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ“37ನೇ ರಸ್ತೆ ಸುರಕ್ಷತಾ ಮಾಸಾಚರಣೆ”ಯನ್ನು ಅಚರಿಸಲಾಯಿತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಬಿ.ಶ್ರೀಶೈಲಗೌಡರವರು ವಹಿಸಿದ್ದರುಮುಖ್ಯ ಅತಿಥಿಗಳಾಗಿ ಹಿರಿಯ ಇನ್ಸ್ ಪೆಕ್ಟರ್ ರಫೀಕ್ ಅಹಮದ್, ವಿಶ್ವನಾಥ್, ಮಲ್ಲಿಕಾರ್ಜುನ್ ಎಲ್ಲಾ ವಿಭಾಗದ ವಿಧ್ಯಾರ್ಥಿ ವಿದ್ಯಾರ್ಥಿನಿಯರು, ಮುಖ್ಯಸ್ಥರು , ಸಿಬ್ಬಂದಿ ವರ್ಗದವರು ಹಾಜರಿದ್ದರು.
ಕಾಲೇಜಿನ ವತಿಯಿಂದ ಸನ್ಮಾನ ಸ್ವೀಕರಿಸಿದ ರಫೀಕ್ ಅಹಮದ್ ಮಾತನಾಡುತ್ತಾ, ರಸ್ತೆ ಸುರಕ್ಷತಾ ನಿಯಮಗಳಬಗ್ಗೆ ವಿಸ್ತಾರವಾಗಿ ತಿಳಿಸಿದರು ಇದೇ ಸಮಯದಲ್ಲಿ ರಸ್ತೆ ಸುರಕ್ಷತೆಗೆ ಅನುಸರಿಸಬೇಕಾದ ನಿಯಮಗಳು ಮತ್ತು ಅಜಾಗರೂಕ ವಾಹನ ಚಾಲನೆಯ ದುಷ್ಪರಿಣಾಮಗಳ ಸಾಕ್ಷ್ಯಚಿತ್ರದ ಮೂಲಕ ವಿವರಿಸಿದರು.ಪರವಾನಿಗೆಇಲ್ಲದೆ ಮತ್ತು18 ವರ್ಷದೊಳಗಿನವರು ವಾಹನ ಚಲಾಯಿಸಿದರೆ ಕಟ್ಟ ಬೇಕಾದದಂಡ ಹಾಗೂ ಜೈಲು ಶಿಕ್ಷೆಯ ಬಗ್ಗೆ ಮಾಹಿತಿ ನೀಡಿದರುಶ್ರೀ ಮಲ್ಲಿಕಾರ್ಜುನ್ ಕಾರ್ಯಕ್ರಮದ ನಿರೊಪಣೆ ಮಾಡಿದರು ಮತ್ತು ವಂದನಾರೆ್ಣಯನ್ನು ವಿಶ್ವನಾಥ್ರವರು ನಡೆಸಿಕೊಟ್ಟರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 