ಶಾಲಾ ಮಕ್ಕಳಿಗೆ ಪೊಲೀಸ್ ಇಲಾಖೆಯಿಂದ ‘ತೆರೆದ ಮನೆ’ ಕಾರ್ಯಕ್ರಮ

	 ಶಾಲಾ ಮಕ್ಕಳಿಗೆ ಪೊಲೀಸ್ ಇಲಾಖೆಯಿಂದ ‘ತೆರೆದ ಮನೆ’ ಕಾರ್ಯಕ್ರಮ 'Open House' program for school children by the Police Department

ಲೋಕದರ್ಶನ ವರದಿ 

ದಾಂಡೇಲಿ 20 : ದಾಂಡೇಲಿ ನಗರ ಪೋಲಿಸ್ ಠಾಣೆಯಲ್ಲಿ ಲಯನ್ಸ್‌ ಇಂಗ್ಲೀಷ್ ಮಾಧ್ಯಮ  ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗಾಗಿ ತೆರೆದ ಮನೆ ಕಾರ್ಯಕ್ರಮವನ್ನು ಪೋಲಿಸ್ ಇಲಾಖೆಯ ವತಿಯಿಂದ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಅಪರಾಧ ವಿಭಾಗದ  ಪಿ.ಎಸ್‌.ಐ ಕಿರಣ ಪಾಟೀಲ್ ಮಾತನಾಡಿ ವಿದ್ಯಾರ್ಥಿಗಳಿಗೆ ಸಂಚಾರಿ ಸುವ್ಯವಸ್ಥೆ ಕುರಿತು ಮಾಹಿತಿ ನೀಡಿ, ಅಪ್ರಾಪ್ತರು ವಾಹನ ಚಾಲನೆ ಮಾಡಬಾರದು. ಅದರಿಂದಾಗುವ ಕಾನೂನಿನ ತೊಡಕುಗಳ ಕುರಿತು  ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಎ. ಎಸ್ ಐ ಮೆಹಬೂಬ ನಿಂಬುವಾಲೆ ವಿದ್ಯಾರ್ಥಿಗಳಿಗೆ ನೈತಿಕ ಪಾಠ ಮಾಡಿದರು.  ವಿದ್ಯಾರ್ಥಿಗಳು ಮತ್ತು ಪೋಲಿಸರ ನಡುವಿನ ಸಂಬಂಧ ಸೌಹಾರ್ದತೆಯಿಂದ ಕೂಡಿರಬೇಕು. ಮಕ್ಕಳು ಸಮಸ್ಯೆಗಳಾದಲ್ಲಿ ಹೆದರದೆ ಪೋಲಿಸರಿಗೆ ಮಾಹಿತಿ ನೀಡಲು ಹಿಂಜರಿಯಬಾರದು.