‘ಯೋಗ, ಆರೋಗ್ಯದ ಜೀವನಾಡಿ’
'Yoga, the lifeline of health'
ಗದಗ 08: ನಗರದ ಕೆ. ಎಲ್. ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎನ್. ಎಸ್. ಎಸ್. ಘಟಕದ ವತಿಯಿಂದ ದಿ. 08 ಶನಿವಾರ ರಂದು (ಸರ್ದಾರ್ ಅ150) ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮದಿನಾಚರಣೆಯ ಅಂಗವಾಗಿ ಯೋಗ ಮತ್ತು ಆರೋಗ್ಯದ ಬಗ್ಗೆ ಅವಧಿಯನ್ನು ಆಯೋಜಿಸಲಾಗಿತ್ತು.
ಮಹಾವಿದ್ಯಾಲಯದ ಎನ್. ಎಸ್. ಎಸ್. ಘಟಕದ ಕಾರ್ಯಕ್ರಮಾಧಿಕಾರಿಗಳಾದ ಪ್ರೊ. ವಾಗೀಶ ಗು. ರೇಶ್ಮಿ ಅವರು ಎನ್. ಎಸ್. ಎಸ್. ಘಟಕದ ಎಲ್ಲ ಸ್ವಯಂಸೇವಕ ಮತ್ತು ಸೇವಕಿಯರಿಗೆ ಯೋಗವನ್ನು ಮಾಡಿಸಿದರು, ವಜ್ರಾಸನ, ಚಕ್ರಾಸನ, ಪದ್ಮಾಸನ, ಸೂರ್ಯನಮಸ್ಕಾರ, ಸೂರ್ಯನಮಸ್ಕಾರ ಮಂತ್ರಗಳು, ಶವಾಸನ, ವೀರಭದ್ರಾಸನ, ಪರ್ವತಾಸನ, ವೃಕ್ಷಾಸನ ಇದೆ ರೀತಿ ವಿವಿಧ ಪ್ರತಿ ಆಸನದ ಪ್ರಯೋಜನಗಳನ್ನು ತಿಳಿಸಿದರು.
ಮಹಾವಿದ್ಯಾಲಯದ ಎನ್. ಎಸ್. ಎಸ್. ಘಟಕದ ಕಾರ್ಯಕ್ರಮಾಧಿಕಾರಿಗಳಾದ ಪ್ರೊ. ವಾಗೀಶ ಗು. ರೇಶ್ಮಿ, ಎನ್. ಎಸ್. ಎಸ್. ಘಟಕದ ಕಾರ್ಯನಿರ್ವಾಹಕರಾದ ಕುಮಾರಿ. ನೀಲಮ್ಮ ಸೀತಾರಳ್ಳಿ, ಎನ್. ಎಸ್. ಎಸ್. ಘಟಕದ ಎಲ್ಲ ತಂಡಗಳ ನಾಯಕ ಮತ್ತು ನಾಯಕಿಯರು ಹಾಗೂ ಎನ್. ಎಸ್. ಎಸ್. ಘಟಕದ ಎಲ್ಲ ಸ್ವಯಂ ಸೇವಕ ಮತ್ತು ಸೇವಕಿಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 