'ತಂತ್ರಜ್ಞಾನದ ಬಳಕೆಯಿಂದಲೂ ಪರಿಸರಕ್ಕೆ ಹೆಚ್ಚಿನ ಕೊಡುಗೆ ನೀಡಬಹುದು'
'We can also contribute a lot to the environment through the use of technology'
ಲೋಕದರ್ಶನ ವರದಿ
ಬೆಳಗಾವಿ 08: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಕೆಎಲ್ ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಇತ್ತೀಚೆಗೆ ಏರಿ್ಡಸಲಾಗಿತ್ತು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್ ಎಂ ದಯಾನಂದ ಅವರು ಮಾತನಾಡಿ, ತಂತ್ರಜ್ಞಾಣದ ಬಳಕೆಯಿಂದಲೂ ಪರಿಸರಕ್ಕೆ ಹೆಚ್ಚಿನ ಕೊಡುಗೆ ನೀಡಬಹುದು. ಮುಖ್ಯವಾಗಿ ಆಸ್ಪತ್ರೆ ಹಾಗೂ ಇನ್ನೀತರ ಸಂಸ್ಥೆಗಳು ಕಾಗದ ರಹಿತ ಆಡಳಿತಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕು. ಸಾರ್ವಜನಿಕ ಸಾರಿಗೆಯನ್ನು ಉಪಯೋಗಿಸಬೇಕು. ಅಲ್ಲದೇ ಚಿಕ್ಕ ಚಿಕ್ಕ ಅರಣ್ಯ ಹಾಗೂ ಪ್ರತಿಯೊಬ್ಬರೂ ತಾಯಿಯ ಹೆಸರಿನಲ್ಲಿ ಸಸಿ ನೆಟ್ಟು ಪೋಷಿಸಬೇಕೆಂದು ಕರೆ ನೀಡಿದರು.
ಕಳೆದ 23 ವರ್ಷಗಳಿಂದ ಆಸ್ಪತ್ರೆಯಲ್ಲಿ ಕಸವನ್ನು ಬೇರ್ಡಪಸಿ ವಿಲೆವಾರಿ ಮಾಡಲಾಗುತ್ತಿದೆ. ಅಪಾಯಕಾರಿ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೆವಾರಿ ಮಾಡಿ, ಪರಿಸರಕ್ಕೆ ಹಾನಿಯಾಗದಂತೆ ಎಚ್ಚರಿಕೆವಹಿಸಲಾಗುತ್ತಿದೆ. ಪ್ರತಿಯೊಂದು ಸಂಸ್ಥೆಗಳು ಹಸಿರು ಕ್ಯಾಂಪಸ ಅಳವಡಿಸಿಕೊಂಡು ಪರಿಸಕ್ಕೆ ಅವಶ್ಯವಿರುವ ಕೊಡುಗೆಯನ್ನು ನೀಡಬೇಕು ಎಂದು ತಿಳಿಸಿದರು.
ಆಸ್ಪತ್ರೆಯ ಕ್ಲಿನಿಕಲ್ ಡೈರೆಕ್ಟರ ಭಾರತದಲ್ಲಿಯೇ ಅತ್ಯಂತ ಒಳ್ಳೆಯ ಕ್ಯಾಂಪಸ್ ಎಂಬ ಬಿರಿದು ಪಡೆದುಕೊಂಡಿರುವ ಆಸ್ಪತ್ರೆಯು ಪರಿಸರಕ್ಕೆ ಅನುಕೂಲವಾಗುವ ಅನೇಕ ಯೋಜನೆಗಳನ್ನು ರೂಪಿಸಿದೆ. ಕ್ಯಾನ್ಸರಕಾರಕ ಹಾಗೂ ಮರುಬಳಕೆಯಾಗದ ಪ್ಲಾಸ್ಟಿಕ ತ್ಯಜಿಸಬೇಕು. ಪರಿಸರ ರಕ್ಷಣೆ ಹಾಗೂ ಅದನ್ನುಪೋಷಿಸುವ ನಿಟ್ಟಿನಲ್ಲಿ ಸ್ವಯಂ ಜಾಗೃತರಾಗಲು ಮೊದಲ ಆದ್ಯತೆ ನೀಡಿ, ನಂತರ ಇಒನ್ನೊಬ್ಬರನ್ನು ಜಾಗೃತಗೊಳಿಸಬೇಕೆ ಎಂದು ಸಲಹೆ ನೀಡಿದರು.
ಚಾರಿಟೇಬಲ್ ಆಸ್ಪತ್ರೆಯ ವೈದ್ಯಕೀಯ ನೀರೀಕ್ಷಕರಾದ ಡಾ. ಆರಿಫ್ ಮಾಲ್ದಾರ, ಮೈಕ್ರೊಬಯಾಲಾಜಿಸ್ಟ ಡಾ. ಪ್ರೀತಿ ಮಾಸ್ತೆ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಡಾ. ಬಸವರಾಜ ಬಿಜ್ಜರಗಿ, ಪ್ರಶಾಂತ ದೇಸಾಯಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಡಾ. ನಿರೂಪಿಸಿದರು. ಡಾ. ದೀಪಕ ಕರನಮ್ ಸ್ವಾಗತಿಸಿದರು. ಡಾ. ವೀಣಾ ವಂದಿಸಿದರು.
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ 