‘ಮಕ್ಕಳಲ್ಲಿರುವ ಕಲೆಯನ್ನು ಗುರುತಿಸುವ ಕಾರ್ಯ ರಂಗಾಯಣ ಮಾಡಿದೆ’
'Rangayana has done the work of recognizing the art in children'
ಲೋಕದರ್ಶನ ವರದಿ
ಧಾರವಾಡ 02: ಇಂದಿನ ಆಧುನಿಕ ಜಗತ್ತಿನಲ್ಲಿ ಮಕ್ಕಳು ಕೇವಲ ಓದಿಗೆ ಅವಲಂಬಿತರಾಗಿರುವ ಮಕ್ಕಳ ಸಾಂಸ್ಕೃತಿಕ ಕಲೆಗಳನ್ನು ಗುರುತಿಸಿ, ರಂಗಾಯಣವು ಪ್ರೋತ್ಸಾಹ ನೀಡುತ್ತಿದೆ ಎಂದು ಸಾಹಿತಿಗಳಾದ ಡಾ. ಬಸು ಬೇವಿನಗಿಡದ ಅವರು ಹೇಳಿದರು.
ರಂಗಾಯಣ ಧಾರವಾಡವು ಪಂ.ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ “ಅಭಿನಯ-ಅಭಿವ್ಯಕ್ತಿ” ಧ್ಯೇಯವಾಕ್ಯದಡಿ ಆಯೋಜಿಸಿದ್ದ “ಮಕ್ಕಳ ರಂಗ ತರಬೇತಿ ಶಿಬಿರದ ಸಮಾರೋಪ ಹಾಗೂ ಚಿಣ್ಣರ ನಾಟಕೋತ್ಸವ”ವ ಉದ್ಘಾಟಿಸಿ, ಅವರು ಮಾತನಾಡಿದರು. ರಂಗಭೂಮಿ ಎಂದರೆ ಸಾಹಿತ್ಯದ ಭಂಡಾರ. ಅದರಲ್ಲಿ ಅಭಿನಯ, ಅಕ್ಷರಗಳ ಉಚ್ಛಾರಣೆ, ಪದಗಳನ್ನು ಬಳಸುವ ಬಗೆ, ಭಾವವನ್ನು ವ್ಯಕ್ತಪಡಿಸುವ ವಿಧಾನ ಎಲ್ಲವೂ ಇದೆ. ಇಂತಹ ರಂಗಕಲೆಯನ್ನು ರೂಢಿಸಿಕೊಳ್ಳುವ ಮಕ್ಕಳು ಉತ್ತಮ ಜೀವನವನ್ನು ರೂಪಿಸಿಕೊಳ್ಳುತ್ತಾರೆ. ಮಕ್ಕಳಲ್ಲಿರುವ ಪ್ರತಿಭೆಗೆ ಪೂರಕ ವಾತಾವರಣವನ್ನು ನೀಡುವ ಕಾರ್ಯವನ್ನು ಪಾಲಕರು ಮಾಡಬೇಕು. ಅಂದಾಗ ಮಾತ್ರ ಮಕ್ಕಳು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ. ರಂಗಾಯಣವು ಈ ಶಿಬಿರದ ಮೂಲಕ ಮಕ್ಕಳ ನಾಟಕಗಳನ್ನು ಪ್ರೋತ್ಸಾಹಿಸುತ್ತಿದೆ ಎಂದರು.
ರಂಗಾಯಣ ನಿರ್ದೇಶಕರಾದ ಝಕೀರ ನದಾಫ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿ, ರಂಗಭೂಮಿಯು ಪರಿಣಾಮಕಾರಿಯಾಗಿ ಪ್ರಭಾವ ಬೀರುವ ಮಾಧ್ಯಮವಾಗಿದೆ. ಇಲ್ಲಿ ನೀಡುವ ತರಬೇತಿ, ಚಟುವಟಿಕೆಗಳು ಕೇವಲ ಜೀವನವನ್ನು ರೂಪಿಸುವುದಲ್ಲದೆ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡುತ್ತದೆ. ಆದ್ದರಿಂದ ಮಕ್ಕಳಿಗೆ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಲು ಪಾಲಕರು ಉತ್ತೇಜನ ನೀಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಚಿಣ್ಣರಮೇಳದ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು. ರಂಗಾಯಣ ಆಡಳಿತಾಧಿಕಾರಿಗಳಾದ ಶಶಿಕಲಾ ಹುಡೇದ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿಣ್ಣರಮೇಳದ ಸಂಚಾಲಕರಾದ ಅರುಣಕುಮಾರ ಮೇದಾರ, ತರಬೇತುದಾರರಾದ ರಾಜ್ ಕವಡೆನವರ, ಸಂಗೀತಗಾರರಾದ ಸುನಂದಾ ನಿಂಬನಗೌಡರ ಅವರು ಉಪಸ್ಥಿತರಿದ್ದರು. ನಂತರ ವಾಚಿಕ ತಂಡ ಕುಣಿಯೋನು ಬಾರ, ಆಹಾರ್ಯ ತಂಡ ಹಾರೋಣ ಬಾ ಸಮೂಹ ನೃತ್ಯಗಳನ್ನು ಹಾಗೂ “ಕೆಂಪು ಹೂ” ನಾಟಕವನ್ನು ಆಂಗಿಕ ತಂಡ, “ಸಾಯೋ ಆಟ” ನಾಟಕವನ್ನು ಸಾತ್ವಿಕ ತಂಡ ಪ್ರಸ್ತುತಪಡಿಸಿದರು. ನಾಟಕಗಳನ್ನು ಪ್ರದರ್ಶಿಸಿದ ಚಿಣ್ಣರರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಕೀರ್ತಿ ಸಿಂದೋಗಿ ಹಾಗೂ ಸುನೀಲ ಬೆಳಗಾವಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 