ಅಕ್ಟೋಬರ್ 11ರಂದು ಭೋವಿ ವಡ್ಡರ ಸಂಘದಿಂದ ಪ್ರತಿಭಾ ಕಾರಂಜಿ ಕಾರ್ಯಕ್ರಮ : ಎಂ ಟಿ ಮಲ್ಲೇಶ್
'Pratibha Karanji' program by the Bhovi Vaddara Sangha on October 11: M.T. Mallesh
ಬಳ್ಳಾರಿ ಸೆಪ್ಟೆಂಬರ್ 9 : ಕರ್ನಾಟಕ ರಾಜ್ಯ ಭೋವಿ ವಡ್ಡರ ಸಂಘದ ವತಿಯಿಂದ ಅಕ್ಟೋಬರ್ 11ರಂದು ನಗರದ ದೊಡ್ಡನಗೌಡ ರಂಗಮಂದಿರದಲ್ಲಿ ಭೋವಿ ವಡ್ಡರ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಉಪಾಧ್ಯಕ್ಷ ಎಂ ಟಿ ಮಲ್ಲೇಶ ತಿಳಿಸಿದರು. ಈ ಕುರಿತು ಸಂಘದ ವತಿಯಿಂದ ಇಂದು ಬುಧವಾರದಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಎಂ ಟಿ ಮಲ್ಲೇಶ್, ಬೋವಿ ವಡ್ಡರ ಸಮುದಾಯ ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಬಹಳ ಹಿಂದುಳಿದ ಸಮುದಾಯವಾಗಿದೆ ಪರಿಶಿಷ್ಟ ಜಾತಿಯಲ್ಲಿ ನಮ್ಮ ಸಮಾಜ ಸೇರಿದ್ದರು ಸಹ ನಮ್ಮ ಸಮಾಜ ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿಲ್ಲ ಹಿಂದುಳಿದ ನಮ್ಮಭೋವಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.
ಈ ಪ್ರತಿಭಾ ಕಾರಂಜಿಯಲ್ಲಿ 10ನೇ ತರಗತಿ ಮತ್ತು 12ನೇ ತರಗತಿಯ ಅಂಕಗಳನ್ನು ಒಟ್ಟುಗೂಡಿಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಪ್ರಥಮ ಬಹುಮಾನವಾಗಿ 15000 ಎರಡನೇ ಬಹುಮಾನವಾಗಿ 10,000 ಮೂರನೇ ಬಹುಮಾನವಾಗಿ 8,000ಗಳನ್ನು ರಾಜ್ಯದ ಪ್ರತಿ ಜಿಲ್ಲೆಯ ಮೂರು ಸೇರಿದಂತೆ ಒಟ್ಟು ನೂರು ಜನ ವಿದ್ಯಾರ್ಥಿಗಳಿಗೆ ಬಹುಮಾನದ ಮೊತ್ತವನ್ನು ನೀಡಲಾಗುವುದು. ಈ ಕಾರ್ಯಕ್ರಮಕ್ಕಾಗಿ ನಾವು ಯಾರಿಂದಲೂ ದೇಣಿಗೆಯನ್ನು ಪಡೆದಿಲ್ಲ ಬೆಂಗಳೂರಿನಲ್ಲಿ ನಮ್ಮ ಕಟ್ಟಡಕ್ಕೆ ಬರುವ ಬಾಡಿಗೆಯಿಂದ ಈ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ ಎಂದು ರಾಜ್ಯ ಕಾರ್ಯದರ್ಶಿ ಚೌಡಯ್ಯ ತಿಳಿಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ಬಂಡಿಹಟ್ಟಿ ಮಹೇಶ್ ಪ್ರಕಾಶ್ ಜಿಲ್ಲಾಧ್ಯಕ್ಷ ರಾಮಾಂಜಿನಿ ತೂಪು ವೆಂಕಟೇಶ್ ಗುಗರಹಟ್ಟಿ ವಿ. ಬಿ ಮಲ್ಲಯ್ಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಎಲ್ಲಮ್ಮ ಮಹಿಳಾ ಘಟಕದ ಭವಾನಿ ಕಪ್ಪುಗಲ್ಲು ನಾರಾಯಣ ಗೋನಾಳ ಹುಲುಗಪ್ಪ ಹನುಮಂತ ಹ್ಯಾಲ್ಪಿ ಸೇರಿದಂತೆ ಇತರರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 