‘ಮಕ್ಕಳ ಓದಿಗಾಗಿ ಪಾಲಕರು ಮೊಬೈಲ, ಟಿವಿಗಳನ್ನು ಬಂದ್ ಮಾಡಿ’
'Parents should turn off mobile phones and TVs for children's studies'
ರಾಯಬಾಗ 09: ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಿ ತಂದೆತಾಯಿಗಳಿಗೆ, ಗುರುಗಳಿಗೆ, ಶಾಲೆಗೆ ಕೀರ್ತಿ ತರಬೇಕೆಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶನಿವಾರ ಪಟ್ಟಣದ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆದರ್ಶ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ, ಬಹುಮಾನ ವಿತರಣಾ ಸಮಾರಂಭ ಹಾಗೂ ವಿದ್ಯಾರ್ಥಿಗಳಿಂದ ತಂದೆ-ತಾಯಿಯಂದಿರ ಪಾದ ಪೂಜೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಮಕ್ಕಳ ಓದಿಗಾಗಿ ಪಾಲಕರು ಮೊಬೈಲ, ಟಿವಿಗಳನ್ನು ಬಂದ್ ಮಾಡಿ ಅವರ ಓದಿಗೆ ಬೆಂಬಲವಾಗಿ ನಿಲ್ಲಬೇಕು.ಮಕ್ಕಳು ತಂದೆ ತಾಯಿಯಂದಿರ ಕಷ್ಟ ಅರಿತು ನಡೆಯಬೇಕೆಂದರು. ಚಿಕ್ಕೋಡಿ ನಿವೃತ್ತ ಪ್ರಾಧ್ಯಾಪಕ ಡಾ.ಜೀವಂಧರ ಕೇತಪ್ಪನವರ ಮಾತನಾಡಿ, ವಿದ್ಯಾರ್ಥಿಗಳು ನಿತ್ಯ ಧ್ಯಾನದೊಂದಿಗೆ ಸಹಜ ಶ್ವಾಸ ಕಡೆಗೆ ಗಮನ ಹರಿಸಿದರೆ ಉತ್ತಮ ಆರೋಗ್ಯದ ಜೊತೆಗೆ ಸ್ಮರಣ ಶಕ್ತಿ ಹೆಚ್ಚುತ್ತದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ, ಶಿವಶರಣ ಮಾದರ ಚೆನ್ನಯ್ಯ ಸೇವಾ ಸಮಿತಿಯ ರಾಜ್ಯ ಉಪಾಧ್ಯಕ್ಷ ಅರುಣ ಐಹೊಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.ಜಿ.ಪಂ.ಮಾಜಿ ಸದಸ್ಯೆ ಸುಶೀಲಾ ಐಹೊಳೆ,ಮನೋಹರ ಪೂಜೇರಿ, ಆರ್.ಎಮ್.ಕುರಾಡೆ, ಪೃಥ್ವಿರಾಜ ಜಾಧವ, ಸದಾಶಿವ ಘೋರೆ್ಡ, ಅಣ್ಣಾಸಾಹೇಬ ಖೆಮಲಾಪೂರೆ, ಸದಾನಂದ ಹಳಿಂಗಳಿ, ಎಸ್. ಎಸ್.ಕಾಂಬಳೆ, ಸಂಗನಗೌಡ ಐಹೊಳೆ, ಶಿವಾನಂದ ಐಹೊಳೆ, ಮಹೇಶ ಕರಮಡಿ, ಬಿ.ಬಿ.ಪೂಜಾರ ಸೇರಿ ಅನೇಕರು ಇದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 