’ಕ್ಷೀರ ಪೈಲಟ್’ ಯೋಜನೆಗೆ ಚಾಲನೆ
'Ksheera Pilot' project launched
ಲೋಕದರ್ಶನ ವರದಿ
ವಿಜಯಪುರ 11. ಜಿಲ್ಲೆಯ ಬಬಲೇಶ್ವರ ಹಾಗೂ ತಿಕೋಟಾ ತಾಲೂಕಿನ ಆಯ್ದ 20 ಜನ ರೈತರ ತಂಡವು ತುಮಕೂರು ಜಿಲ್ಲೆಯ ತಿಪಟೂರಿನಲ್ಲಿರುವ ಅಕ್ಷಯ ಕಲ್ಪ ಕ್ಯಾಂಪಸ್‌ಗೆ ತರಬೇತಿಗೆ ತೆರಳಿದೆ. ನಿನ್ನೆ ಬುಧವಾರ ಸಂಜೆ ತಿಪಟೂರು ಅಕ್ಷಯಕಲ್ಪ ಕ್ಯಾಂಪಸ್ ಗೆ ತೆರಳುತ್ತಿರುವ ರೈತರಿಗೆ ಶುಭಕೋರಿದ ಬಿ.ಎಲ್.ಡಿ.ಇ ಡೀಮ್ಡ್ ವಿವಿ ಸಮಕುಲಾಧಿಪತಿ ಡಾ.ವೈ.ಎಂ.ಜಯರಾಜ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯಲ್ಲಿ ಸುಸ್ಥಿರ ಹೈನುಗಾರಿಕೆ ಮತ್ತು ತೋಟಗಾರಿಕೆಯನ್ನು ಉತ್ತೇಜಿಸಲು ಬಿ.ಎಲ್.ಡಿ.ಇ ಸಂಸ್ಥೆ, ಕೃಷಿಕಲ್ಪ ಫೌಂಡೇಶನ್ ಹಾಗೂ ಅಕ್ಷಯಕಲ್ಪ ಫೌಂಡೇಶನ್‌ಗಳ ಜಂಟಿ ಆಶ್ರಯದಲ್ಲಿ ಸಚಿವ ಎಂ.ಬಿ.ಪಾಟೀಲರ ಮಾರ್ಗದರ್ಶನದಲ್ಲಿ ಈ ’ಕ್ಷೀರ ಪೈಲಟ್’ ಯೋಜನೆಗೆ ಚಾಲನೆ ನೀಡಲಾಗಿತ್ತು. ಇದರನ್ವಯ ಬಬಲೇಶ್ವರ ತಾಲೂಕಿನ ನಿಡೋಣಿ, ಕುಮಠೆ ಹಾಗೂ ನಾಗರಾಳ ಮತ್ತು ತಿಕೋಟಾ ತಾಲೂಕಿನ ಜಾಲಗೇರಿ, ಡೋಕಳೆವಾಡಿ ಗ್ರಾಮಗಳ ಉತ್ಸಾಹಿ ರೈತರು ಈ ತರಬೇತಿಗಾಗಿ ತೆರಳಿದ್ದಾರೆ.
ವೈಜ್ಞಾನಿಕ ಮತ್ತು ಸಾವಯವ ಹೈನುಗಾರಿಕೆಯಲ್ಲಿ ದೇಶದಲ್ಲೇ ಮಾದರಿ ಎನಿಸಿಕೊಂಡಿರುವ ಅಕ್ಷಯ ಕಲ್ಪ ಸಂಸ್ಥೆಯ ಆವರಣದಲ್ಲಿ ರೈತರು ಸುಧಾರಿತ ತಂತ್ರಜ್ಞಾನಗಳ ನೇರ ಪ್ರಾತ್ಯಕ್ಷಿಕೆ ಹಾಗೂ ತರಬೇತಿಯನ್ನು ಪಡೆಯಲಿದ್ದಾರೆ ಎಂದರು.ಬಿ.ಎಲ್.ಡಿ.ಇ ಡೀಮ್ಡ್ ವಿವಿ ರಜಿಸ್ಟ್ರಾರ್ ಡಾ. ಆರಿ್ವ.ಕುಲಕರ್ಣಿ ಮಾತನಾಡಿ, ರೈತರು ತರಬೇತಿಯಲ್ಲಿ ವೈಜ್ಞಾನಿಕ ಕೊಟ್ಟಿಗೆ ನಿರ್ವಹಣೆಯಲ್ಲಿ ಹಸುಗಳ ಆರೋಗ್ಯ, ಸ್ವಚ್ಛತೆ ಮತ್ತು ಆಧುನಿಕ ತಂತ್ರಜ್ಞಾನದ ಮೂಲಕ ಹೈನುಗಾರಿಕೆಯನ್ನು ಲಾಭದಾಯಕವಾಗಿಸುವುದು ಹೇಗೆ ಎಂಬುದನ್ನು ಮತ್ತು ಸಾವಯವ ಹಾಲು ಉತ್ಪಾದನೆಯಲ್ಲಿ ರಾಸಾಯನಿಕ ಮುಕ್ತ ಹಾಗೂ ಗುಣಮಟ್ಟದ ಹಾಲಿನ ಉತ್ಪಾದನೆಗೆ ಪೂರಕವಾದ ತರಬೇತಿ ಪಡೆದು, ತಿಪಟೂರು ಭಾಗದ ರೈತರು ಅಕ್ಷಯ ಕಲ್ಪ ಮಾದರಿಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾದಂತೆ, ವಿಜಯಪುರ ಜಿಲ್ಲೆಯಲ್ಲೂ ಶ್ವೇತ ಕ್ರಾಂತಿ ಸೃಷ್ಟಿಸುವುದು ಹೇಗೆ ಎಂಬುದನ್ನು ಮಾಹಿತಿ ಪಡೆಯಲಿದ್ದಾರೆ ಎಂದರು. ಪ್ರಸ್ತುತ ತರಬೇತಿಗೆ ತೆರಳಿರುವ 20 ರೈತರು ಅಲ್ಲಿನ ತಂತ್ರಜ್ಞಾನ, ಶೆಡ್ ನಿರ್ಮಾಣ, ಹಸುಗಳ ಆಹಾರ ಕ್ರಮ ಮೇವು ನಿರ್ವಹಣೆ, ಕರು, ಕೋಳಿ ಸಾಕಾಣಿಕೆ ಮತ್ತು ಸಾವಯುವ ಪದ್ಧತಿಯಲ್ಲಿ ವಿವಿಧ ತರಕಾರಿ ಬೆಳೆ ಬೆಳೆಯುವ ಕುರಿತು ಅಧ್ಯಯನ ಮಾಡಿ ಬರಲಿದ್ದಾರೆ.
ಈ ತರಬೇತಿಯು ಜಿಲ್ಲೆಯ ಹೈನುಗಾರಿಕಾ ಕ್ಷೇತ್ರಕ್ಕೆ ಹೊಸ ದಿಕ್ಸೂಚಿ ನೀಡಲಿದ್ದು, ಮುಂಬರುವ ದಿನಗಳಲ್ಲಿ ಯುವಕರು ಸ್ವಾವಲಂಬಿ ಉದ್ಯೋಗ ಕೈಗೊಳ್ಳಲು ಪ್ರೇರಣೆಯಾಗಲಿದೆ ಎಂದರು. ಈ ಸಂದರ್ಭದಲ್ಲಿ ಸಹಾಯಕರಜಿಸ್ಟ್ರಾರ್ ಸತೀಶ ಪಾಟೀಲ, ಕೃಷಿಕಲ್ಪ ಫೌಂಡೇಶನ್ ನ ಸಂತೋಷ ಬಿರಾದಾರ ಉಪಸ್ಥಿತರಿದ್ದರು.ಧನ್ಯವಾದಗಳು,ಪೋಟೊ: ಅಕ್ಷಯಕಲ್ಪ ಫೌಂಡೇಶನ್ ತಿಪಟೂರಿಗೆ ತೆರಳುತ್ತಿರುವ ಬಬಲೇಶ್ವರ ಹಾಗೂ ತಿಕೋಟಾ ತಾಲೂಕಿನ ಆಯ್ದ ಗ್ರಾಮಗಳ ರೈತರಿಗೆ ಹಸಿರು ನಿಶಾನೆಯೊಂದಿಗೆ ಬಿಳ್ಕೊಟ್ಟ ಬಿ.ಎಲ್.ಡಿ.ಇ ಡೀಮ್ಡ್ ವಿವಿ ಸಮಕುಲಾಧಿಪತಿ ಡಾ.ವೈ.ಎಂ.ಜಯರಾಜ ಹಾಗೂ ರಜಿಸ್ಟ್ರರ್ ಡಾ.ಆರಿ್ವ.ಕುಲಕರ್ಣಿ. ಈ ಸಂದರ್ಭದಲ್ಲಿ ಸಹಾಯಕ ರಜಿಸ್ಟ್ರರ್ ಸತೀಶ ಪಾಟೀಲ, ಕೃಷಿ ಕಲ್ಪ ಫೌಂಡೇಶನ್ ನ ಸಂತೋಷ ಬಿರಾದಾರ, ರೈತರು ಉಪಸ್ಥಿತರಿದ್ದರು.
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್ 