ದರೂರು ಪುರುಷೋತ್ತಮ್ ಗೌಡರಿಗೆ ‘ಕರುನಾಡ ಸಾಧಕರ ರತ್ನ’ ಪ್ರಶಸ್ತಿ

ದರೂರು ಪುರುಷೋತ್ತಮ್ ಗೌಡರಿಗೆ ‘ಕರುನಾಡ ಸಾಧಕರ ರತ್ನ’ ಪ್ರಶಸ್ತಿ  'Karunada Sadhakara Ratna' Award for Daruru Purushotham Gowda


ಬಳ್ಳಾರಿ 16: ತುಂಗಭದ್ರಾ ರೈತ ಸಂಘದ ಜಿಲ್ಲಾಧ್ಯಕ್ಷ ದರೂರು ಪುರುಷೋತ್ತಮ್ ಗೌಡ ಅವರ ರೈತಪರ ಹೋರಾಟ ಹಾಗೂ ಸೇವೆಯನ್ನು ಗುರುತಿಸಿ ‘ಕರುನಾಡ ಸಾಧಕರ ರತ್ನ’ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.  

ತುಂಗಭದ್ರಾ ಜಲಾಶಯದ ವಿಚಾರದಲ್ಲಿ ನೂರಾರು ರೈತರು ಹಾಗೂ ಟ್ರ್ಯಕ್ಟರ್ಗಳೊಂದಿಗೆ ಹೋರಾಟ ನಡೆಸಿ, ಸಾಂಕೇತಿಕವಾಗಿ ಹೂಗಳನ್ನು ಅರ​‍್ಿಸುವ ಮೂಲಕ ಸರ್ಕಾರದ ಗಮನ ಸೆಳೆದಿದ್ದ ಅವರ ಶ್ರಮವನ್ನು ಪರಿಗಣಿಸಿ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ವತಿಯಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.  

ಈ ಸಂದರ್ಭದಲ್ಲಿ ಕಾನಿಪ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ, ‘ಸಾಕ್ಷಿ’ ದಿನಪತ್ರಿಕೆಯ ವರದಿಗಾರ ನರಸನಗೌಡ, ಹಿರಿಯ ಪತ್ರಕರ್ತ ಹನುಮೇಶ್ ರಾವ್, ಜಾಲಿಹಾಳ್ ಶ್ರೀಧರ್ ಗೌಡ, ಆಂಧ್ರ​‍್ರದೇಶ ಕನ್ನಡ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಗಿರಿಜಾಪತಿ, ಬಸವರಾಜ ಸೇರಿದಂತೆ ಹಲವರು ಉಪಸ್ಥಿತರಿದ್ದರು.