'ಭಾರತದ ಅತ್ಯುತ್ತಮ ನೃತ್ಯಪಟು' ಸ್ಪರ್ಧೆ : ನಾಳೆ ದೆಹಲಿಯಲ್ಲಿ ಆಡಿಷನ್
ನವದೆಹಲಿ, ಜ 17 : ಮಕ್ಕಳ ನೃತ್ಯ ರಿಯಾಲಿಟಿ ಶೋ 'ಸೂಪರ್ ಡ್ಯಾನ್ಸರ್' ಯಶಸ್ಸಿನ ನಂತರ, ಸೋನಿ ಎಂಟರ್ಟೈನ್ಮೆಂಟ್ ಟೆಲಿವಿಷನ್ ಈಗ 'ಭಾರತದ ಅತ್ಯುತ್ತಮ ನೃತ್ಯಪಟು' ಸ್ಪರ್ಧೆಯ ಮೂಲಕ 15 ರಿಂದ 30 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಭೆಗಳಿಗೆ ವೇದಿಕೆ ನೀಡಲಿದೆ.
ಭಾರತದ ಅತ್ಯುತ್ತಮ ನೃತ್ಯಪಟು ಸ್ಪರ್ಧೆಯ ಆಡಿಷನ್ಗಳನ್ನು ದೇಶಾದ್ಯಂತ ಆಯೋಜಿಸಲಾಗುತ್ತಿದ್ದರು, ಕಾರ್ಯಕ್ರಮದ ಮೊದಲ ಆಡಿಷನ್ ದೆಹಲಿಯಲ್ಲಿ ನಾಳೆ ಜನವರಿ 18 ರಂದು ದ್ವಾರಕಾದ ಶ್ರೀ ವೆಂಕಟೇಶ್ವರ ಅಂತರರಾಷ್ಟ್ರೀಯ ಶಾಲಾ ವಲಯ -18 ರಲ್ಲಿ ನಡೆಯಲಿದೆ.
ಫೆಬ್ರವರಿಯಲ್ಲಿ ಪ್ರಸಾರವಾಗಲಿರುವ ಈ ಪ್ರದರ್ಶನವು ಪ್ರತಿ ವಾರಾಂತ್ಯದಲ್ಲಿ ದೃಶ್ಯ ಪ್ರದರ್ಶನವನ್ನು ನೀಡುವ ಭರವಸೆ ನೀಡಿದೆ. ಖ್ಯಾತ ನೃತ್ಯ ಪಟುಗಳಾದ ಟೆರೆನ್ಸ್ ಲೂಯಿಸ್, ಗೀತಾ ಕಪೂರ್ ಮತ್ತು ಮಲೈಕಾ ಅರೋರಾ ಖಾನ್ ತೀಪುಗಾರರಾಗಿರುತ್ತಾರೆ
ಹಾಸ್ಯನಟಿ ಭಾರತಿ ಸಿಂಗ್ ಮತ್ತು ಅವರ ಪತಿ ಹರ್ಷಾ ಲಿಂಬಾಚಿಯಾ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ. ನೃತ್ಯಗಾರರನ್ನು ತಿದ್ದಿ ತೀಡಲು 12 ಮಾರ್ಗದರ್ಶಕರು ಇರಲಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 