‘ಆರೋಗ್ಯವೇ ಸಂಪತ್ತು’: ಕ್ರೆಡೈ ಯೂತ್ ವಿಂಗ್ನ 3ಏ ಫನ್ ರನ್ ಸಂಪನ್ನ

‘ಆರೋಗ್ಯವೇ ಸಂಪತ್ತು’: ಕ್ರೆಡೈ ಯೂತ್ ವಿಂಗ್ನ 3ಏ ಫನ್ ರನ್ ಸಂಪನ್ನ  'Health is Wealth': CREDAI Youth Wing's '3A Fun Run' Concludes


ಬೆಳಗಾವಿ 25 : ಕ್ರೆಡೈ ಯೂತ್ ವಿಂಗ್ ಬೆಳಗಾವಿ ಹಾಗೂ ಟ್ರೇಲ್ಸ್‌ ರನ್ ಕ್ಲಬ್ ಸಹಯೋಗದಲ್ಲಿ ‘ಆರೋಗ್ಯವೇ ಸಂಪತ್ತು’ ಸಂದೇಶದೊಂದಿಗೆ ಆಯೋಜಿಸಿದ್ದ 3ಏ ಫನ್ ರನ್ ಭಾನುವಾರ ಉತ್ಸಾಹದಿಂದ ನಡೆಯಿತು. ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಆರೋಗ್ಯಕರ ಹಾಗೂ ಸಕ್ರಿಯ ಜೀವನಶೈಲಿಯ ಮಹತ್ವ ಸಾರಿದರು. ಕ್ರೆಡೈ ಬೆಳಗಾವಿ ಅಧ್ಯಕ್ಷ ಯುರಾಜ್ ಹುಲಜಿ, ಕಾರ್ಯದರ್ಶಿ ಪ್ರಶಾಂತ ವಾಂಡ್ಕರ್ ಹಾಗೂ ಕ್ರೆಡೈ ವುಮೆನ್ಸ್‌ ವಿಂಗ್ ಕರ್ನಾಟಕದ ದೀಪಾ ವಾಂಡ್ಕರ್ ಉಪಸ್ಥಿತರಿದ್ದರು. ವಿಶಾಲ್ ಪಾಟೀಲ, ರಾಜೇಂದ್ರ ಮುತಗೆಕರ ಹಾಗೂ ಸಲೀಂ ಶೇಖ್ ಧ್ವಜಾರೋಹಣ ಮತ್ತು ಫ್ಲ್ಯಾಗ್ ಆಫ್ ನೆರವೇರಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಸಂಘಟಕರು ಹಾಗೂ ಸಂಸ್ಥೆಗಳು ಸಹಕರಿಸಿದವು.