'ಘಾರ್ಗಾ' ಅಂದರೆ ರಹಸ್ಯಗಳ ಘೋರ ಪಯಣ
'Gharga' means a fierce journey of secrets
ಲೋಕದರ್ಶನ ವರದಿ
'ಘಾರ್ಗಾ' ಒಂದು ಊರು. ಮ್ಯಾಪ್‌ನಲ್ಲಿ ಹುಡುಕಿದರು ಆ ಊರಿನ ಹೆಸರು ಸಿಗಲ್ಲ. ದಟ್ಟ ಕಾಡಿನ ಮಧ್ಯ ಇರುವ ಈ ಕುಗ್ರಾಮಕ್ಕೆ ಎಂಟ್ರಿ ಮಾತ್ರ, ಎಕ್ಸಿಟ್ ಇಲ್ಲ. ಅಂದರೆ ಅಲ್ಲಿಗೆ ಹೋದವರು ವಾಪಸ್ ಬರಲ್ಲ. ಅದು ಕಣ್ಣಿಗೆ ಕಾಣಿಸದೆ ಇರುವ ರಕ್ತದ ಕಲೆಯಿಂದ ತುಂಬಿರುವ ಊರು. ಅಂತಹ ನಿಗೂಢ ಊರನ್ನು ಅರಸಿ ಹೊರಟವ ವಿಕ್ರಮ್ (ಅರುಣ್ ರಾಮ್‌ಪ್ರಸಾದ್). ವಿಕ್ರಮ್ ಒಬ್ಬ ರೈಟರ್. ಇನ್ನು ಹತ್ತು ದಿನದಲ್ಲಿ ತಾನು ಬರೆಯುತ್ತಿರುವ ಪುಸ್ತಕ ಮುಕ್ತಾಯ ಮಾಡಲು ಘಾರ್ಗಾ ಊರಿಗೆ ಹೋಗಲೇ ಬೇಕು. ಹಾಗಾಗಿ ಕ್ಯಾಬ್ ಮಾಡಿಕೊಂಡು 'ಘಾರ್ಗಾ' ಕಡೆ ಪಯಣ ಶುರು ಮಾಡುತ್ತಾನೆ. ಆಗ ಅವನಿಗೆ ಡ್ರೈವರ್ ಆಗಿ ಸಾಥ್ ನೀಡುವವ ಪುಂಡಲೀಕ (ಅರುಣ್ ಸಾಗರ). ದಾರಿಮದ್ಯ ಘಾರ್ಗಾ ಬಗ್ಗೆ ಇರುವ ಒಂದಿಷ್ಟು ಘೋರ ಕಥೆಗಳು ಇವರಿಬ್ಬರ ಕಿವಿಗೆ ಬಿಳ್ಳುತ್ತವೆ.
ಮಹಾಬಲ ಐತಾಳ ಅವರು ಬರೆಯುತ್ತಿದ್ದ ಪುಸ್ತಕಗಳನ್ನು ಓದುತ್ತಾ ಬೆಳೆದ ವಿಕ್ರಮ್ ಮಹಾಬಲರ ಸಾವಿನ ರಹಸ್ಯದ ಬಗ್ಗೆ ತಿಳಿಯಲು ಅವರ ಮಗ ಗಜಾನನ ಐತಾಳ (ಸಾಯಿ ಕುಮಾರ್) ಅವರನ್ನು ಹುಡುಕಿಕೊಂಡು 'ಘಾರ್ಗಾ'ಕ್ಕೆ ಬರುತ್ತಾನೆ. ಊರಿಗೆ ಸೇರಿದ ಮೇಲೆ ಒಂದಿಷ್ಟು ಅವಗಡಗಳು ಸಂಭವಿಸುತ್ತವೆ. ಆ ಅನಾವುತಗಳು ಏನು? ಘಾರ್ಗಾ ನಿಜವಾಗಿಯೂ ಅತಿ ಭಯಂಕರ ಹಳ್ಳಿನಾ? ಘಾರ್ಗಾದಲ್ಲಿ ನಡೆಯುತ್ತಿರುವ ಎಲ್ಲ ಘಟನೆಗೆ ಅದೇ ಕಾರಣ. ಅದು ಯಾವುದು? ಎಂಬುದನ್ನು ತಿಳಿಯಲು ಈ ಸಿನಿಮಾ ನೋಡಲೇ ಬೇಕು.
ಕಥೆಯಲ್ಲಿ ಊಹಿಸದಂತಹ ತಿರುವುಗಳು ಇರುವುದು ಸಿನಿಮಾದ ಹೈಲೈಟ್. ಜೊತೆಗೆ ಇಡೀ ಸಿನಿಮಾ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡಿರುವುದು ಈ ಚಿತ್ರದ ಸಂಗೀತ. ಅಷ್ಟು ಸೋಗಸಾಗಿ ಈ ಚಿತ್ರದ ಬ್ಯಾಗ್ರೌಂಡ್ ಸಂಗೀತವಿದೆ. ಹೇಳಿ ಕೇಳಿ ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ. ಹಾಗಾಗಿ ನಿರ್ದೇಶಕರು ಕಥೆಯ ನಿಗೂಢತೆ ಜೊತೆಗೆ ಸಂಗೀತಕ್ಕೂ ಹೆಚ್ಚು ಮಹತ್ವ ನೀಡಿದ್ದಾರೆ. ತಮ್ಮ ಮೊದಲ ಪ್ರಯತ್ನದಲ್ಲೇ ನಿರ್ದೇಶಕನಾಗಿ ಒಂದು ಒಳ್ಳೆಯ ಚಿತ್ರ ಮಾಡಿದ್ದಾರೆ ಎಂ ಶಶಿಧರ್. ಇನ್ನು ಪಾತ್ರಗಳ ಬಗ್ಗೆ ಹೇಳುವುದಾದರೆ, ನಾಯಕನಾಗಿ ಅರುಣ್ ರಾಮ್‌ಪ್ರಸಾದ್ 2-3 ಶೇಡ್‌ನಲ್ಲಿ ಕಾಣಿಸಿಕೊಂಡಿದ್ದು, ಆದಷ್ಟು ಸಹಜ ಅಭಿನಯ ಮಾಡಿದ್ದಾರೆ. ಇವರ ಪಾತ್ರದ ಜೊತೆ ಅರುಣ್ ಸಾಗರ್, ಸಾಯಿ ಕುಮಾರ್ ಕ್ಯಾರೆಕ್ಟರ್ ಕೂಡ ಪ್ರೇಕ್ಷಕರಿಗೆ ಇಷ್ಟ ಆಗುತ್ತದೆ. ಇದರಲ್ಲಿ ನಾಯಕಿಗೆ ಅಷ್ಟಾಗಿ ಕೆಲಸವಿಲ್ಲ. ಈ ಕಥೆಗೆ ಹಾಡುಗಳ ಅವಷ್ಯಕತೆ ಇಲ್ಲ ಅನಿಸುತ್ತದೆ. ಹಾಗಂತ ಚಿತ್ರದಲ್ಲಿ ಬರುವ ಹಾಡುಗಳು ಪ್ರೇಕ್ಷಕರಿಗೆ ತೊಂದರೆ ಮಾಡಲ್ಲ. ಯಾಕಂದ್ರೆ ಸಿನಿಮಾ ಅವಧಿ ಕಡಿಮೆಯೇ ಇದೆ. ಜೊತೆಗೆ ಪ್ರೇಕ್ಷಕರಿಗೆ ಥ್ರಿಲ್ ನೀಡುತ್ತಾ ಸಾಗುತ್ತದೆ. ಒಟ್ಟಿನಲ್ಲಿ ಘಾರ್ಗಾ ಒಂದು ಪ್ರೇಕ್ಷಕರಿಗೆ ಒಳ್ಳೆಯ ಥ್ರಿಲ್ ನೀಡುವ ಸಿನಿಮಾ ಎನ್ನಬಹುದು.
ರೇಟಿಂಗ್: 4/5
ಚಿತ್ರ: ಘಾರ್ಗಾ
ನಿರ್ದೇಶನ: ಎಂ. ಶಶಿಧರ್
ನಿರ್ಮಾಣ: ಅಶ್ವಿನಿ ರಾಮ್‌ಪ್ರಸಾದ್
ಸಂಗೀತ: ಗುರುಕಿರಣ್ ಮತ್ತು ಆರ್.ಪಿ ಪಟ್ನಾಯಕ್
ಛಾಯಾಗ್ರಹಣ: ಗುರುಪ್ರಸಾದ್ ನಾರ್ನಾಡ್
ತಾರಾಗಣ: ಅರುಣ್ ರಾಮ್‌ಪ್ರಸಾದ್, ಸಾಯಿ ಕುಮಾರ್, ಅರುಣ್ ಸಾಗರ್, ಮಿತ್ರಾ, ರಿಹಾನ್ನಾ, ರಾಹುಲ್ ದೇವ್, ದೇವ್ ಗಿಲ್, ಸಂಪತ್ ರಾಜ್ ಮುಂತಾದವರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 