ಶಿಕ್ಷಕರಿಗೆ ವಿಂಗ್ಸ್ ವಿಥಿನ್ ಒತ್ತಡ ಮುಕ್ತ ಶಿಕ್ಷಣ


ಜಗತ್ತಿನಾದ್ಯಂತ ಶಿಕ್ಷಕರು ಗೌರವಿಸಿ, ಪೂಜಿಸಲ್ಪಡುತ್ತಾರೆ. ಅದರಲ್ಲೂ ಭಾರತದಲ್ಲಿ ಅತ್ಯಂತ ಉನ್ನತ ಪೂಜ್ಯನೀಯ ಸ್ಥಾನ ಗುರುವಿಗೆ ಇದೆ. ಗುರುಗಳನ್ನು ಆದರಿಸಿ ಗೌರವಿಸುವುದು ಸಂಪ್ರದಾಯವಾಗಿದೆ. ಅದೇ ರೀತಿ ಪ್ರತಿ ವರ್ಷ ಶಿಕ್ಷಕರನ್ನು ಗೌರವಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಆದರೆ ಗುರುಗಳಿಗೂ ವೃತ್ತಿ ಬದುಕಿನ ದಣಿವು ಹಾಗೂ ಒತ್ತಡಗಳು ಸಾಮಾನ್ಯ. ನಾವೆಲ್ಲ ಮಾರ್ಗದರ್ಶನಕ್ಕಾಗಿ ಗುರುವಿನ ಬಳಿ ತೆರಳುತ್ತೇವೆ. ಆದರೆ ಅವುಗಳನ್ನು ನಿವಾರಿಸಲು ಅವರು ಮಾರ್ಗದರ್ಶನಕ್ಕಾಗಿ ಯಾರ ಬಳಿ ತೆರಳುತ್ತಾರೆ? ಹಾಗೂ ಮಾರ್ಗದರ್ಶನಕ್ಕಾಗಿ ಯಾರನ್ನು ಎದುರು ನೋಡುತ್ತಾರೆ? ಎಂಬುದೊಂದು ಪ್ರಶ್ನೆ ಉದ್ಭವಿಸುತ್ತದೆ. ಇಂತಹ ಒಂದು ಪ್ರಶ್ನೆಗೆ ಪರಿಹಾರ ಒದಗಿಸಲಿದೆ ವಿಂಗ್ಸ್ ವಿಥಿನ್ ಎಂಬ ಬೆಂಗಳೂರಿನ ಸಂಸ್ಥೆ.  ಶಿಕ್ಷಕರಿಗೆ ಮಾರ್ಗದರ್ಶನ, ಅವರ ಸಮಸ್ಯೆಗಳಿಗೆ ಪರಿಹಾರವನ್ನು ನೀಡಲಿದೆ. ಇದರಿಂದ ಅವರ ಎಲ್ಲ ಸಮಸ್ಯೆಗಳನ್ನು ಮೀರಿ ಅವರಿಗೆ ಹಾರಾಡಲು ರೆಕ್ಕೆ ನೀಡಿದಂತಾಗುತ್ತದೆ.

ಬೆಂಗಳೂರಿನ ವೈಟ್ಫೀಲ್ಡ್ನಲ್ಲಿರುವ ಈ ಸಂಸ್ಥೆ ಶಿಕ್ಷಕರ ನಿಸ್ವಾರ್ಥ ಸೇವೆಗೆ ಕೃತಜ್ಞತೆಯಾಗಿ "ಶಿಕ್ಷಕರ ದಿನಾಚರಣೆ" ಆಚರಿಸ್ಪಡುವ ಈ ತಿಂಗಳಾದ್ಯಂತ ಸಲಹೆ, ಮಾರ್ಗದರ್ಶನವನ್ನು ನೀಡುತ್ತದೆ.

ಈ ಸಂಸ್ಥೆ ಭಾವನಾತ್ಮಕ ಸಲಹೆ, ಜೀವನ ಕೌಶಲ್ಯ ತರಬೇತಿ, ಮನೋವೈಜ್ಞಾನ ಮೌಲ್ಯಮಾಪನ, ವಿಶೇಷ ಶಿಕ್ಷಣ ಹಾಗೂ ತರಬೇತಿಯ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುತ್ತದೆ. ಬೇರೆ ಬೇರೆ ವಯಸ್ಸಿನ ವ್ಯಕ್ತಿಗಳಿಗೆ, ಬೇರೆ ವೃತ್ತಿರಂಗದವರೆ ಸಕಾರಾತ್ಮಕ ಭಾವನೆ, ನಡವಳಿಕೆ ಹಾಗೂ ಸಾಮಾಜಿಕ ಯೋಗಕ್ಷೇಮ ತರಬೇತಿಯ ಅನುಕೂಲವನ್ನು ಒದಗಿಸುತ್ತದೆ.

ಸೆಪ್ಟೆಂಬರ್ 5 ರ ಬಗ್ಗೆ ಹೇಳಬೇಕಾಗದರೆ, ಸ್ವಯಂಜಾಗೃತಿ ಹಾಗೂ ಸಾವಧಾನದ ಬಗ್ಗೆ ಉಚಿತ ಕಾರ್ಯಾಗಾರ ಇಡಲಾಗುತ್ತದೆ. ಈ ಕಾರ್ಯಾಗಾರ ಇದು ಕೇವಲ 35 ಆಸನಗಳ ಮಿತಿ ಹೊಂದಿದ್ದು, ಮಾತ್ರ ಶಿಕ್ಷಕರಿಗೆ ಮೀಸಲಿರಿಸಲಾಗುತ್ತದೆ.

"ನಾವು ಕೇವಲ ಕಾರ್ಯಾಗಾರದ ಹೆಸರಲ್ಲಿ ಇಡೀ ತಿಂಗಳನ್ನು ಮೀಸಲಿಡುತ್ತೇವೆ. ಅವರು ನಮಗೆ ಮಾಡಿದ ಎಲ್ಲ ಸಹಾಯಗಳ ಬದಲಾಗಿ ಕೃತಜ್ಞತೆಯ ಸಂಕೇತವಾಗಿ ನಾವು ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ನಾವು ಅವರಿಗೆ ಸಮಗ್ರ ಬೆಂಬಲ ನೀಡಬೇಕೆಂದು ಬಯಸಿದ್ದೇವೆ"ೆ ಎಂದು ವಿಂಗ್ಸ್ ವಿಥಿನ್ನ ರಾಜ್ ಹೇಳಿದರು.

ಶಿಕ್ಷಕರ ತಿಂಗಳಾದ ಈ ತಿಂಗಳಲ್ಲಿ ವಿಂಗ್ಸ್ ವಿಥಿನ್ನ ಸಂಸ್ಥೆ 3 ರಿಂದ 4 ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಉಚಿತ ಭಾವನಾತ್ಮಕ ಸಲಹೆಗಳನ್ನು ನೀಡುತ್ತದೆ.

"ಶಿಕ್ಷಕರು ಕೂಡ ಒತ್ತಡಕ್ಕೆ ಒಳಗಾಗಿರುತ್ತಾರೆ, ತಮ್ಮ ವೃತ್ತಿ ಬದುಕಿನ ದಿನನಿತ್ಯದ ದಣಿವನ್ನು ಆರಿಸಿಕೊಳ್ಳಲು, ಒತ್ತಡವನ್ನು ನಿವಾರಿಸಲು ಅವರಿಗೂ ಭಾವನಾತ್ಮಕ ಬೆಂಬಲದ ಅವಶ್ಯಕತೆ ಇರುತ್ತದೆ.

ಅವರು ತಾಂತ್ರಿಕ ವಿಷಯದಲ್ಲಿ ಬಹಳ ಪ್ರವೀಣರಾಗಿರುತ್ತಾರೆ. ಆದರೆ ಮೃದು ಕೌಶಲ್ಯಗಳಾದ ನಡವಳಿಕೆ, ಸಂವಹನ ವಿಷಯಗಳಿಗೆ ಬಂದಾಗ ಅವರಿಗೂ ಮಾರ್ಗದರ್ಶನದ ಅಗತ್ಯವಿರುತ್ತದೆ ಎಂದರು ರಾಜ್.

ವಿಂಗ್ಸ್ ವಿಥಿನ್ ಸಂಸ್ಥೆ ಈ ತಿಂಗಳಾದ್ಯಂತ ಸ್ವಯಂಜಾಗೃತಿ ಹಾಗೂ ಅವರಿಗೆ ಸಹಾಯಕ್ಕಾಗಿ, ಉತ್ತಮ ಫಲಿತಾಂಶ ಒದಗಿಸಲು ಮಾರ್ಗದರ್ಶನ ಹಾಗೂ ವಿವಿಧ ಕಾರ್ಯ ಚಟುವಟಿಕೆಗಳನ್ನು ಏರ್ಪಡಿಸುತ್ತಿದೆ.

ಕೆಲವೊಮ್ಮೆ ಶಿಕ್ಷಕರು ಕೆಲ ಗೊಂದಲಗಳಲ್ಲಿ ಸಿಲುಕಿಕೊಂಡಿರುತ್ತಾರೆ, ಅದರಿಂದ ಹೊರಬರಲು ದಾರಿ ಹುಡುಕುತ್ತಿರುತ್ತಾರೆ. ಹೊಸ ವಿಧಾನಗಳ ಅವಶ್ಯಕತೆ ಅವರಿಗಿರುತ್ತದೆ. ಇದರ ಮೇಲೆ ವಿಂಗ್ಸ್ ವಿಥಿನ್ ಸಲಹೆ ಕಾರ್ಯಾಗಾರ ಏರ್ಪಡಿಸುತ್ತದೆ.

ಇದು ಆನ್ಲೈನ್ ಕಾರ್ಯಕ್ರಮವಾದ್ದರಿಂದ, ದೇಶದಾದ್ಯಂತ ಸಕರ್ಾರಿ ಹಾಗೂ ಖಾಸಗಿ ಶಾಲೆಗಳ ಅಂದಾಜು 1200 ಶಿಕ್ಷಕರು ಹೆಸರು ನೋಂದಾಯಿಸಿದ್ದಾರೆ ಎಂದು ರಾಜ್ ಅವರು ಹೇಳಿದರು.

ವಿವಿಧ ವಯಸ್ಸಿನ ಶಿಕ್ಷಕರು ಬೇರೆ ರೀತಿಯ ಸಮಸ್ಯೆಗಳನ್ನು ಹೊಂದಿರುತ್ತಾರೆ, ಬೇರೆ ವಿಷಯಗಳ ಕುರಿತು ಮಾತನಾಡ ಬಯಸುತ್ತಾರೆ. ಶಿಕ್ಷಕರು ಈ ಕಾರ್ಯಾಗಾರದ ಉಪಯೋಗವನ್ನು ಪಡೆಯುತ್ತಿದ್ದು, ವಿದ್ಯಾರ್ಥಿಗಳೊಂದಿಗೆ ವ್ಯವಹರಿಸಲು ವಿವಿಧ ವಿಧಾನಗಳನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವಿಂಗ್ಸ್ ವಿಥಿನ್ನ ಸದಸ್ಯರೊಬ್ಬರು ಹೇಳಿದರು.

ಅವರು ವಿದ್ಯಾಥರ್ಿ ಹಾಗೂ ಅವರ ಪಾಲಕರೊಂದಿಗೆ ವ್ಯವಹರಿಸುವ ರೀತಿಯಲ್ಲಿ ಇನ್ನಷ್ಟು ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಬಯಸುತ್ತಿದ್ದಾರೆ. ಸಾಮಾನ್ಯವಾಗಿ ಅವರು ಒಬ್ಬ ಶಿಕ್ಷಕರಾಗಿ ಇನ್ನಷ್ಟು ಅಭಿವೃದ್ಧಿಗೊಳ್ಳಲು ಹಾದಿಯನ್ನು ಹುಡುಕುತ್ತಿರುತ್ತಾರೆ. ಇದು ಈಗಿನ ಪ್ರೋತ್ಸಾಹದಾಯಕ ಪ್ರವೃತ್ತಿಯಾಗಿದೆ.

ಈ ಕಾರ್ಯಕ್ರಮವು ಮನೋವಿಜ್ಞಾನ ಹಾಗೂ ಸಲಹೆಗಾರರಾದ ಪದಮ್ಕನ್ವಾರ ಭಾಟಿ ಹಾಗೂ ತಂಡದಿಂದ ಏರ್ಪಡಿಸಲಾಗುತ್ತಿದೆ.

ಪದಮ್ ಕನ್ವಾರ ಭಾಟಿ ಅವರು ಮನೋವಿಜ್ಞಾನ ಶಾಸ್ತ್ರದಲ್ಲಿ ಪಿಎಚ್ಡಿ ಪದವಿಧರರಾಗಿದ್ದು, ಅಸಾಮಥ್ರ್ಯ ತಿಳುವಳಿಕೆಯಲ್ಲಿ ಡಿಪ್ಲೋಮಾ ಮುಗಿಸಿದ್ದಾರೆ. ಅವರು ಬಾಲ್ಯ ಹಾಗೂ ತರುಣಾವಸ್ಥೆಯ ಮನೋವಿಜ್ಞಾನದಲ್ಲಿ ಉತ್ತಮ ಸಲಹೆಗಾರರ ಪ್ರಮಾಣಪತ್ರವನ್ನು ಹೊಂದಿದ್ದಾರೆ. ಅಲ್ಲದೇ ವಿದ್ಯಾರ್ಥಿ  ಕೌನ್ಸಲಿಂಗ್ನಲ್ಲಿ ವಿಶೇಷ ಅಧ್ಯಯನ ಮಾಡಿದ್ದಾರೆ.

ವಿಂಗ್ಸ್ ವಿಥಿನ್ ಪ್ರಕಾರ" ಶಿಕ್ಷಕರು ಬೇರೆಯವರ ದೃಷ್ಟಿಕೋನವನ್ನು ವಿಚಾರದಲ್ಲಿಟ್ಟುಕೊಂಡು ವಿಷಯವನ್ನು ಅಧ್ಯಯನ ಮಾಡುವುದನ್ನು ಸಾಧ್ಯಗೊಳಿಸುತ್ತದೆ. ಸೃಜನಶೀಲತೆ ಹಾಗೂ ಅನುಭವದಿಂದ ತಮ್ಮ ವೃತ್ತಿ ಬದುಕಿನ ದಿನನಿತ್ಯದ ಒತ್ತಡಗಳನ್ನು ನಿವಾರಿಸಿಕೊಳ್ಳಲು ಶಿಕ್ಷಕರಿಗೆ ಸಾಧ್ಯವಾಗುತ್ತದೆ. ಇದು ಒಟ್ಟಾರೆ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯದಲ್ಲಿ ಅಭಿವೃದ್ಧಿ ತರುತ್ತದೆ.

ಶೀಘ್ರದಲ್ಲಿ ವಿಂಗ್ಸ್ ವಿಥಿನ್ನಿಂದ ವಾಸ್ತವ ತರಗತಿಗೆ ಶಿಕ್ಷಕರ ಮಾರ್ಗದರ್ಶನ ಎಂಬ ಇನ್ನೊಂದು ಕಾರ್ಯಕ್ರಮ ಬರುತ್ತಿದೆ. ಇದು 5ದಿನಗಳ ಕಾರ್ಯಾಗಾರವಾಗಿದ್ದು, ಇದರಲ್ಲಿ ಶಿಕ್ಷಕರು ಆನಲೈನ್ ಕಲಿಕಾ ಸಾಮಥ್ರ್ಯವನ್ನು ಉತ್ತಮಗೊಳಿಸಿಕೊಳ್ಳಬಹುದು. ಇದು ಶಿಕ್ಷಕರಿಗೆ ಸಮಯವನ್ನು ಉತ್ತಮವಾಗಿ ನಿರ್ವಹಿಸಲು, ವೃತ್ತಿ ಹಾಗೂ ವೈಯಕ್ತಿಕ ಬದುಕಿನ ಸಮತೋಲನವನ್ನು ಕಾಯ್ದುಕೊಳ್ಳಲು ಹಾಗೂ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದನ್ನು ಕಲಿಸುತ್ತದೆ.

ಸಮುದಾಯ ಹಾಗೂ ಸಾಮಾಜಿಕ ದೃಷ್ಟಿಕೋನವನ್ನಿಟ್ಟುಕೊಂಡು ನಾವು ಇನ್ನು ಹೆಚ್ಚಿನ ಕಾರ್ಯಕ್ರಮಗಳನ್ನು ಮಾಡುವುದು ವಿಂಗ್ಸ್ ವಿಥಿನ್ನ ಉದ್ದೇಶವೆಂದು ರಾಜ್ ಅವರು ತಿಳಿಸಿದರು.

"ಸದ್ಯದ ಸಾಂಕ್ರಾಮಿಕ ರೋಗವು ಶಿಕ್ಷಣದ ದಿಕ್ಕನ್ನು ಯಾರೂ ಊಹಿಸದ ರೀತಿಯಲ್ಲಿ ಬದಲಾಯಿಸಿದೆ. ಆನ್ಲೈನ್ ತರಬೇತಿಗಳು ಮನೆಗಳಿಗೆ ಲಗ್ಗೆ ಇಟ್ಟು, ಉದ್ಯೋಗ ಹಾಗೂ ನಡುವಿನ ವ್ಯತ್ಯಾಸವೇ ಸಿಗದ ಹಾಗಾಗಿದೆ. ಈ ಅಸಮತೋಲನ ಶಿಕ್ಷಕರಿಗೆ, ವಿದ್ಯಾಥರ್ಿಗಳಿಗೆ ಹಾಗೂ ಪಾಲಕರಿಗೆ ಒತ್ತಡವನ್ನುಂಟು ಮಾಡುತ್ತಿದೆ. ಎಲ್ಲ ಮಧ್ಯಸ್ಥಗಾರರ ಮಾನಸಿಕ ಯೋಗಕ್ಷೇಮಕ್ಕೆ ವಿಂಗ್ಸ್ ವಿಥಿನ್ನ ಆನ್ಲೈನ್ ತರಗತಿಗಳು ಸಂರಕ್ಷಕವಾಗಿದೆ. ಅದಕ್ಕೆ ಧನ್ಯವಾದಗಳು!"ಎಂದು ವಿಶೇಷ ಶಿಕ್ಷಣ ಶಾಸ್ತ್ರಜ್ಞ ಹಾಗೂ ಡಾನ್ಸ್ ಚಿಕಿತ್ಸಾ ವೈದ್ಯರಾದ ಕರೀಶ್ಮಾ ಥಾಪಾ ಹೇಳಿದರು.

"ಇಲ್ಲಿ ನನಗೆ ಅದ್ಭುತ ಅನುಭವ ದೊರೆತಿದೆ. ನಾನು ವಿವಿಧ ಅಸ್ವಸ್ಥತೆಗಳು, ಹಸ್ತಕ್ಷೇಪ ಯೋಜನೆಗಳು, ಕೆಲಸದ ನೀತಿಗಳ ಬಗ್ಗೆ ಕಲಿತಿದ್ದೇನೆ. ಆಸಕ್ತಿದಾಯಕ ಕಾರ್ಯ ಯೋಜನೆಗಳಲ್ಲಿ ಕೆಲಸ ಮಾಡುವಾಗ ತುಂಬಾ ಆನಂದಿಸಿದೆ. ನಾನು ವಿಂಗ್ಸ್ ವಿಥ್ ಕುಟುಂಬದ ಭಾಗವಾಗಿರುವುದು ನನಗೆ ಸಂತೋಷದ ಸಂಗತಿಯಾಗಿದೆ. ವಿಂಗ್ಸ್ ವಿಥಿನ್ ತಂಡ ಹಾಗೂ ಸಿಬ್ಬಂದಿಗಳು ನನಗೆ ಮೆಚ್ಚುಗೆ ವ್ಯಕ್ತಪಡಿಸಿ ನನ್ನನ್ನು ಮುಂದೆ ಸಾಗಲು ಪ್ರೋತ್ಸಾಹ ನೀಡಿದರು. ಕಾರ್ಯಾಗಾರವು ಬಹಳ ಸಕಾರಾತ್ಮಕ ಹಾಗೂ ಸ್ನೇಹಪರ ವಾತಾವರಣವನ್ನು ಸೃಷ್ಟಿಸಿತ್ತು ಎಂದು ವಿಂಗ್ಸ್ ವಿಥಿನ್ನಲ್ಲಿ ಆನ್ಲೈನ್ನಲ್ಲಿ ತರಬೇತಿ ಪಡೆದ ಗೀತಿಕಾ ಮೆಹ್ರಾ ಅಭಿಪ್ರಾಯ ಪಟ್ಟರು.



 

User profile picture

ಡಾ. ಅಲಿಪ್ಟಾ ಜೆನಾ, ಕೋಲ್ಕತ್ತಾ