‘ಕನ್ನಡ ಭಾಷೆಯು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಆತ್ಮಗೌರವದ ಪ್ರತೀಕ’
‘Kannada language is a symbol of our culture, heritage and self-respect’
ಲೋಕದರ್ಶನ ವರದಿ
ಚನ್ನಮ್ಮನ ಕಿತ್ತೂರು 06: ಕನ್ನಡ ಭಾಷೆಯು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಆತ್ಮಗೌರವದ ಪ್ರತೀಕ ವಾಗಿದ್ದು ಅದನ್ನು ಉಳಿಸಿ ಬೆಳೆಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜವಾಬ್ದಾರಿ ಮಹತ್ತರವಾದುದು ಎಂದು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ಶಂಕರ ಚಂದರಗಿ ಸಭಾ ಭವನದಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತಿನ 112 ನೆಯ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ “ ಕನ್ನಡ ಭಾಷೆಯ ಮಾಧ್ಯಮದ ಉಳಿವು ಎಂಬ ವಿಷಯ ಕುರಿತು ಉಪನ್ಯಾಸ ಮತ್ತು ಎಸ್.ಎಸ್,ಎಲ್.ಸಿ ಮತ್ತು ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಪ್ರಸಕ್ತ ವರ್ಷ ಚನ್ನಮ್ಮನ ಕಿತ್ತೂರು ತಾಲೂಕು ಎಸ್.ಎಸ್,ಎಲ್.ಸಿ ಪರೀಕ್ಷೆಯ ಫಲಿತಾಂಶದಲ್ಲ್ಲಿ ಸತತ ಎರಡನೆಯ ಬಾರಿ ಬೆಳಗಾವಿ ಜಿಲ್ಲೆಗೆ ಪ್ರಥಮ ಸ್ಥಾನ ಮತ್ತು ಈ ವರ್ಷ ರಾಜ್ಯ ಮಟ್ಟದಲ್ಲಿ ಐದನೆಯ ಸ್ಥಾನ ಪಡೆದುದರ ಜೊತೆಗೆ ವಿದ್ಯಾರ್ಥಿಗಳು ರಾಜ್ಯಕ್ಕೆ ಮೂರು, ನಾಲ್ಕು, ಆರನೆಯ ಸ್ಥಾನ ಪಡೆಯಲು ಶ್ರ್ರಮಿಸಿದ ಶಿಕ್ಷಣ ಅಧಿಕಾರಿಗಳನ್ನು, ವಿದ್ಯಾರ್ಥಿಗಳನ್ನು ಅಭಿನಂದಿಸಿ ಆಶೀರ್ವದಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ,ವಾಯ್.ತುಬಾಕಿ ಮಾತನಾಡಿ, ಸರಕಾರಿ ಶಾಲೆಯ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದು ಈ ಸಲವೂ ಕಿತ್ತೂರು ತಾಲೂಕಿಗೆ ಉತ್ತಮ ಫಲಿತಾಂಶವನ್ನು ತಂದಿರುವದಕ್ಕೆ ಸಂತಸ ವ್ಯಕ್ತ ಪಡಿಸುತ್ತ ಸಹಕರಿಸಿದ ಶಾಸಕರಿಗೆ,ಪಾಲಕರಿಗೆ,ಶಿಕ್ಷಕರಿಗೆ ಧನ್ಯವಾದಗಳನ್ನು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಡಾ.ಎಸ್.ಬಿ.ದಳವಾಯಿ ಈಗಾಗಲೇ ಶತಕವನ್ನು ಪೂರೈಸಿದ ಕನ್ನಡ ಸಾಹಿತ್ಯ ಪರಿಷತ್ತು ಇತ್ತೀಚೆಗೆ ಸರಕಾರದ ಅನುದಾನವಿಲ್ಲದೆ ತಾಲೂಕು ಮತ್ತು ಜಿಲ್ಲಾ ಕನ್ನಡ ಸಮ್ಮೇಳನಗಳನ್ನು ನಡೆಸಲು ಆಗುತ್ತಿರುವ ತೊಂದರೆಗಳ ಬಗೆಗೆ ವಿಷಾದ ವ್ಯಕ್ತಪಡಿಸುತ್ತ ಬರಲಿರುವ ದಿನಗಳಲ್ಲಿ ಸರಕಾರ ಪರಿಷತ್ತಿಗೆ ಹೆಚ್ಚಿನ ಅನುದಾನ ನೀಡಿ ಕನ್ನಡ ಭಾಷೆ ಉಳಿಸಬೇಕು.
ಕ್ಷೇತ್ರ ಸಮನ್ವಯ ಅಧಿಕಾರಿ ಗಾಯತ್ರಿ ಅಜ್ಜನ್ನವರ, ಕರ್ನಾಟಕ ರಕ್ಷಣಾ ಮಹಿಳಾ ವೇದಿಕೆ, ತಾಲೂಕು ಘಟಕದ ಅಧ್ಯಕ್ಷ ಮಂಜುಳಾ ಕಡಕೋಳ, ಮುಖ್ಯಾಧ್ಯಪಕ ಬಿ.ಸಿ.ಬಿದರಿ ಮಾತನಾಡಿದರು.
ಎಸ್.ಎಸ್,ಎಲ್.ಸಿ, ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಕಿತ್ತೂರು ತಾಲೂಕಿನ ಪ್ರತಿಭಾವಂತ ಮಕ್ಕಳನ್ನು ಮತ್ತು ಉತ್ತಮ ಸಾಧನೆ ತೋರಿದ ರಾಜಗುರು ಶಾಲಾ ಮಕ್ಕಳನ್ನು ಗೌರವಿಸಿ ಶುಭ ಕೋರಲಾಯಿತು. ಎಲ್ಲರಿಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಮಹೇಶ್ವರ ಹೊಂಗಲ, ಶೀಲಾ ಗಂಗಾಧರಮಠ , ರಾಜೇಶ್ವರಿ ಕಳಸಣ್ಣವರ ರಾಘವೇಂದ್ರ,ಬಸವರಾಜ ದಳವಾಯಿ, ರಾಜಗುರು ಶಾಲೆಯ ಶಿಕ್ಷಕರು ಮತ್ತು ಮಕ್ಕಳು, ಕಿತ್ತೂರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು. ರಾಜಗುರು ಶಾಲೆಯ ಮಕ್ಕಳಿಂದ ಕನ್ನಡ ಪರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಿಕ್ಷಕ ನಾಗಯ್ಯಾ ಹುಲೆಪ್ಪನವರಮಠ ಸ್ವಾಗತಿಸಿದರು. ಶಿಕ್ಷಕ ವ್ಹಿ.ಎಸ್.ನಂದೀಹಳ್ಳಿ ವಂದಿಸಿದರು. ಶಿಕ್ಷಕ ಮಂಜುನಾಥ ಕಳಸಣ್ಣವರ ನಿರೂಪಿಸಿದರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 