ನಾಳೆಯಿಂದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ

ಲೋಕದರ್ಶನ ವರದಿ

ಸಿದ್ದಾಪುರ: ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಉತ್ತರ ಕನ್ನಡ, ತಾಲೂಕು ಆಡಳಿತ ಸಿದ್ದಾಪುರ, ಕೃಷಿ ಇಲಾಖೆ ಹಾಗೂ ಕೃಷಿ ಸಂಬಂಧಿ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿಸಮಗ್ರ ಕೃಷಿ ಅಭಿಯಾನ 2019-20 ಜೂನ 19 ರಿಂದ 27 ರ ವರೆಗೆ ಹಮ್ಮಿಕೊಳ್ಳಲಾಗಿದೆ.

  ಈ ಕುರಿತು ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳು ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಿದರು. ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ತಂತ್ರಜ್ಞಾನವನ್ನು ರೈತರಿಗೆ ತಲುಪಿಸಲು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ  ಸಮೂಹ ಜಾಗೃತಿ ಕಾರ್ಯಕ್ರಮವಾಗಿ ಸಮಗ್ರ ಕೃಷಿ ಅಭಿಯಾನ 2019-20 ನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಶೀಷರ್ಿಕೆಯಡಿ  ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಹೋಬಳಿ ಮಟ್ಟದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗುವುದು. ಹೋಬಳಿ ಕೇಂದ್ರ ಸ್ಥಾನದಲ್ಲಿ ಕೃಷಿ ವಸ್ತು ಪ್ರದರ್ಶನ,  ರೈತರ ಸಂವಾದ, ಪಶುಸಂಗೋಪನೆ, ತೋಟಗಾರಿಕೆ, ರೇಷ್ಮೆ,ಮೀನುಗಾರಿಕೆ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ರೈತರ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹಾರ ಸೂಚಿಸುವದು,ಕೃಷಿ ಹಾಗು ಕೃಷಿಗೆ ಸಂಬಂಧಿಸಿದ ಇಲಾಖೆಗಳ ವಿವಿಧ ಯೋಜನೆಗಳನ್ನು ಬಿಂಬಿಸುವ ಪ್ರದರ್ಶಿಕೆಗಳು, ಮಾದರಿಗಳು ಮತ್ತು ಕೃಷಿ ವಸ್ತು ಪ್ರದಶ್ನವನ್ನು ಏರ್ಪಡಿಸಲಾಗುವುದು. ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆಗೆ ನೋಂದಣಿ ಮಾಡುವುದು, ಕರಾವಳಿ ಪ್ಯಾಕೆಜ್, ಬೆಳೆವಿಮೆ ಮಾಡಿಸುವುದು ಮುಂತಾದವುಗಳನ್ನು ರೈತರು ಮಾಡುವಂತೆ ಹಾಗೂ ಕೃಷಿ ಪಂಡಿತ್ ಪ್ರಶಸ್ತಿಗೆ ಅಜರ್ಿ ಸಲ್ಲಿಸುವಂತೆ ತಿಳಿಸಿದರು.

 ಪತ್ರಿಕಾಗೋಷ್ಠಿಯಲ್ಲಿ ಸಹಾಯಕ ಕೃಷಿ ನಿಧರ್ೆಶಕ ದೇವರಾಜ ಆರ್. ಹಿರಿಯ ತೋಟಗಾರಿಕಾ ನಿಧರ್ೇಶಕ ಮಹಾಬಲೇಶ್ವರ, ಕೃಷಿ ಅಧಿಕಾರಿ ಪ್ರಾಶಂತ ಉಪಸ್ಥಿತರಿದ್ದರು.

 ಜೂನ 19 ರಂದು ಬೆಳ್ಳಿಗ್ಗೆ 10-30 ರಿಂದ 12 ಗಮಟೆಯವರೆಗೆ  ಕಷಿ ಇಲಾಖೆಯ ಆವರಣದಲ್ಲಿ,12-30 ರಿಂದ 1-30ರವರೆಗೆ ಕಾನಗೋಡ ಗ್ರಾಮಪಂಚಾಯತ ಆವರಣದಲ್ಲಿ, ಮಧ್ಯಾಹ್ನ 2 ರಿಂದ 3-30ರವರೆಗೆ ಕೋಲಸಿರ್ಸಿರೆ  ಗ್ರಾಮ ಪಂಚಾಯತ ಆವರಣದಲ್ಲಿ, 4 ರಿಂದ 5-30ರ ವರೆಗೆ ಬಿದ್ರಕಾನ ಪಂಚಾಯತ ಆವರಣದಲ್ಲಿ, ಜೂನ 20 ರಂದು 10 ರಿಂದ 11-30ರವರೆಗೆ ಶಿರಳಗಿ ಗ್ರಾಮ ಪಂಚಾಯತ ಆವರಣದಲ್ಲಿ, 12-15ರಿಂದ 1-30ರವರೆಗೆ ಕವಂಚೂರ ಪಂಚಾಯತ ಆವರಣದಲ್ಲಿ, 4 ರಿಂದ 5-30ರವರೆಗೆ ಕೋರ್ಲಕೈ ಪಂಚಾಯತ ಆವರಣದಲ್ಲಿ,ಜೂನ 21 ರಂದು ಬೆಳಿಗ್ಗೆ 10-30ರಿಂದ 5 ಗಂಟೆಯವರೆಗೆ ಗೋಳಗೋಡ ಶ್ರೀ ಈಶ್ವರ ದೇವಸ್ಥಾನದ ಸಭಾಭವನದಲ್ಲಿ ರೈತ ಸಂವಾದ, ಚರ್ಚಾ ಗೋಷ್ಠಿ,ವಸ್ತು ಪ್ರದರ್ಶನ .ಜೂನ 22 ರಂದು ಬೆಳಿಗ್ಗೆ 10-30ರಿಂದ 11-30ರವರೆಗೆ ಬೇಡ್ಕಣಿ ಗ್ರಾಮ ಪಂಚಾಯತ ಆವರಣದಲ್ಲಿ, 12-15 ರಿಂದ 1-30ರವರೆಗೆ ಇಟಗಿ ಗ್ರಾಮ ಪಂಚಾಯತ ಆವರಣದಲ್ಲಿ, 3 ರಿಂದ 4 ಗಂಟೆಯವರೆಗೆ ವಾಜಗೋಡ ಗ್ರಾಮ ಪಂಚಾಯತ ಆವರಣದಲ್ಲಿ, 4-30ರಿಂದ 5-30ರವರೆಗೆ ಹಲಗೇರಿ ಗ್ರಾಮ ಪಂಚಾಯತ ಆವರಣದಲ್ಲಿ, ಜೂನ  23 ರಂದು 10-30 ರಿಂದ 11-30ರವರೆಗೆ ಸೋವಿನಕೊಪ್ಪ ಗ್ರಾಮ ಪಂಚಾಯತ ಆವರಣದಲ್ಲಿ, 12-15ರಿಂದ 1-30ರವರೆಗೆ ಕ್ಯಾದಗಿ ಗ್ರಾಮಪಂಚಾಯತ ಆವರಣದಲ್ಲಿ, 3 ರಿಂದ 4-30ರವರೆಗೆ ದೋಡ್ಮನೆ ಗ್ರಾಮ ಪಂಚಾಯತ ಆವರಣದಲ್ಲಿ, ಜೂನ 24 ರಂದು ಬಿಳಗಿಯ ಶ್ರೀ ಮಾರಿಕಾಂಬ ದೇವಸ್ಥಾನ ಸಭಾಭವನದಲ್ಲಿ  ಬೆಳಿಗ್ಗೆ 10-30ರಿಂದ 5 ಗಂಟೆಯವರೆಗೆ ರೈತ ಸಂವಾದ, ಚರ್ಚಾಗೋಷ್ಠಿ,ವಸ್ತು ಪ್ರದರ್ಶನ , ಜೂನ 25 ರಂದು 10-30 ರಿಂದ 11-30ರವರೆಗೆ ಹಾರ್ಸಿಕಟ್ಟಾ ಗ್ರಾಮ ಪಂಚಾಯತ ಆವರಣದಲ್ಲಿ, 12-15 ರಿಂದ 1-30ರವರೆಗೆ ಹೆಗ್ಗರಣಿ ಗ್ರಾಮ ಪಂಚಾಯತ ಆವರಣದಲ್ಲಿ, 3 ರಿಂದ 4-30ರವರೆಗೆ  ನಿಲ್ಕುಂದ/ತಂಡಾಗುಂಡಿ ಗ್ರಾಮ ಪಂಚಾಯತ ಆವರಣದಲ್ಲಿ, ಜೂನ 26 ರಂದು 10-30 ನರಿಂದ 11-30ರವರೆಗೆ ಹೋರೂರ ಗ್ರಾಮ ಪಂಚಾಯತ ಆವರಣದಲ್ಲಿ, 12-15 ರಿಂದ 1-30ರವರೆಗೆ  ಹಸರಗೋಡ ಪಂಚಾಯತ ಆವರಣದಲ್ಲಿ, 3 ರಿಂದ 4-30ರವರೆಗೆ ತ್ಯಾಗಲಿ ಗ್ರಾಮಪಂಚಾಯತ ಆವರಣದಲ್ಲಿ, ಜೂನ 27 ರಂದು ಕಾನಸೂರು ಸಾರ್ವಜನಿಕ ಗಣೇಶೋತ್ಸವ  ಸಮಿತಿ ಸಭಾಭವನದಲ್ಲಿ  ಬೆಳಿಗ್ಗೆ 10-30ರಿಂದ 5 ಗಂಟೆಯವರೆಗೆ  ರೈತ ಸಂವಾದ, ಚರ್ಚಾ ಗೋಷ್ಠಿ,ವಸ್ತು ಪ್ರದರ್ಶನ  ಎರ್ಪಡಿಲಾಗಿದೆ. ರೈತರು ಇದರ ಸಧುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದ್ದಾರೆ.