ಲೋಕದರ್ಶನ ವರದಿ
ಕಂಪ್ಲಿ 19: ತಾಲ್ಲೂಕಿನ ನಂ.3ಸಣಾಪುರ ಗ್ರಾಪಂ ಕಛೇರಿ ಆವರಣದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ, 2019-20ನೇ ಸಾಲಿನ ಸಾಮಾಜಿಕ ಪರಿಶೋಧನಾ ಗ್ರಾಮಸಭೆ ಜರುಗಿತು.
ಗ್ರಾಮದ ಹಿರಿಯ ನಾಗರೀಕ ಶ್ಯಾಮೀದ್ಸಾಬ್ ಜಾಲಿಹಾಳ್ ಇವರು ಅಧ್ಯಕ್ಷತೆವಹಿಸಿದ್ದರು. ಹೊಸಪೇಟೆಯ ತಾಲ್ಲೂಕು ಸಂಯೋಜಕಿ, ಸಾಮಾಜಿಕ ಪರಿಶೋಧಕಿ ಎಂ.ಎಸ್.ಗೌರಿದೇವಿ ಮಾತನಾಡಿ, ಗ್ರಾಮದ ಅಭಿವೃದ್ದಿಯಲ್ಲಿ ನರೇಗಾ ಮಹತ್ವದ ಪಾತ್ರವಹಿಸುತ್ತದೆ. ಅರ್ಹ ಫಲಾನುಭವಿಗಳು ಅರಿತು ವೈಯಕ್ತಿಕ ಮತ್ತು ಸಾಮುದಾಯಿಕ ಕಾಮಗಾರಿಗಳನ್ನು ಸದ್ಭಳಕೆ ಮಾಡಿಕೊಳ್ಳುವಲ್ಲಿ ಮುಂದಾಗಬೇಕು. 2018ರ ಅಕ್ಟೋಬರ್ ಮಾಹೆಯಿಂದ 2019ರ ಮಾರ್ಚ್ ತನಕದ 6 ಮಾಹೆಗಳ ಅವಧಿಯಲ್ಲಿ ಜರುಗಿದ ಸಾಮಾಜಿಕ ಪರಿಶೋಧನೆ ಕುರಿತು ಚಚರ್ಿಸಲಾಯಿತು.
ಆರು ತಿಂಗಳಲ್ಲಿ ಒಟ್ಟು 65ಕಾಮಗಾರಿಗಳನ್ನು ನಿರ್ವಹಿಸಿದ್ದು, ಇದರಲ್ಲಿ 32 ಸಾಮೂಹಿಕ ಹಾಗೂ 33ವೈಯಕ್ತಿಕ ಕಾಮಗಾರಿಗಳು ಸೇರಿವೆ. ಕೂಲಿಯಾಗಿ 31,41,745ರೂ.ಗಳನ್ನು, ಸಾಮಾಗ್ರಿ ವೆಚ್ಚವಾಗಿ 25, 26,046ರೂ.ಗಳನ್ನು ವ್ಯಯಿಸಲಾಗಿದೆ ಎಂದರು. ಸಾಮಾಜಿಕ ಪರಿಶೋಧನಾ ಸಭೆಯಲ್ಲಿ ಪಾಲ್ಗೊಂಡ ಗ್ರಾಮಸ್ಥರು ಮಾತನಾಡಿ, ಎಲ್ಲರಿಗೂ ಉದ್ಯೋಗ ಚೀಟಿ ನೀಡಿ ಉದ್ಯೋಗ ನೀಡುವಂತೆ ಆಗ್ರಹಿಸಿದರು
ಪಿಡಿಒ ಬೀರಲಿಂಗ ಮಾತನಾಡಿ, ಅಂಗವಿಕಲರಿಗೂ ನರೇಗಾ ಉದ್ಯೋಗ ನಿರ್ವಹಿಸಲು ಅನುಕೂಲ ಒದಗಿಸಿಕೊಡಬೇಕು ಎಂದು ಅಹವಾಲು ಸಲ್ಲಿಸಿದ್ದಾರೆ. ಉದ್ಯೋಗ ಚೀಟಿ ಹೊಂದಿದವರಿಗೆ ನರೇಗಾ ಯೋಜನಡಿಯಲ್ಲಿ ಉದ್ಯೋಗ ನೀಡಲಾಗುವುದು. ಯಾವುದೇ ಕಾರಣಕ್ಕೂ ಗ್ರಾಮದಿಂದ ಉದ್ಯೋಗ ಅರಸಿ ವಲಸೆ, ಗುಳೆ ಹೋಗಬಾರದು. ನರೇಗಾ ಉದ್ಯೋಗದಲ್ಲಿ ಪಾಲ್ಗೊಳ್ಳಬೇಕು. ಶಾಲೆಯಿಂದ ವಂಚಿತರಾದ ಮಕ್ಕಳನ್ನು ಪತ್ತೆ ಮಾಡಿ ಶಾಲೆಗೆ ಕಳುಹಿಸುವಂತೆ ಹೇಳಿದರು.
ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಬೆಲ್ಲಂ ಕೋಟೇಶ್ವರರಾವ್, ಕಾರ್ಯದಶರ್ಿ ಕೆ.ದೊಡ್ಡಬಸಪ್ಪ, ಉಪಾಧ್ಯಕ್ಷೆ ಪ್ರಮಿಳಾ, ಸದಸ್ಯರಾದ ಟಿ.ವೀರನಗೌಡ, ವಿ.ಲಕ್ಷ್ಮಿನಾಗಮಣಿ, ವಡ್ರು ಮಂಜುಳಾ, ಸಿ.ದೊಡ್ಡ ಈರಣ್ಣ, ಎಚ್.ಶಿವಣ್ಣ ಸೇರಿ ಗ್ರಾಮ ಪಂಚಾಯ್ತಿ ಸದಸ್ಯರು, ಹಾಲಿ ಮಾಜಿ ಜನಪ್ರತಿನಿಧಿಗಳು, ಗ್ರಾಮದ ಮುಖಂಡರು, ಅಂಗನವಾಡಿ, ಆಶಾ ಕಾರ್ಯಕತರ್ೆಯರು ಉಪಸ್ಥಿತರಿದ್ದರು.