ಹೂವಿನಹಡಗಲಿ: ಮೆಕ್ಕೆಜೋಳ ದರ ಕುಸಿತ ಆತಂಕ

ಲೋಕದರ್ಶನ ವರದಿ

ಹೂವಿನಹಡಗಲಿ 22: ಬಹು ನಿರೀಕ್ಷೆಯಲ್ಲಿದ್ದ ರೈತರು ಸಾಲ ಸೂಲ ಮಾಡಿ ತಾಲೂಕಿನಲ್ಲಿ ಹೆಚ್ಚಾಗಿ ಮೆಕ್ಕೆಜೋಳ ಬೆಳೆ ಬೆಳೆಯಲಾಗಿದ್ದು,ಉತ್ತಮ ಇಳುವರಿ ಬಂದಿದೆ ಆದರೂ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಬೆಲೆ ಪಾತಾಳಕ್ಕೆ ಕಂಡಿದೆ. ಸುಗ್ಗಿ ಆರಂಭವಾಗಿದ್ದು, ಫಸಲು ಕಟಾವಿನ ಭರಾಟೆಯಲ್ಲಿರುವ ರೈತರಿಗೆ ದರ ಕುಸಿತ ಚೆಂತೆ ಕಾಡಲಾರಂಭಿಸಿದೆ. ತಾಲೂಕಿನಲ್ಲಿ ಈ ಬಾರಿ ಮುಂಗಾರು ಅತಿ ಹೆಚ್ಚು ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ. ಇದೀಗ ಕೈಗೆ ಬರುವ ಉತ್ಸಾಹದ ಮಧ್ಯೆ ಮಾರುಕಟ್ಟೆಯಲ್ಲಿನ ದರ ಕುಸಿತ ರೈತರ ಸಂಭ್ರಮವನ್ನು ಕಳೆಗುಂದಿಸುತ್ತಿದೆ.

ಈ ಮೊದಲು 2200 ರೂ ರೂ.ಬೆಲೆ ಇತ್ತು. ರೈತರ ಫಸಲು ಕಟಾವಿಗೆ ಬರುತ್ತಿದ್ದಂತೆ ಇದೀಗ 1700ರಿಂದ 1600 ದರ ಇಳಿಕೆಯಾಗಿದೆ. ತಾಲೂಕಿನಲ್ಲಿ ಸಾವಿರಾರು ಹೆ.ಪ್ರದೇಶದಲ್ಲಿ ಕಟಾವು,ರಾಶಿ ಮಾಡುವುದು ಕಂಡು ಬರುತ್ತಿದ್ದು, ಮೆ.ಜೋಳ ಮಾರುಕಟ್ಟೆ ತಲುಪಿಸುವ ಕೆಲಸವಾಗಬೇಕಿದೆ. ಇತ್ತ ಕೃಷಿ ಚಟುವಟಿಕೆಯಲ್ಲಿರುವ ರೈತರು, ಮಾರುಕಟ್ಟೆಯಲ್ಲಿ ಮೆಕ್ಕೆಜೋಳಕ್ಕೆ ಡಿಮ್ಯಾಂಡ್ ಇಲ್ಲದಿರುವುದನ್ನು ತಿಳಿದು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಮೆಕ್ಕೆಜೋಳ ಬೇಳೆಗಳಿಗೆ ಸೈನಿಕ ಹುಳು ಬಾಧೆಯಿಂದ ಕನಿಷ್ಠ ಪ್ರತಿ ಎಕರೆಗೆ 10ರಿಂದ 50ಕ್ವಿಂಟಲ್ ಇಳುವರಿ ಬಂದಿದ್ದು, ಮಾರುಕಟ್ಟೆಯಲ್ಲಿ ಪ್ರತಿದಿನ ಸಾವಿರಾರು ಕ್ವಿಂಟಲ್ ಮೆಕ್ಕೆಜೋಳ ಖರೀದಿಯಾಗುತ್ತಿದೆ. ಆದರೆ ಸಕರ್ಾರ ಖರೀದಿ ಕೇಂದ್ರ ಆರಂಭಿಸದೇ ವಿಳಂಬ ಮಾಡುತ್ತಿದೆ. ದಿನ ದಿನದಿಂದ ಮಾರುಕಟ್ಟೆಯಲ್ಲಿ ಕುಸಿತಗೊಳ್ಳುತ್ತಿರುವ ಮೆಕ್ಕೆಜೋಳ ಧಾರಣೆ ಇನ್ನೊಂದಡೆ ಅಕಾಲಿಕ ಮಳೆ, ಬೆಲೆ ಕುಸಿತ, ಮಳೆ ಹೆಚ್ಚಾಗಿ ಬೆಳೆಗಳು ಇಳುವರಿ ಇಲ್ಲದೇ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.