ಯೋಗ ಮಾನಸಿಕ ಆರೋಗ್ಯದ ಬೆಳವಣಿಗೆಗೆ ಸಹಾಯಕ

ಲೋಕದರ್ಶನವರದಿ

ಹಾವೇರಿ:- ಯೋಗವು ಭಾರತೀಯ ಪರಂಪರೆಯ ತಾಯಿ ಬೇರು ಆಗಿದ್ದು, ಭಾರತವು  ವಿಶ್ವಕ್ಕೆ ನೀಡಿದ ಅತೀ ಪ್ರಮುಖ ಕೊಡುಗೆಯಾಗಿದ್ದು, ಯೋಗವು ನಮ್ಮಲ್ಲಿ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಬೆಳವಣಿಗೆಗೆ ಸಹಾಯಕವಾಗುತ್ತದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.

           ನಗರದ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹುಕ್ಕೇರಿಮಠ ಜಾತ್ರಾ ಮಹೋತ್ಸವದ ಅಂಗವಾಗಿ , ಯುವ ಸಬಲೀಕರಣ , ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಯೋಗ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಂಡಿರುವ ರಾಜ್ಯ ಯೋಗಾಸನ ಚಾಂಪಿಯನಶಿಫ್ ಉದ್ಘಾಟನಾ ಸಮಾರಂಬದ ಸಾನಿಧ್ಯ ಬಹಿಸಿ ಅವರು ಮಾತನಾಡಿದರು.

               ಪ್ರಾಚೀನ ಕಾಲದಲ್ಲಿ ಸಂತ ಮಹಾತ್ಮರು ಆರಂಭಿಸಿದ ಯೋಗವು ಇಂದು ಜನ ಸಾಮಾನ್ಯರಿಗೂ ವಿಸ್ತರಿಸಿದ್ದು, ಯಾವದೇ ವಯೋಮಾನದವರು ಕೂಡಾ ಯೋಗವನ್ನು ಮಾಡಿ, ಸದೃಡ ದೇಹದಲ್ಲಿ ಸದೃಡ ಮನಸ್ಸನ್ನು ಹೊಂದಬಹುದು ಎಂದು ಹೇಳಿದರು.

                 ಎಲ್ಲ ಭಾಗ್ಯಗಳಿಗಿಂತ ಆರೋಗ್ಯದ ಭಾಗ್ಯವೇ ದೊಡ್ಡದು ಎನ್ನುವಂತೆ ಹಿತ ಮಿತವಾದ ಊಟ, ಚಟುವಟಿಕೆಯುಕ್ತ ಜೀವನ ಹಾಗೂ ಯೋಗವನ್ನು ಪ್ರತಿನಿತ್ಯ ನಮ್ಮ ಜೀವನದ ಅವಿಭಾಜ್ಯ ಅಂಗ ಎನ್ನುವಂತೆ ಅಳವಡಿಸಿಕೊಂಡರೆ ರೋಗ ಮುಕ್ತ ಬದುಕನ್ನು ಹಾಗೂ ರೋಗ ಮುಕ್ತ ಸಮಾಜವನ್ನು ನಿಮರ್ಿಸಬಹುದು ಎಂದು ಹೇಳಿದರು.

                 ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ಭಾರತ ಯೋಗ ಫೆಡರೇಶನ್ನ ಉಪಾಧ್ಯಕ್ಷ ಗಂಗಾಧರಪ್ಪ ಮಾತನಾಡಿ, ಇಂದು ಯೋಗವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಲು ಬಯಸುತ್ತಿದ್ದು, ಅಂತರಾಷ್ಟ್ರೀಯ ಸ್ಪಧರ್ೆಯಾಗಿ ಮಾರ್ಪಡಾಗಿದ್ದು, ಮುಂಬರುವ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಸರ್ಧೆ  ಏರ್ಪಡಿಸುವದರ ಜೊತೆಗೆ ಓಲಂಪಿಕ್ಸನಲ್ಲಿ ಯೋಗವನ್ನು ಸೇರ್ಪಡಿಸಲು ಪ್ರಯತ್ನಿಸಲಾಗುತ್ತದೆ ಎಂದು ಹೇಳಿದರು.

                ರಾಜ್ಯ ಚಾಂಪಿಯನಶಿಫನಲ್ಲಿ 30 ಜಿಲ್ಲೆಗಳಿಂದ ಒಟ್ಟು 700 ವಿಧ್ಯಾಥರ್ಿಗಳು ಸ್ಪಧರ್ಾಳುಗಳು ಭಾಗವಹಿಸಿದ್ದರು.

           ಸಮಾರಂಭದಲ್ಲಿ  ಧರ್ಮಸ್ಥಳ ಶಾಂತಿವನ ಟ್ರಸ್ಟನ ಶಶಿಕಾಂತ ಜೈನ್ ಜಾತ್ರಾ ಸಮಿತಿಯ ಅಧ್ಯಕ್ಷರಾದ  ಮಲ್ಲಿಕಾರ್ಜುನ ಹಾವೇರಿ, ಉಪಾಧ್ಯಕ್ಷ ಪ್ರಕಾಶ ಶೆಟ್ಟಿ, ಶಿವಲಿಂಗೇಶ್ವರ ವಿದ್ಯಾಪೀಠದ ಚೇರಮನ್ನ ಶಿವಬಸಪ್ಪ ಮುಷ್ಟಿ, ವೀರಣ್ಣ ಅಂಗಡಿ, ಎಂ.ಸಿ.ಮಳಿಮಠ, ಬಿ.ಬಸವರಾಜ, ಮತ್ತಿತರರು ಉಪಸ್ಥಿತರಿದ್ದರು.

     ಯೋಗ ಸಂಯೋಜಕರಾದ ಪ್ರೇಮಕುಮಾರ ಮುದ್ದಿ ಕಾರ್ಯಕ್ರಮ ನಿರ್ವಹಿಸಿದರು.