ಲೋಕದರ್ಶನ ವರದಿ
ವಿಶ್ವ ಭೂ ದಿನ ಕಾರ್ಯಕ್ರಮ ಆಚರಣೆ
ವಿಜಯಪುರ 22: ಭೂಮಿಯು ಸಕಲ ಜೀವಜಂತುಗಳಿಗೆ ಆಶ್ರಯ ತಾಣವಾಗಿದೆ. ಇದನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಅರವಿಂದ ಎಸ್ ಹಾಗರಗಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಸಹಾಯಕ ನಿರ್ದೇಶಕರ ಕಛೇರಿ ವಿಭಾಗೀಯ ಗುಣ ನಿಯಂತ್ರಣ ತರಬೇತಿ ಕೇಂದ್ರದಲ್ಲಿ ಮಂಗಳವಾರ ಜರುಗಿದ ವಿಶ್ವ ಭೂದಿನ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಲಿನ್ಯದಿಂದ ಪರಿಸರ ನಾಶವಾಗಿ ಭೂಮಿಯನ್ನು ವಿನಾಶದ ಅಂಚಿನತ್ತ ಕೊಂಡೊಯುತ್ತದೆ. ಅದನ್ನು ನಾವು ಕಾಪಾಡಬೇಕು ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಪರಿಸರ ಅಧಿಕಾರಿಗಳಾದ ವಿವೇಕ ಗುನಗ ಮಾತನಾಡಿ ಮಾನವ ಅಗತ್ಯತೆಯ ಮಿತಿಯನ್ನು ಕಂಡುಕೊಂಡಾಗ ಪ್ರಕೃತಿ ಸಂರಕ್ಷಣೆ ಮಾಡಲು ಸಾಧ್ಯ ಎಂದರು.
ವಕೀಲರ ಸಂಘದ ಅಧ್ಯಕ್ಷರಾದ ಡಿ.ಜಿ.ಬಿರಾದಾರ ಅವರು ಮಾತನಾಡಿದರು.ರಾಷ್ತ್ರೀಯ ಜಲ ವಿಜ್ಞಾನ ಸಂಸ್ಥೆಯ ರೂರ್ಕೆಲಾ ಬೆಳಗಾವಿ ವಿಭಾಗದ ನಿವೃತ್ತ ವಿಜ್ಞಾನಿಗಳು ಉಪನ್ಯಾಸ ನೀಡಿದರು.
ಜಿಲ್ಲಾ ಅಂತರ್ಜಲ ನಿರ್ದೇಶನಾಲಯ ಕಛೇರಿಯ ಹಿರಿಯ ಭೂ ವಿಜ್ಞಾನಿಗಳಾದ ಮಹೇಶ ಬಿರಾಜನವರ ಹಾಗೂ ಟಿ.ಚಂದ್ರಶೇಖರ ಉಪಸ್ಥಿತರಿದ್ದರು.