ಜಗತ್ತಿನ ಮೊದಲ ಪಾರ್ಲಿಮೆಂಟ್ ಅನುಭವ ಮಂಟಪ: ಕಸ್ತೂರಿ ಹೂಲಿ

World's first parliament Anubhava Kasturi Mantapa: Hooli

ಸವದತ್ತಿ 08: ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವು ವಿಶ್ವದ ಮೊದಲ ಪಾರ್ಲಿಮೆಂಟ್ ಆಗಿತ್ತು. ಇದರ ಹೆಸರನ್ನು ಅನೇಕ ಶರಣರು ತಮ್ಮ ತಮ್ಮ ವಚನಗಳಲ್ಲಿ ಭಿನ್ನ ಭಿನ್ನ ಪರಿಭಾಷೆಯಲ್ಲಿ  ಬಳಿಸಿದ್ದಾರೆ. ಇದು ಅರಿವಿನ ಮನೆಯಾಗುವುದರ ಜೊತೆಗೆ ಶರಣರು ನಿತ್ಯವೂ ತಮ್ಮ ಜೀವನಾನುಭವಗಳನ್ನು ಹಂಚಿಕೊಳ್ಳುವ ಮೂಲಕ  ಸಮಾಜದ  ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿಗಾಗಿ ಒಟ್ಟಾಗಿ ಕುಳಿತು ತಮ್ಮ  ಚಿಂತನೆಗಳನ್ನು ಚರ್ಚಿಸುವ ಸಂಗೋಷ್ಠಿಯಾಗಿತ್ತು ಎಂದು ಕಸ್ತೂರಿ ಹೂಲಿ ನುಡಿದರು. 

ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ ಬೆಳಗಾವಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕ ಸವದತ್ತಿ ಜಂಟಿಯಾಗಿ ಸವದತ್ತಿಯ ಗುರುಭವನದಲ್ಲಿ ಆಯೋಜಿಸಿದ ಬಸವ ಜಯಂತಿ ನಿಮಿತ್ತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಬಸವಣ್ಣನವರ ಸಮ ಸಮಾಜದ ಪರಿಕಲ್ಪನೆಗೆ ಇಂಬು ಕೊಟ್ಟ ಸಂಗೋಷ್ಠಿಯೇ ಅನುಭವ ಮಂಟಪ. 12 ನೇ ಶತಮಾನದ ಈ ಅನುಭವ  ಮಂಟಪವು ವಚನ ಸಾಹಿತ್ಯದ ಚಿಲುಮೆಯೂ ಆಗಿತ್ತು. ಇದನ್ನು ಶರಣರು ಧಾರ್ಮಿಕ ಮತ್ತು ತಾತ್ವಿಕ ಚಿಂತನೆಯ ಪ್ರಚಾರದ ಪ್ರಮುಖ ಕೇಂದ್ರವನ್ನಾಗಿಸಿ  ಅನುಭಾವಗಳನ್ನು ಹಂಚಿಕೊಳ್ಳುವ ತಾಣವನ್ನಾಗಿಸಿದರು. ಅನುಭವ ಮಂಟಪದಲ್ಲಿ ಅಲ್ಲಮಪ್ರಭು, ಅಕ್ಕಮಹಾದೇವಿ, ಚನ್ನಬಸವಣ್ಣ ಮತ್ತು ಬಸವಣ್ಣನವರು ಸೇರಿದಂತೆ  ಅನೇಕ ಶರಣರು ಮಾನವೀಯ  ತತ್ವಗಳನ್ನು ಮತ್ತು  ಸಿದ್ಧಾಂತದ ತಳಹದಿಯ ವೈಚಾರಿಕತೆಯನ್ನು ಅರುಹಿದರು. ಎಲ್ಲ ಸಮುದಾಯದ ಶರಣರು ಅನುಭಾವಿಗಳಾಗಿ ಚರ್ಚೆಯಲ್ಲಿ  ಸಕ್ರಿಯರಾಗಿದ್ದರು ಎಂದು ಅವರು ನುಡಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಪ್ರಾಸ್ತಾವಿಕ ಮಾತುಗಳನ್ನಾಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜೇಶ್ವರಿ ಪಟ್ಟಣಶೆಟ್ಟಿಯವರು ವಹಿಸಿಕೊಂಡಿದ್ದರು. ಚಕೋರ ಸಾಹಿತ್ಯ ವೇದಿಕೆ ಸಂಚಾಲಕ ನಾಗೇಶ ನಾಯಕ, ಪ್ರವೀಣ ಪಟ್ಟಣಶೆಟ್ಟಿ,  ಶಿವಾನಂದ ಪಟ್ಟಣಶೆಟ್ಟಿ,  ಪುರಸಭೆ ಸದಸ್ಯೆ ಹಾಗೂ ರೇಣುಕಾ ಯಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯರಾದ ಗಂಗಾ ಪಟ್ಟಣಶೆಟ್ಟಿ,  ಸುರೇಖಾ ಮುನವಳ್ಳಿ,  ರಮೇಶ ಮುನವಳ್ಳಿ, ಮಲ್ಲನಗೌಡ್ರ ದ್ಯಾಮನಗೌಡ್ರ, ಸುನಿತಾ ದ್ಯಾಮನಗೌಡ್ರ ಉಪಸ್ಥಿತರಿದ್ದರು. ಮೀನಾಕ್ಷಿ ಕಬ್ಬಿನ  ಪ್ರಾರ್ಥನೆ ಮಾಡಿದರು. ಡಾ ರಾಜೇಶ್ವರಿ ಸಿದ್ರಾಮ ಶೆಟ್ಟರ ವಂದನಾರೆ​‍್ಣ ಮಾಡಿದರು. ರೇಣುಕಾ ಚಚಡಿ ಕಾರ್ಯಕ್ರಮ ನಿರೂಪಿಸಿದರು.