ವಿಜಯಪುರ 14: ಸರ್ಕಾರಿ ಕೆಲಸ ದೇವರ ಕೆಲಸ ಎಂದು ಭಾವಿಸಿ ಮಾಡುವ ಕೆಲಸದಲ್ಲಿ ಶ್ರದ್ಧಾ ಭಕ್ತಿಯಿಟ್ಟು ಪ್ರಾಮಾಣಿಕತನ, ಸಮಯ ಪ್ರಜ್ಞೆ, ನಿಸ್ವಾರ್ಥ ಸೇವೆ ಮತ್ತು ಕಾರ್ಯಕ್ಷಮತೆ ಮತ್ತು ಸಂಸ್ಥೆಯ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸಿದರೆ ಸಲ್ಲಿಸಿದ ಸೇವೆ ಸಾರ್ಥಕ ಮತ್ತು ಸಂತೃಪ್ತ ಭಾವ ನಮ್ಮದಾಗುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ. ಎಂ.ಎಸ್.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು.
ಅವರು ನಗರದ ನವಭಾಗದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ಆಯೋಜಿಸಿದ್ದ ಶ್ರೀ ರೇವಣಸಿದ್ದ ಶಿರನಾಳ ಪ್ರ.ದ.ಸ ಇವರು ಬಡ್ತಿ ಪಡೆದು ಕಛೇರಿ ಅಧೀಕ್ಷಕರಾಗಿ ಪದೋನ್ನತಿ ಹೊಂದಿ ಜಂಟಿ ನಿರ್ದೇಶಕರ ಕಛೇರಿ ಧಾರವಾಡ ವರ್ಗಾವಣೆಗೊಂಡ ಪ್ರಯುಕ್ತ ಏರಿ್ಡಸಿದ್ದ ಹೃದಯಪೂರ್ವಕ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಅವರು ಮಾತನಾಡುತ್ತಾ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಉದ್ಯೋಗ ಸಿಗುವುದು ಕಷ್ಟಕರ. ಅದರಲ್ಲೂ ನಮ್ಮ ತಂದೆ-ತಾಯಿ, ಗುರು-ಹಿರಿಯರು, ಆ ದೇವರ ಕೃಪೆ ಮತ್ತು ನಮ್ಮ ಪ್ರಯತ್ನಶೀಲತೆಯಿಂದ ದೊರೆತ ಕೆಲಸವನ್ನು ನ್ಯಾಯೋಚಿತವಾಗಿ ಮತ್ತು ಕೆಲಸ ಕೇಳಿ ಬಂದವರಿಗೆ ಸಕಾಲದಲ್ಲಿ ಸೇವೆ ನೀಡುವ ಮನೋಭಾವ ನಮ್ಮದಾಗಬೇಕು. ಶ್ರೀ ರೇವಣಸಿದ್ದ ಶಿರನಾಳ ಸರ್ ಅವರು ಬಹಳ ಸ್ನೇಹಜೀವಿ, ಎಲ್ಲರೊಂದಿಗೆ ಪ್ರೀತಿ-ಗೌರವದಿಂದ ಒಡನಾಟ ಹೊಂದಿ, ವಿದ್ಯಾರ್ಥಿಗಳಿಗೆ ಅಗತ್ಯವಾದ ಕೆಲಸ ಇದ್ದಾಗ ಕಿಂಚಿತ್ತೂ ವಿಳಂಬ ಮಾಡಿಕೊಟ್ಟು ಕಾಯಕವೇ ಕೈಲಾಸವೆಂದು ನಂಬಿದವರು. ಅವರು ಸಹದ್ಯೋಗಿಗಳೊಂದಿಗೆ ಸಹೃದಯತೆ, ಪ್ರಾಮಾಣಿಕತೆ ಮತ್ತು ಕಾರ್ಯದಕ್ಷತೆಯಿಂದ ಸಲ್ಲಿಸಿದ ಸೇವೆ ನಿಜಕ್ಕೂ ಶ್ಲ್ಯಾಘನೀಯವಾದುದು. ಅವರು ಇನ್ನಷ್ಟು ಉನ್ನತ ಹುದ್ದೆಗೆ ಅಲಂಕರಿಸಲಿ ಮತ್ತು ಆ ದೇವರು ಅವರಿಗೆ ಆಯುಷ್ಯ, ಆರೋಗ್ಯ, ಸಂಪತ್ತು ನೀಡಲೆಂದು ಆಶಯದೊಂದಿಗೆ ಶುಭ ಕೋರಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ ರೇವಣಸಿದ್ದ ಶಿರನಾಳ ಅವರು, ಈ ಸಂಸ್ಥೆಯ ನನಗೆ ಅನೇಕ ಜವಾಬ್ದಾರಿಯನ್ನು ಕಲಿಸಿದೆ. ನಾನು ಯಾವಾಗಲೂ ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಸೇವೆ ಸಲ್ಲಿಸುವೆ. ಜೀವನದಲ್ಲಿ ಏನೇ ಸಾಧನೆ ತೋರಲಿ ಅಥವಾ ಉನ್ನತ ಹುದ್ದೆಗೆ ಹೋದರೂ ನಾವು ನಮ್ಮ ಜನನಿ, ಜನ್ಮಭೂಮಿ ಮತ್ತು ಶಿಕ್ಷಣ ನೀಡಿದ ಮತ್ತು ಸೇವೆ ಸಲ್ಲಿಸಿದ ಸಂಸ್ಥೆಯ ಋಣ ತೀರಿಸಲು ಶ್ರಮಿಸಬೇಕು ಅಂದಾಗ ಮಾತ್ರ ನಮ್ಮ ವೃತ್ತಿ ಸೇವೆ ಪವಿತ್ರ ಮತ್ತು ಸಾರ್ಥಕವಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶ್ರೀ ಸಿದ್ದೇಶ್ವರ ಬುದ್ಧಿಜೀ ಅವರ ಭಕ್ತರಾಗಿರುವ ಶ್ರೀ ರೇವಣಸಿದ್ದ ಶಿರನಾಳ ದಂಪತಿಗಳನ್ನು ಸನ್ಮಾನಿಸಲಾಯಿತು.
ಈ ಸನ್ಮಾನ ಸಮಾರಂಭದಲ್ಲಿ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಎಸ್.ಡಿ.ತೋಂಟಾಪೂರ, ಡಾ. ರಾಜಶ್ರೀ ಮಾರನೂರ, ಡಾ. ಶ್ರೀಮಂತ ಚವ್ಹಾಣ, ಡಾ. ಪ್ರಭುಲಿಂಗ ಪರುಗೊಂಡ, ಡಾ. ಶಿವಾನಂದ ಜಮಾದಾರ, ಪ್ರೊ. ಸಂಗಮೇಶ ಗುರವ, ಡಾ. ವಿಶಾಲಾಕ್ಷಿ ಹೊನ್ನಾಕಟ್ಟಿ, ಡಾ. ದೇವೆಂದ್ರಗೌಡ, ಪ್ರೊ. ಸಿದ್ರಾಮ ಯರನಾಳ, ಪ್ರೊ. ವಿನೋದ ಹುಲ್ಲೂರ, ಡಾ. ಮಮತಾ ಬನ್ನೂರ, ಪ್ರೊ. ಮಹೇಶ್ವರಿ ಹಿರೇಮಠ ಇನ್ನಿತರರು ಸಹ ಉಪಸ್ಥಿತರಿದ್ದರು.