ನಗರದ ಜನತೆಯ ಪರವಾಗಿ ನೀರು ಬೇಕು ಸಮೀತಿಯ ತೀವ್ರ ಆಕ್ರೋಶ

Water wanted on behalf of the people of the city is a strong outrage of the committee

  ನಗರದ ಜನತೆಯ ಪರವಾಗಿ ನೀರು ಬೇಕು ಸಮೀತಿಯ ತೀವ್ರ ಆಕ್ರೋಶ 

   ವಿಜಯಪುರ  28  : ತೆಲಂಗಾಣ ಸರಕಾರವು 5 ಟಿ.ಎಮ್‌.ಸಿ. ನೀರನ್ನು ತಮ್ಮ ರಾಜ್ಯಕ್ಕೆ ಹರಿಸಬೇಕೆಂದು ಕರ್ನಾಟಕ ಸರಕಾರದ ಜಲಸಂಪನ್ಮೂಲ ಇಲಾಖೆಗೆ ಪತ್ರ ಬರೆದಿತ್ತು ಇದರ ಬೆನ್ನಲ್ಲೆ ನಮ್ಮ ನೀರು ಬೇಕು ಸಮಿತಿಯು ಶನಿವಾರ ಇದನ್ನು ಖಂಡಿಸಿ ಪತ್ರಿಕಾ ಪ್ರಕಣಣೆ ಮೂಲಕ ರಾಜ್ಯ ಸರಕಾರಕ್ಕೆ ಎಚ್ಚರಿಕೆ ಮಾಡಿತ್ತು, ಆದರೆ ಮಂಗಳವಾರ ರಾತ್ರಿ ಕರ್ನಾಟಕ ಸರಕಾರ ಜಲ ಸಂಪನ್ಮೂಲ ಇಲಾಖೆಯು ವಿಜಯಪುರ ನಗರದ ಜನತೆಯ ಕುಡಿಯುವ ನೀರಿನ ಕೊರತೆಯನ್ನು ಲೆಕ್ಕಸದೇ 1.27 ಟಿಎಮ್‌.ಸಿ. ನೀರನ್ನು ತೆಲಂಗಾಣ ರಾಜ್ಯಕ್ಕೆ ಹರಿಸಿ ರಾಜ್ಯದ ಜನತೆಗೆ ಮಂಕು ಬೂದಿ ಎರೆಚಿದ್ದಾರೆ. 

ನೀರಿನ ಲೆವೆಲ್ 519 ಮೀಟರ ಇದ್ದರೆ 123 ಟಿ.ಎಮ್‌.ಸಿ. ನೀರು ಇರುತ್ತದೆ, ಇವತ್ತಿನ ದಿವಸ ನೀರಿನ ಲೆವೆಲ್ 513.27 ಮೀಟರ ಇದೆ. ಈಗಾಗಲೇ 13067 ಕ್ಯೂಸೆಕ್ಸ ನೀರನ್ನು ತೆಲಂಗಾಣ ರಾಜ್ಯಕ್ಕೆ ಹರಿಸಲಾಗಿದೆ. ನೀರಿನ ಲೆವೆಲ್ 508 ಮೀಟರ ವರೆಗೆ ಶುದ್ದವಾದ ನೀರನ್ನು ನಗರಕ್ಕೆ ಸರಬರಾಜು ಮಾಡಬಹುದು, ನೀರಿನ ಲೆವೆಲ್ 505 ಮೀಟರಗೆ ಬಂದರೆ ವಿಜಯಪುರ ನಗರದ ಜಾಕವೆಲಗೆ ರಾಡಿ ನೀರು ಬರುವ ಸಂಭವವಿದ್ದು 5 ಟಿ.ಎಮ್‌.ಸಿ. ನೀರನ್ನು ಹರಿಸಿದರೆೆ ನಗರಕ್ಕೆ ನೀರು ಸರಬುರಾಜಿಗೆ ತೊಂದರೆಯಾಗಿ ನೀರಿನ ಹಾಹಾಕಾರ ಉಂಟಾಗುವದು ಖಚಿತ. ಮುಂದಿನ ದಿನಮಾನಗಳಲ್ಲಿ ಕೊಯನಾ ಜಲಾಶಯದಿಂದ ಮಹಾರಾಷ್ಟ್ರದ ರಾಜ್ಯಕ್ಕೆ ಹಣ ಕೊಟ್ಟು ನೀರನ್ನು ಖರಿದಿಸುವ ಪರಿಸ್ಥಿತಿ ಬರಬಹುದು ? 2017ರಲ್ಲಿ ಆದಂತಹ ಕುಡಿಯುವ ನೀರಿನ ಸಮಸ್ಯೆ ಮತ್ತೇ ಮರುಕಳಿಸಬಾರದು.  

ಕೂಡಲೇ ಕರ್ನಾಟಕ ಸರಕಾರವು ಎಚ್ಚೆತ್ತು ನೀರು ಹರಿಸುವದನ್ನು ನಿಲ್ಲಿಸಬೇಕೆಂದು ನೀರು ಬೇಕು ಸಮೀತಿಯ ಅಧ್ಯಕ್ಷರಾದ ಸತೀಶ ವಿಶ್ವನಾಥ ಭಾವಿ ಹಾಗೂ ಉಪಾಧ್ಯಕ್ಷರಾದ ಈರಣ್ಣ ಅಳ್ಳಗಿ ಹಾಗೂ ಸಮಿತಿಯ ಸದಸ್ಯರಾದ ಸಾಗರ ಮೊಗಲಿ ಭಾವೇಶ ಪೋರವಾಲ ಮಹೇಶ ಭಾವಿ ಇವರು ಸರಕಾರಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ.