ಮತದಾನ ಪ್ರತಿಯೊಬ್ಬರ ಹಕ್ಕು, ಕರ್ತವ್ಯವಾಗಿದೆ : ಎಚ್‌.ಎನ್‌.ಬಾವಿಕಟ್ಟಿ

ಬೆಟಗೇರಿಯಲ್ಲಿ ಬೈಕ್ ರಾ​‍್ಯಲಿ ಜಾಥಾ * ಗ್ರಾಪಂ ಪಿಡಿಒ, ಸಿಬ್ಬಂದಿಗಳಿಂದ ಮತದಾನ ಮಹತ್ವ ಕುರಿತು ಜಾಗೃತಿ 

ಬೆಟಗೇರಿ 25: ಮತದಾರ ಯಾದಿಯಲ್ಲಿ ಹೆಸರು ನೋಂದಣಿಯಾಗಿರುವ ಗ್ರಾಮದಲ್ಲಿರುವ ಯುವಕರು, ಸಾರ್ವಜನಿಕರು ತಪ್ಪದೇ ಮತದಾನ ಮಾಡಬೇಕು. ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯವಾಗಿದೆ ಎಂದು ಅರಬಾವಿ ಮತಕ್ಷೇತ್ರ ವ್ಯಾಪ್ತಿಯ ಬೆಟಗೇರಿ ಗ್ರಾಮ ಪಂಚಾಯತಿ ಪಿಡಿಒ ಎಚ್‌.ಎನ್‌.ಬಾವಿಕಟ್ಟಿ ಹೇಳಿದರು.  

ಗೋಕಾಕ ತಾಲೂಕ ಸ್ಲೀಪ್ ಸಮೀತಿ, ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ ಗೋಕಾಕ ಹಾಗೂ ಅರಬಾವಿ ಮತಕ್ಷೇತ್ರ ವ್ಯಾಪ್ತಿಯ ಬೆಟಗೇರಿ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಮುಂಬರುವ ಮೇ.7ರಂದು ನಡೆಯಲಿರುವ ಲೋಕಸಭೆ ಚುನಾವಣೆ ಪ್ರಯುಕ್ತ ಬೆಟಗೇರಿ ಗ್ರಾಮದಲ್ಲಿ ಏ.24ರಂದು ಬೈಕ್ ರಾ​‍್ಯಲಿ ಜಾಥಾ ಮೂಲಕ ಮತದಾನದ ಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ಎಲ್ಲ ಮತದಾರರು ಕಡ್ಡಾಯವಾಗಿ ಮತಚಲಾಯಿಸಬೇಕು ಎಂದರು. 

ಈಗಾಗಲೇ ಸರ್ಕಾರ ನಗರ, ಪಟ್ಟಣ, ಹಳ್ಳಿಗಳಲ್ಲಿ ಮತದಾನದ ಕುರಿತು ತಿಳುವಳಿಕೆ ಮೂಡಿಸಲು ಹಲವಾರು ಪ್ರಾಯೋಗಿಕ ಪ್ರಯತ್ನಗಳ ಮೂಲಕ ಪ್ರಯತ್ನಿಸುತ್ತಿದೆ. ಸ್ಥಳೀಯ ಪ್ರಜ್ಞಾವಂತ ಯುವಕರು ತಮ್ಮ ಸ್ನೇಹಿತ  ಮತದಾರರಿಗೆ ಮತದಾನ ಮಹತ್ವ ಕುರಿತು ಜಾಗೃತಿ ಮೂಡಿಸಬೇಕೆಂದು ಪಿಡಿಒ ಎಚ್‌.ಎನ್‌.ಬಾವಿಕಟ್ಟಿ ತಿಳಿಸಿದರು. 

ಬೆಟಗೇರಿ ಗ್ರಾಮದಲ್ಲಿರುವ ಬಸವೇಶ್ವರ ವೃತ್ತ, ಅಂಬೇಡ್ಕರ ವೃತ್ತ, ಕನಕದಾಸರ ವೃತ್ತ ಸೇರಿದಂತೆ ಸ್ಥಳೀಯ ಪ್ರಮುಖ ಬೀದಿ, ಓಣಿ ಹಾಗೂ ಪ್ರಮುಖ ಸ್ಥಳಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಸೇರಿದಂತೆ ಸುತ್ತಲಿನ 5 ಗ್ರಾಮ ಪಂಚಾಯತಿ ಪಿಡಿಒ, ಸಿಬ್ಬಂದಿಗಳಿಂದ ಬೈಕ್ ರಾ​‍್ಯಲಿ ಜಾಥಾ ಹಮ್ಮಿಕೊಳ್ಳುವ ಮೂಲಕ ಮತದಾನದ ಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. 

ಸ್ಲೀಪ್ ಸಮಿತಿ ಅಧಿಕಾರಿ ರುದ್ರ​‍್ಪ ವಡ್ಡರಗಾಂವಿ ಸೇರಿದಂತೆ ಬೆಟಗೇರಿ, ಮಮದಾಪೂರ, ಗೋಸಬಾಳ, ಕೌಜಲಗಿ, ಕಳ್ಳಿಗುದ್ಧಿ, ಗ್ರಾಮ ಪಂಚಾಯತಿ ಪಿಡಿಒ, ಸಿಬ್ಬಂದಿ, ಸ್ಥಳೀಯರು, ಇತರರು ಇದ್ದರು.