ಮತದಾನ ಜಾಗೃತಿ ಜಾಥಾ: ರಾಜೀವ ಕೂಲೇರ ಚಾಲನೆ

ಸವದತ್ತಿ 23: ತಾಲೂಕಾ ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಂಡ ಮತದಾರರಿಗೆ ಮತದಾನದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಸಹಾಯಕ ಚುನಾವಣಾಧಿಕಾರಿಗಳು ರಾಜೀವ ಎನ್ ಕೂಲೇರ ರವರು ಶುಕ್ರವಾರ ಪುರಸಭೆ ಆವರಣದಲ್ಲಿ ಚಾಲನೆ ನೀಡಿ ಮತದಾರರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.  

ಬಳಿಕ ನನ್ನ ಮತ ಮಾರಾಟಕಿಲ್ಲ, ಮತದಾನ ಮಾಡಿದವನೇ ಮಹಾಶೂರ, ಓಟ ಮಾಡಿದವನೆ ಹೀರೋ, ಮತದಾನದಿಂದ ವಂಚಿತರಾಗಬೇಡಿ, ನಮ್ಮ ಮತ ನಮ್ಮ ಹಕ್ಕು, ಆಮಿಷಕ್ಕೆ ಮರುಳಾಗದಿರಿ ಯೋಚಿಸಿ ಮತ ಚಲಾಯಿಸಿ, ಆಮಿಷಗಳನ್ನು ನಿರಾಕರಿಸಿ ನಿಮ್ಮಿಷ್ಟದಂತೆ ಮತ ಚಲಾಯಿಸಿ, ಪ್ರತಿ ಮತವು ಅಮೂಲ್ಯ ತಪ್ಪದೇ ಮತ ಚಲಾಯಿಸಿ ಎಂದು ವಿವಿಧ ಮತ ಜಾಗೃತಿ ಘೋಷಣೆಗಳನ್ನು ಕೂಗುವುದರ ಮುಖಾಂತರ ಸಾರ್ವಜನಿಕರಲ್ಲಿ ಮತಜಾಗೃತಿ ಮೂಡಿಸಲಾಯಿತು. 

ಮತದಾನ ಜಾಗೃತಿ ಕಾಲ್ನಡಿಗೆ ಜಾಥಾ ಕಾರ್ಯಕ್ರಮವು ಪಟ್ಟಣದ ಪುರಸಭೆ ಕಾರ್ಯಾಲಯದಿಂದ ಆರಂಭವಾಗಿ, ಲಿಂಗರಾಜ ವೃತ್ತ, ಕಡಕೋಳ ಬ್ಯಾಂಕ್ ವೃತ್ತ, ಆನಿ ಅಗಸಿ, ಮೇನ ಬಜಾರ, ಗಾಂಧಿ ಚೌಕದಿಂದ ಪುರಸಭೆ ಕಾರ್ಯಾಲಯಕ್ಕೆ ಬಂದು ಮುಕ್ತಾಯವಾಯಿತು.ತಹಶೀಲ್ದಾರ ಎಮ್ ಆರ್ ಕುಲಕರ್ಣಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲೂಕಾ ಸ್ವೀಪ್ ಸಮಿತಿ ಅಧ್ಯಕ್ಷರು ಯಶವಂತಕುಮಾರ, ಮಾನ್ಯ ಪುರಸಭೆ ಮುಖ್ಯಾಧಿಕಾರಿಗಳು ಸಂಗನ ಬಸಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ, ಸಹಾಯಕ ನಿರ್ದೇಶಕರು (ಪಂ.ರಾ)ಆರ್ ಎ ಪಾಟೀಲ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸುನಿತಾ ಪಾಟೀಲ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಬಸವರಾಜ ಅಯ್ಯನಗೌಡರ, ತಾಪಂ ವ್ಯವಸ್ಥಾಪಕರು ಜಿ ಎಸ್ ಬಡೆಮ್ಮಿ, ಮಲೀಕಜಾನ ಮೋಮಿನ, ಬಸವರಾಜ ಹಂಕಪ್ಪನವರ, ತಾಲೂಕಾ ಮಟ್ಟದ ಅಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು, ಸ್ಕೌಟ್ಸ್‌ ್ಘ ಗೈಡ್ಸ್‌, ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ತಾಪಂ ಸಿಬ್ಬಂಧಿಗಳು, ಪುರಸಭೆ ಸಿಬ್ಬಂದಿಗಳು, ಇನ್ನಿತರರು ಉಪಸ್ಥಿತರಿದ್ದರು.