ಅಪಾಯದ ಅಂಚಿನಲ್ಲಿರುವ ಮರಗಳನ್ನು ತೆರವುಗೊಳಿಸಲು ಗ್ರಾಮಸ್ಥರ ಒತ್ತಾಯ

Villagers urge removal of endangered trees

ಯಮಕನಮರಡಿ 17: ಸಮೀಪದ ದಾದಬಾನಹಟ್ಟಿ ಯಮಕನಮರಡಿ ಸಂಪರ್ಕ ರಸ್ತೆ ಪಕ್ಕದಲ್ಲಿರುವ ಖಾಸಗಿ ಜಾಗೆಗಳಲ್ಲಿ ಒಣಗಿದ ಮರಗಳು ಇದ್ದು ಸದರಿ ಮರಗಳು ಬಿಳುವ ಹಂತದಲ್ಲಿದ್ದು ಈ ಮರಗಳನ್ನು ಕತ್ತರಿಸುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.  

ಈ ರಸ್ತೆಯ ಮೇಲೆ ಸಂಚರಿಸುವ ವಾಹನ ಹಾಗೂ ಸಾರ್ವಜನಿಕರು ಬಿಳುವ ಹಂತದಲ್ಲಿರುವ ಮರವನ್ನು ಕಂಡು ಭಯಭಿತರಾಗಿದ್ದಾರೆ. ಅದರ ಪಕ್ಕದಲ್ಲಿ ಕೆ ಎ ಬಿ ರವರ ಮೇನ್ ಲೈನ ಹಾದು ಹೊಗಿದ್ದು ಸದರಿ ಮರವು ಬಿದ್ದು ಪ್ರಾಣ ಹಾನಿ ಹಾಗೂ ಅದರ ಪಕ್ಕದಲ್ಲಿ ಹಾಗೂ ಎದುರಿಗೆ ಇರುವ ಸಾರ್ವಜನಿಕ ಅಂಗಡಿ  ಮುಗ್ಗಟ್ಟುಗಳು ಇರುತ್ತವೆ ಕಾರಣ ಸಂಬಂದಪಟ್ಟ ಗ್ರಾಮ ಪಂಚಾಯತಿಯವರು ಸದರಿ ಒಣಗಿದ ಮರವನ್ನು ಕತ್ತರಿಸಿ ಸಾರ್ವಜಿನಿಕರಿಗೆ ಆಗುವ ಅಪಾಯವನ್ನು ತಪ್ಪಿಸ ಬೇಕೆಂದು ಗ್ರಾಮಸ್ಥರು ತಿಳಿಸಿದ್ದಾರೆ.