ಗೋಕಾಕ 17: ಗೋಕಾವಿಯ ಸಾಹಿತಿ ವಿದ್ಯಾ ರೆಡ್ಡಿ ಅವರು ರಚಿಸಿದ ಪುಸ್ತಕಗಳ ಲೋಕಾರ್ಪಣೆ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4 ನೇ ರಾ್ಯಂಕ್ ಪಡೆದ ಕುಮಾರಿ ನಿರ್ಮಿತಾ ರೆಡ್ಡಿ ಅವರ ಅಭಿನಂದನಾ ಸಮಾರಂಭವು ಇದೇ ದಿ. 18 ಮೇ ರಂದು ಮುಂಜಾನೆ 10.30 ಗಂಟೆಗೆ ಗೋಕಾಕ ನಗರದ ಕೆಎಲ್ಇ ಶಾಲೆಯಲ್ಲಿ ಜರುಗಲಿದೆ.
ಯುವ ಧುರಿಣರಾದ ಸರ್ವೋತ್ತಮ ಭೀಮಶಿ ಜಾರಕಿಹೊಳಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಗೋಕಾಕ ಕೆಎಲ್ಇ ಸಂಸ್ಥೆಯ ನಿರ್ದೇಶಕರಾದ ಜಯಾನಂದ ಮುನವಳ್ಳಿ, ಗೋಕಾಕ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ. ಬಳಿಗಾರ, ಮೂಡಲಗಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ, ಸಾಹಿತಿಗಳಾದ ಶಂಕರ ಕ್ಯಾಸ್ತಿ, ಡಾಕ್ಟರ್ ಸಾವಿತ್ರಿ ಕಮಲಾಪುರ, ಆರ್. ಎಲ್ ಮಿರ್ಜಿ, ಡಾಕ್ಟರ್ ಪ್ರಿಯಂವದಾ ಹುಲಗಬಾಳಿ, ರಜನಿ ಜಿರಿಗ್ಯಾಳ, ಮಾರುತಿ ದೇಸಾಯಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.