ಚೆಕಪೋಸ್ಟ್ನಲ್ಲಿ ತನಿಖಾಧಿಕಾರಿಗಳು ವಾಹನ ಪರಿಶೀಲನೆ

ಲೋಕದರ್ಶನ ವರದಿ

ಸಂಬರಗಿ: ಡಿಸೆಂಬರ್ 5ರಂದು ನಡೆಯುತ್ತಿರುವ ಕಾಗವಾಡ ವಿಧಾನಸಭಾ ಉಪಚುನಾವಣೆ ಸಂದರ್ಭದಲ್ಲಿ ಗಡಿಭಾಗದ ಗ್ರಾಮಗಳಲ್ಲಿ ಚೆಕ್ಪೋಸ್ಟ್ ಅಳವಡಿಸಿ ಪೋಲಿಸರು ಬಿಗಿಭದ್ರತೆ ಒದಗಿಸಿದ್ದಾರೆ. 

ಆದರೆ ಅನಂತಪೂರ ಹಾಗೂ ಅರಳಿಹಟ್ಟಿ ಗ್ರಾಮಗಳ ಮಹಾರಾಷ್ಟ್ರದ ರಾಜ್ಯ ಹೆದ್ದಾರಿಯಲ್ಲಿ ಚೆಕ್ಪೋಸ್ಟ ಅಳವಡಿಸಿಲ್ಲ? 

ಕನರ್ಾಟಕ ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿರುವ ಮದಬಾವಿ-ಖಟಾವ, ಮಂಗಸೂಳಿ-ಶಿಂಧೆವಾಡಿ, ಬಳ್ಳಿಗೇರಿ-ಜತ್ತ, ಕಾಗವಾಡ-ಮೀರಜ, ಮಂಗಸೂಳಿ-ಅರಗ, ಉಗಾರಖುರ್ದ, ಶಿರಗುಪ್ಪಿ, ಕೊಟ್ಟಲಗಿ-ಮುಚ್ಚಂಡಿ ಸೇರಿದಂತೆ ಎರಡೂ ಕ್ಷೇತ್ರಗಳಲ್ಲಿ ಸೇರಿ 7 ಚೆಕ್ಪೋಸ್ಟ್ ಇದ್ದು ಪ್ರತಿ ಚೆಕ್ಪೋಸ್ಟ್ನಲ್ಲಿ ಗ್ರಾಮ ಪಂಚಾಯತ ಸಿಬ್ಬಂದಿ ಸೇರಿ 6 ಸಿಬ್ಬಂದಿಯನ್ನು ನೇಮಕಾತಿ ಮಾಡಿದ್ದಾರೆ. 

ಪ್ರತಿಯೊಂದು ವಾಹನವನ್ನು 24 ಗಂಟೆಗಳ ಪರಿಶೀಲನೆ ಮಾಡಿ ವಾಹನದ ಸಂಖ್ಯೆಗಳನ್ನು ನೋಂದಾಯಿಸಿಕೊಳ್ಳುತ್ತಿದ್ದಾರೆ. ಎಲ್ಲಾ ಚೆಕ್ಪೋಸ್ಟ್ಗಳಲ್ಲಿಯೂ ಬಿಗಿ ಭದ್ರತೆಯಿದೆ. 

ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ 19 ಸೆಕ್ಟರ್ ಆಫೀಸರ್ಗಳಿದ್ದು, 18 ಪ್ಲೈಯಿಂಗ್ ಸ್ಕ್ವಾಡ್, 6 ವಿಡಿಯೋ ಸವರ್ೈಲೆನ್ಸ್ ತಂಡಗಳು, 2 ವಿಡಯೋ ವೀಕ್ಷಕರು ತಂಡಗಳು, ವೆಚ್ಚ ನಿರ್ವಹಣಾ ತಂಡ, 7 ಸ್ಟ್ಯಾಟಿಕ್ ಸವರ್ೈಲೆನ್ಸ್ ತಂಡಗಳನ್ನು ನಿರ್ವಹಿಸಲಾಗಿದೆ.

ಬಳ್ಳಿಗೇರಿ ಚೆಕಪೋಸ್ಟ್ ತನಿಖಾಧಿಕಾರಿ ಬಿ.ಜಿ.ಗುಂಡಲೂರ ಇವರ ನೇತೃತ್ವದಲ್ಲಿ 6ಜನ ಕೆಲಸ ಮಾಡುತ್ತಿದ್ದು ಮೋಟರ್ ಸೈಕಲಗಳನ್ನು ಸಹ ಪರಿಶೀಲನೆ ಮಾಡುತ್ತಿದ್ದಾರೆ. ಇನ್ನು ಮಹಾರಾಷ್ಟ್ರದ ಗಡಿಯಲ್ಲಿರುವ ಅರಳಿಹಟ್ಟಿ-ಸಲಗರ, ಖಿಳೇಗಾಂವ-ಕವಟೆಮಹಾಂಕಾಳ ರಾಜ್ಯ ಹೆದ್ದಾರಿಯಲ್ಲಿ ಚೆಕಪೋಸ್ಟ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇತ್ತು. ಸದ್ಯದಲ್ಲಿ ಚೆಕಪೊಸ್ಟ ಕಾಣುತ್ತಿಲ್ಲ