ಕೊಪ್ಪಳ 10: ಕುಷ್ಟಗಿ ತಾಲೂಕಿನ ಕಂದಕೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನೆರೆಬೆಂಚಿ ಗ್ರಾಮದಲ್ಲಿನ ನರೇಗಾ ಕಾಯಕ ಸ್ಥಳದಲ್ಲಿ ಜನಜಾಗೃತಿ ಕಲಾರಂಗ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ 2023-24ನೇ ಸಾಲಿನ ಸಂಘ-ಸಂಸ್ಥೆಗಳ ಧನಸಹಾಯ ಯೋಜನೆಯಡಿಯಲ್ಲಿ ಎಂಬ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಲಾವಿದ ಬಸವರಾಜ ಉಪ್ಪಲದಿನ್ನಿ ಅವರು ಶೈಕ್ಷಣಿಕ ಜಾಗೃತಿಯಿಂದ ನಿರುದ್ಯೋಗ ಮಾಯವಾಗಲಿದೆ ಎಂದು ಹೇಳಿದರು.
ರಾಷ್ಟ್ರೀಯ ಯೋಜನೆಗಳು ಜನಸಾಮಾನ್ಯರಿಗೆ ತಲುಪಬೇಕು, ಶಿಕ್ಷಣದ ಅವಶ್ಯಕತೆ ಬಹಳಷ್ಟಿದ್ದು ಎಲ್ಲ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸುವುದರ ಮೂಲಕ ಅವರ ಭವಿಷ್ಯವನ್ನು ಸುಂದರಗೊಳಿಸಬೇಕು. ಕಲ್ಯಾಣ ಕರ್ನಾಟಕ ಭಾಗದ ನಿರುದ್ಯೋಗಿ ಯುವಕ, ಯುವತಿಯರಿಗೆ ವರದಾನವಾಗಿರುವ 371ಜೆ ಕಲಂನ ಅಂಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ಮೂಲಕ ಉನ್ನತ ಶಿಕ್ಷಣ ಮತ್ತು ಉದ್ಯೋಗವನ್ನು ಪಡೆಯಲು ಸಾಧ್ಯ, ಪರಿಸರದ ಸ್ವಚ್ಛತೆ ಬಹಳ ಮುಖ್ಯವಾಗಿದ್ದು. ಮಾಲಿನ್ಯವನ್ನು ತೊಡೆದುಹಾಕಬೇಕಿದೆ” ಎಂದು ಹೇಳಿ ಸ್ವಚ್ಛತೆಯ ಕುರಿತು ಜಾಗೃತಿ ಗೀತೆಯನ್ನು ಹಾಡಿ ಗಮನಸೆಳೆದರು. ನೆರೆಬೆಂಚಿ ಗ್ರಾಮಪಂಚಾಯತಿ ಉಪಾಧ್ಯಕ್ಷರಾದ ಜಯಮ್ಮ ಬಸವರಾಜ ಉಪ್ಪಲದಿನ್ನಿ ಅವರು ತಮಟೆ ಬಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜನಜಾಗೃತಿ ಕಲಾರಂಗ ಸಂಸ್ಥೆಯ ಅಧ್ಯಕ್ಷರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶರಣಪ್ಪ ವಡಿಗೇರಿ ಅವರು ಕಾರ್ಯಕ್ರಮ ಅಧ್ಯಕ್ಷತೆವಹಿಸಿದ್ದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶರಣಪ್ಪ ಬನ್ನಿಗೋಳ ಅವರಿಂದ ಸುಗ್ಗಿಯ ಹಾಡು ಹಾಗೂ ದೇವೇಂದ್ರ್ಪ ಕಮ್ಮಾರ ಅವರಿಂದ ವಚನ ಗಾಯನ, ವೀರಯ್ಯ ಹಿರೇಮಠ ಮತ್ತು ಬಸವರಾಜ ಉಪ್ಪಲದಿನ್ನಿ ಅವರಿಂದ ಜಾಗೃತಿ ಗೀತೆಗಳ ಮೂಲಕ ಜನಮನ ರಂಜಿಸಿದರು. ಮತ್ತು ಶಿವಲಿಂಗಪ್ಪ ಪೂಜಾರ ಅವರ ಕಲಾ ತಂಡದವರಿಂದ ಸ್ವಚ್ಛಭಾರತ ಮತ್ತು ಶೈಕ್ಷಣಿಕ ಜಾಗೃತಿ ವಿಷಯದ ಕುರಿತು ಅರಿವು ಮೂಡಿಸುವ ಬೀದಿನಾಟಕ ಕಾರ್ಯಕ್ರಮ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನೆರೆಬೆಂಚಿ ಗ್ರಾಮ ಪಂಚಾಯತಿ ಸದಸ್ಯರಾದ ಶೇಖಪ್ಪ ಮ್ಯಾಗಳಮನಿ, ಹನಮಗೌಡ ಪಾಟೀಲ, ಶರಣಪ್ಪ ಮೇಟಿ, ಚಂದ್ರಶೇಖರ ಗದ್ದಿ, ಭರಮಣ್ಣ ಕಲಗೋಡಿ, ದುರುಗವ್ವ, ಲೋಕೇಶ ಪಾಟೀಲ, ಬಾನುಬೇಗಂ, ಮಂಜುನಾಥ, ಶರಣಗೌಡ ಮತ್ತು ನಾಗರಾಜ ಸೇರಿದಂತ್ತೆ ಇತರರು ಉಪಸ್ತಿತರಿದ್ದರು.