ನಾಳೆ ನಾಮಪತ್ರ: ಲಖನ್
ಲೋಕದರ್ಶನ ವರದಿ
ಗೋಕಾಕ: ಸೋಮವಾರ 10 ಗಂಟೆಗೆ ನಾನು ನಾಮಪತ್ರ ಸಲ್ಲಿಸುವೆ. ನಾನು ರಮೇಶ ಜಾರಕಿಹೊಳಿ ಅಂತೆ ಲಕ್ಷ ಜನರನ್ನ ಸೇರಿಸುವುದಿಲ್ಲ. ನಿಮಗೆ ನಮ್ಮ ಶಕ್ತಿ ಗೊತ್ತಾಗಲಿದೆ. ಗೋಕಾಕ ರಾಜಕಾರಣ ಯಾರಿಗೂ ಗೊತ್ತಾಗುದಿಲ್ಲ. ಗೋಕಾಕ ರಾಜಕಾರಣ ಬಗ್ಗೆ ಜಾರಕಿಹೊಳಿ ಕುಟುಂಬಕ್ಕೆ ಮಾತ್ರ ಗೊತ್ತಿದೆ ಎಂದು ಕಾಂಗ್ರೇಸ್ ನಿಯೋಜಿತ ಅಭ್ಯಥರ್ಿ ಲಖನ್ ಜಾರಕಿಹೊಳಿ ಹೇಳಿದರು.
ಅವರು, ಶನಿವಾರದಂದು ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ರಮೇಶ ಜಾರಕಿಹೊಳಿಗೆ ಅಳಿಯಂದಿರು ಚೂರಿ ಹಾಕಿದ್ದಾರೆ. ಬರೀ ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಯಾವುದೇ ಮಾಚ್ ಫಿಕ್ಸಿಂಗ್ ಇಲ್ಲ. ಅದು ನಾನು ಹಾಕಿದಂತೆ ಅನಿಸುತ್ತಿದೆ. ರೋಬೋಟ್ ಚಿತ್ರದಂತೆ ನಾವು ರಮೇಶ ಜಾರಕಿಹೊಳಿಯನ್ನ ರೆಡಿ ಮಾಡಿದ್ವಿ. ಈಗ ಅವರ ಅಳಿಯಂದಿರು ಚೀಫ್ ಚೇಂಜ್ ಮಾಡಿದ್ದಾರೆ. ರಮೇಶ ಅಳಿಯಂದಿರು ಭ್ರಷ್ಟಾಚಾರ ಮಾಡಿದನ್ನ ನಾವು ಕಣ್ಣಮುಚ್ಚಿ ನೋಡಬೇಕಾ, ಜನರಗಾಗಿ ನಾನು ಹೋರಾಟ ಮಾಡಬೇಕು ಎಂದರು. ಅದಕ್ಕಾಗಿ ನಾನು ರಮೇಶ ಜಾರಕಿಹೊಳಿಯಿಂದ ದೂರ ಬಂದಿದ್ದೇನೆ. ಕಾಂಗ್ರೆಸ್ಸಿನ ನಮ್ಮ ನಾಯಕರು ನನಗೆ ಟಿಕೆಟ್ ಅಂತಾ ಘೋಷಣೆ ಮಾಡಿದ್ದಾರೆ. ನನ್ನ ಹೋರಾಟ ರಮೇಶ ಜಾರಕಿಹೊಳಿ ಅಳಿಯಂದಿರು ವಿರುದ್ಧ. ನಾನು ಅವರ ವಿರುದ್ಧ ಚುನಾವಣೆ ಮಾಡುತ್ತೇನೆ.
ನಾನಿಗೆ ನಮ್ಮ ತಂತ್ರಗಾರಿಕೆ ಲೀಕ್ ಆಗದಂತೆ ಎಚ್ಚರಿಕೆವಹಿಸಿದ್ದೇನೆ. ಕೋಷನ್ ಪೇಪರ್ ಲೀಕ್ ಮಾಡುವುದಿಲ್ಲ. ನಮ್ಮ ಕ್ಯಾನ್ವಸ್ ಬೇರೆ ನಮ್ಮ ಸ್ಟೈಲ್ ಬೇರೆ. ಗೋಕಾಕನಲ್ಲಿ ನಾನು ರಾಜಕೀಯ ಮಾಡ್ತಿವಿ. ಜಾರಕಿಹೊಳಿ ಕುಟುಂಬಕ್ಕೆ ಮಾತ್ರ ರಾಜಕೀಯ ಗಣಿತ ಗೊತ್ತಾಗಲಿದೆ. ಭ್ರಷ್ಟಾಚಾರ ತೊಡೆದು ಹಾಕಲು ನನ್ನ ಹೋರಾಟ ಅಂತಾ ಲಖನ್ ಜಾರಕಿಹೊಳಿ ಹೇಳಿದ್ದಾರೆ.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 