ಟಿಪ್ಪುಸುಲ್ತಾನ್ ಹುತಾತ್ಮ ದಿನಾಚರಣೆ
ಕುಕನೂರ 4: ಪಟ್ಟದ ಹಜರತ್ ಟಿಪ್ಪು ಸುಲ್ತಾನ್ ವೃತ್ತಕ್ಕೆ ಮಾಲಾರೆ್ಣ ಮಾಡುವ ಮೂಲಕ ಖಿದ್ಮತ್-ಏ-ಖಲ್ಕ್ ಕಮಿಟಿ ವತಿಯಿಂದ ಹಜರತ್ ಟಿಪ್ಪುಸುಲ್ತಾನ್ ಹುತಾತ್ಮದಿನ ಆಚರಣೆ. ಇವತ್ತಿಗೆ ಸರಿಯಾಗಿ 226 ವರ್ಷಗಳ ಹಿಂದೆ ಮೇ 4 ರಂದು ಶ್ರೀರಂಗಪಟ್ಟಣದಲ್ಲಿ ನಡೆದ ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಬ್ರಿಟಿಷರೊಂದಿಗೆ ಧೀರೋದಾತ್ತವಾಗಿ ಹೋರಾಡಿ ವೀರಮರಣವನ್ನಪ್ಪಿ ಹುತಾತ್ಮರಾದ ಮೈಸೂರಿನಹುಲಿ ಹಜರತ್ ಟಿಪ್ಪು ಸುಲ್ತಾನರ ಧೀರತೆ, ಜನಪರ ಆಡಳಿತವನ್ನು ನೆನೆಯೋಣ ಎಂದು ವೃತ್ತಕ್ಕೆ ಮಾಲಾರೆ್ಣ ಮಾಡಿದರು ಈ ಸಂಧರ್ಭದಲ್ಲಿ ಪ.ಪಂ. ಸದಸ್ಯರು ಸಿರಾಜ್ ಕರ್ಮುಡಿ, ಅಫ್ತಾಬ್ ಪಟೇಲ್, ಸೂಫಿಯಾನ್, ಹಾಫಿಜ್ ಅಕ್ಬರ್ ಖಾನ್, ಸರಫ್ರಾಜ್, ಅಬ್ದುಲ್, ಖಾಜಾ, ವಾಹೀದ್, ಪಾರ್ವೆಜ್, ತಾಜು, ಯಾಸೀನ್, ಖಿದ್ಮತ್-ಏ-ಖಲ್ಕ್ ಕಮಿಟಿಯ ಸದಸ್ಯರು ಪಾಲ್ಗೊಂಡಿದ್ದರು