ಸರ್ಕಾರಿ ಬಾಲಮಂದಿರ ದಿಂದ ಮೂರು ಬಾಲಕಿಯರು ನಾಪತ್ತೆ.
Three girls go missing from a government children's home.
ಸರ್ಕಾರಿ ಬಾಲಮಂದಿರ ದಿಂದ ಮೂರು ಬಾಲಕಿಯರು ನಾಪತ್ತೆ.
ಬಳ್ಳಾರಿ 12 : ನಗರದ ಶಾಂತಿ ದಾಮ ಅವರಣದಲ್ಲಿರುವ ಸರ್ಕಾರಿ ಬಾಲಕಿಯರ ಬಾಲ ಮಂದಿರದಿಂದ ಮೂರು ಬಾಲಕಿಯರು ನಾಪತ್ತೆ ಯಾಗಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಇದೆ ತಿಂಗಳು ಅಕ್ಟೋಬರ್ 2 ರಂದು ದಸರ ಹಬ್ಬದ ದಿನ ಸರ್ಕಾರಿ ಬಾಲ ಮಂದಿರದಿಂದ ಕೊಟ್ಟೂರಿನ ಬಿಂದೂಶ್ರೀ 16 ವರ್ಷ ಸಂಡೂರಿನ ಜೀವಿತ 17 ವರ್ಷ ಹೊಸಪೇಟೆಯ ಅಶ್ವಿನಿ ಗೌಲಿ 14 ವರ್ಷ ಎಂಬ ಮೂರು ಬಾಲಕಿಯರು ತಮ್ಮ ತಮ್ಮ ಪ್ರೀಯಕರೊಂದಿಗೆಬಾಲ ಮಂದಿರ ದಿಂದ ಪರಾರಿಯಾದ ಘಟನೆ ಜರುಗಿದೆ ಎಂದು ಬಾಲ ಮಂದಿರದ ನಾಗವೇಣಿಯವರಿಂದ ತಿಳಿದು ಬಂದಿದೆ.ಕಳೆದ ನಾಲ್ಕು ತಿಂಗಳಿಂದ ಬಾಲ ಮಂದಿರದಲ್ಲಿದ್ದ ಕೊಟ್ಟೂರಿನ ಬಿಂದೂ ಶ್ರೀ ಎಂಬ ಬಾಲಕಿ ಮನೆಗೆ ತರೆಳಿ ಮತ್ತೆ ಬಾಲ ಮಂದಿರಕ್ಕೆ ಹಿಂದಿರುಗಿ ಬಂದು ಇಬ್ಬರ ಬಾಲಕಿಯರೊಂದಿಗೆ ಪರಾರಿಯಾಗಿದ್ದಾಳೆ ಪರಾರಿಯಾದ ಬಾಲಕಿಗೆ ಸಂಪೂರ್ಣ ಮಂದಿರದ ಬೀಗದ ಕೈ ವಶ ಇತ್ತು ಎಂಬ ಮಾಹಿತಿ ಬಲ್ಲ ಮೂಲಗಳಿಂದ ಸಂಗ್ರಹವಾಗಿದೆ. ಬಾಲಕಿಯರು ಬಾಲಂಮದಿರ ಬಿಡುವಾಗ ಗೇಟ್ ನಿಂದ ತಮ್ಮ ಸ್ನೀಹಿತೆಯರಿಗೆ ಬಾಯ್ ಬಾಯ್ ಎಂದು ತೆರಳದ್ದಾರೆ ಎಂದು ತಿಳಿದು ಬಂದಿದೆ.ಅದರೆ ಬಾಲ ಮಂದಿರದ ವ್ಯವಸ್ಥಾಪಕಿಯಾಗದ ನಾಗವೇಣಿಯವರನ್ನು ಈ ಕುರಿತು ವಿಚಾರಿಸಿದರೆ ಹಿಂದೆ ಇರುವ 6 ಅಡಿ ಗೋಡೆ ಹಾರಿ ಮೂರು ಜನ ಪರಾರಿಯಾಗಿದ್ದಾರೆ ಎಂದು ತಿಳಿಸುತ್ತಿದ್ದಾರೆ.ಈ ಕುರಿತು ಬಳ್ಳಾರಿ ಮಹಿಳಾ ಪೋಲಿಸ್ ಠಾಣೆಯಲ್ಲಿ ಅಕ್ಟೋಬರ್ 2 ರಂದು ಪ್ರಕರಣ ದಾಖಲಗಿದ್ದು ಇ ಪ್ರಕರಣ ಠಾಣಾಧಿಕಾರಿಗಳಾದ ರಮೇಶ್ ಕುಲರ್ಕಣಿ ಕೈಗೆತ್ತಿಕೊಂಡು ಒಬ್ಬ ಕೊಟ್ಟೂರಿನ ಹಿಂದೂ ಎಂಬ ಬಾಲಕಿಯನ್ನು ಬೆಂಗಳೂರಿನಲ್ಲಿ ಪ್ರೀಯಕರನೊಂದಿಗೆ ಅಥವಾ ಯಾರೋ ಸಹಾಯದಿಂದ ಸೇರಿ ಹಿಡಿದಿದ್ದಾರೆ ಎಂಬ ಮಾಹಿತಿ ಬಾಲ ಮಂದಿರದ ನಾಗವೇಣಿ ಯವರಿಂದ ತಿಳಿದು ಬಂದಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 