ಅಥಣಿ(ವರದಿ ಯಾದವಾಡ): ಸತ್ಯವೆಂಬುವುದು ಸದಾ ಜಾಗೃತ, ಜಗತ್ತಿನಲ್ಲಿ ಸತ್ಯ ಕಂಡವರು ಜೀವನದ ಜಂಜಾಟ ತಿಳಿದುಕೊಳ್ಳುತ್ತಾರೆ. ಹೀಗಾಗಿ ಅವರ ಬದುಕು ಪವಿತ್ರವಾದದ್ದು. ಜ್ಞಾನಿಗಳ ಮಾತು ಅಮೃತವಿದ್ದಂತೆ ಆ ಅಮೃತವನ್ನು ಪ್ರೀತಿಯಿಂದ ಮತ್ತು ನಿಷ್ಠೆಯಿಂದ ಸೇವಿಸಬೇಕು. ಈ ಮಾತನ್ನು ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ನುಡಿದಿದ್ದಾರೆ.
ಒಂದು ತಿಂಗಳವರೆಗೆ ಸಮೀಪದ ಕಾಜಿಬೆಳ್ಳಗಿ ಗ್ರಾಮದ ಘೋಳೇಶ್ವರ ಆಶ್ರಮದಲ್ಲಿ ಆಯೋಜಿಸಲಾಗಿರುವ ಇಂದು ಬೆಳೆಗ್ಗೆ 4ನೇ ದಿನದ ಪ್ರವಚನ ಕಾರ್ಯಕ್ರಮದಲ್ಲಿ ಪೂಜ್ಯರು ಪ್ರವಚನ ನೀಡುತ್ತಿದ್ದರು. ಜ್ಞಾನಿಗಳ ಮಾತು ತಿಳಿದವರು ದೇವರ ಸಮೀಪ ವಿದ್ದಂತೆ, ಸಾಂಪ್ರದಾಯಕ ಸಂಸ್ಕಾರವು ಭಾರತದಲ್ಲೊಯೂ ಧಾಮರ್ಿಕ ನೀತಿಗಳಲ್ಲಿ ಕಟ್ಟಾ ಆಚರಿಸಲಾಗುತ್ತಾ ಬಂದಿದೆ.
ಇಲ್ಲಿ ಉಪನಿಷತ್ತುಗಳಿಗೆ ಬಹಳ ಮಹತ್ವದಿದೆ. ಶಾಂತಿ ಮತ್ತು ಸತ್ಯದ ದಾರಿಯಲ್ಲಿ ನಡೆಯಬೇಕು. ಸತ್ಯ ಶಾಂತಿ ಯಾವಾಗಲೂ ನಮ್ಮನ್ನು ಕಾಯುತ್ತದೆ ವಿನೋಬಾಭಾವೆ ಅವರು ಸುಮಾರು 13 ವರ್ಷಗಳವರೆಗೆ ಬರಿಗಾಲಿನಲ್ಲಿ ನಡೆದರು. ಭೂಮಿಯನ್ನು ಬಡವರಿಗೆ ಹಂಚಿದರು. ಮತ್ತೋಬ್ಬರಿಗೆ ಕೆಟ್ಟದನ್ನು ಮಾಡಲಿಲ್ಲ ಬದುಕೆಂಬ ತೋಟದಲ್ಲಿ ಶರಣರು, ಸಂತರು ಹಾಗೂ ಮಹಾತ್ಮರ ಮಾರ್ಗದಲ್ಲಿ ನಡೆಯಬೇಕೆಂದರು.