ರಾಜ್ಯದಲ್ಲಿ ಹಿಂದೂಗಳಿಗಿಲ್ಲ ರಕ್ಷಣೆ ಶಿರೂರು ಶಿವಯೋಗಿ

There is no protection for Hindus in the state, says Shiroor Shivayogi

ಬ್ಯಾಡಗಿ 10 :  ಕಳೆದ 22 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಮತಾಂಧ ಜಿಹಾದಿಗಳು ನಿರಂತರವಾಗಿ ಹಿಂದುಗಳನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡುತ್ತಿರುವುದು ಕಾಂಗ್ರೆಸ್ಸ ರ್ಕಾರದ ತೃಷ್ಟಿಕರಣ ಎಂದು  ಬಿಜೆಪಿ ತಾಲೂಕು ಅಧ್ಯಕ್ಷ ಶಿವಯೋಗಿ ಶಿರೂರ ಆರೋಪಿಸಿದರು.

ಪಟ್ಟಣದ ಸುದ್ದಿಗಾರನಿಗೆ ಮಾತನಾಡಿದವರು ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ ಶೆಟ್ಟಿ ಹತ್ಯೆ ಖಂಡನೀಯ ರಾಜ್ಯ ಸರ್ಕಾರ ಮುಖ್ಯಮಂತ್ರಿ ಹಿಂದೂ ವಿರೋಧಿ ಯಾಗಿದ್ದು ಅವರ ಅತಿಯಾದ ಓಲೈಕೆ ಮುಸ್ಲಿಂ ಮತಾಂದವರು ಕಾನೂನನ್ನು ಕೈಗೆತ್ತಿಕೊಂಡು ಹಿಂದುಗಳ ಕಗ್ಗೊಲೆ ಮಾಡುತ್ತಿದ್ದಾರೆ ಸಿದ್ದರಾಮಯ್ಯನವರ ಮೊದಲ ಅವಧಿಯಲ್ಲಿ ಹಲವು ಹಿಂದೂ ಕಾರ್ಯಕರ್ತರ ಕೊಲೆ ನಡೆದಿತ್ತು ಇವೆಲ್ಲವುಗಳು ಕಾಂಗ್ರೆಸ್ ಪಕ್ಷದ ಅತಿಯಾದ ತುಷ್ಟಿಕರಣದ ಪ್ರಭಾವದಿಂದ ಆಗಿರುವ ಹಿಂದೂ ಹತ್ಯೆಗಳು, ಕಾಂಗ್ರೆಸ್ ಸರ್ಕಾರವೇ ಇದಕ್ಕೆ ಕಾರಣ ಮತಾಂಧರಿಗೆ ಕಾನೂನಿನ ಕಿಂಚಿತ್ತು ಭಯವಿಲ್ಲದೆ ಇಂತಹ ಅಮಾನುಷ ಕೆಲಸವನ್ನು ಮಾಡಿದ್ದು ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನಿನ ವ್ಯವಸ್ಥೆಗೆ ಕನ್ನಡಿ ಹಿಡಿದಂತಾಗಿದೆ ಎಂದು ಆರೋಪಿಸಿದರು.