ಹಣ ಗಳಿಸುವದರಲ್ಲಿ ಸುಖವಿಲ್ಲ: ಡಾ. ವಿಜಯಲಕ್ಷ್ಮೀ

ಧಾರವಾಡ 2 : ನಾವು ಮಾಡುವ ವಿಚಾರಧಾರೆಯಿಂದ ಆರೋಗ್ಯ ಮತ್ತು ಅನಾರೋಗ್ಯ ಎರಡನ್ನು ಪಡೆಯಬಹುದು, ಅದಕ್ಕಾಗಿ ಯಾವಾಗಲೂ ಧನಾತ್ಮಕ ಚಿಂತನೆಗಳನ್ನು ಮಾಡಿ ಎಂದು ಕನರ್ಾಟಕ ವಿಶ್ವವಿದ್ಯಾಲಯ ಮನೋವಿಜ್ಞಾನ ವಿಭಾಗದ ಮಾಜಿ ಡೀನ್ ಹಾಗೂ ಸಿಂಡಿಕೇಟ ಸದಸ್ಯೆ ಡಾ.ವಿಜಯಲಕ್ಷ್ಮೀ.ಎ.ಅಮ್ಮಿನಭಾವಿ ಅವರು ಅಂಜುಮನ್ ಇಸ್ಲಾಂ ಸಂಸ್ಥೆಯ ಸಭಾಭವನದಲ್ಲಿ ಅಂಜುಮನ್ ಇನಸ್ಟಿಟ್ಯೂಟ್ ಆಫ ಇನಫಾರಮೇಶನ್  ಸೈನ್ಸ್ ಆ್ಯಂಡ್ ಮ್ಯಾನೇಜಮೇಂಟ ನ 23 ನೇ ವಾಷರ್ಿಕೋತ್ಸವ ಕಾರ್ಯಕ್ರಮದಲ್ಲಿ ನೆರೆದ ವಿದ್ಯಾಥರ್ಿಗಳನ್ನು ಉದ್ದೇಶಿಸಿ ಮಾತನಾಡಿದರು.

  ಯಾವುದು ಅಸಾಧ್ಯವಿಲ್ಲ, ಏನಾದರೂ ಸಾಧಿಸಬೇಕಾದರೆ ಮನ ಮಂಥನ, ಕಠಿಣ ಪರಿಶ್ರಮ ಅವಶ್ಯ, ನಿಮಗೆ ಯಾವುದೇ ಸಮಸ್ಯೆಗಳು ಇದ್ದಲ್ಲಿ ಮುಚ್ಚು ಮರೆ ಇಲ್ಲದೆ ಪಾಲಕರ, ಶಿಕ್ಷಕರ ಜೊತೆ ವಿಚಾರ ವಿಮಶರ್ೆ ಮಾಡಿ ಪರಿಹಾರ ಕಂಡುಕೊಳ್ಳಿ, ನಿಮ್ಮೊಂದಿಗೆ ಸುತ್ತಮುತ್ತ ಇರುವವರನ್ನು ಬೆಳೆಸುವ ಮಟ್ಟಿಗೆ ನಾಯಕತ್ವ ಗುಣಗಳನ್ನು ಹೊಂದಿ, ಮಾನವೀಯ ಮೌಲ್ಯಗಳಿಗೆ ಮಹತ್ವ ನೀಡಿ, ಮನೆಯ ಸಂಸ್ಕಾರದಿಂದ ಉತ್ತಮ ಸಂಸ್ಕೃತಿ ಬರುತ್ತೆ, ಆತ್ಮ ಗೌರವ ಕಂಡುಕೊಳ್ಳಲು ಪ್ರಯತ್ನಿಸಿ, ವಿದ್ಯಾಥರ್ಿ ಜೀವನದಲ್ಲಿ ಸಮಯ ಪಾಲನೆ ಬಹಳ ಮುಖ್ಯ, ಪ್ರತಿ ನಿಮಿಷ ಜ್ಞಾನವೃದ್ಧಿಗೊಳಿಸಲು ಸಿಗುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ, ಹಣ ಗಳಿಸುವದರಲ್ಲಿ ಸುಖವಿಲ್ಲ, ಎಲ್ಲರೊಂದಿಗೆ ಪ್ರೀತಿ ವಿಶ್ವಾಸದೊಂದಿಗೆ ಇದ್ದು ಯಶಸ್ವಿಗಳಾಗಿ ಎಂದರು. 

ಉಪ ವಿಭಾಗೀಯ ಅಧಿಕಾರಿ ಮೊಹಮದ್ ಜುಬೇರ್ ಮಾತನಾಡಿ ಪದವಿ ಪಡೆದರೆ ಮಾತ್ರ ಸಲ್ಲದು ಅದರೊಂದಿಗೆ ಜ್ಞಾನ ಭಂಡಾರ ಹೆಚ್ಚಿಸಲು ಸ್ಪಧರ್ಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೋಳ್ಳಿ, ಕಲಿಕೆ ನಿರಂತರ ವಿದ್ಯಾಕಾಶಿಯಲ್ಲಿ ಇರುವ ನೀವು ಹೆಚ್ಚಿನ ಕಲಿಕೆಯ ಬಯಕೆ ಇರಲಿ ಎಂದರು.

ಕಾರ್ಯಕಮದಲ್ಲಿ 2018-19 ರ ಕಾಲೇಜ್ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಹಾಗೂ ಪ್ರೋ. ಅಬ್ದುಲ್ ಕಿತ್ತೂರ, ಮೊಹಮದ್ ಅಲ್ತಾಫ ಶೇಖ್, ಅಶ್ಪಾಕ ಬೆಟಗೇರಿ, ಜಮೀತ ಬೆಟಗೇರಿ, ಅವರನ್ನು ಸನ್ಮಾನಿಸಲಾಯಿತು.

ಕೆ ಸೆಟ್ ಪರೀಕ್ಷೆ ಪಾಸಾದ ಸಂಸ್ಥೆಯ ಪ್ರೋ. ಗಳಾದ ಅಬ್ದುಲ್ ಮತೀನ ಬಿಡಿವಾಲೇ, ಬುಶರಾ ನದಾಫ, ಅಸ್ಮತಾಜ ಫಾರೂಕಿ, ಸುಧಾ ತುಬ್ಬಕಿ, ಹಾಗೂ ಡಾಕ್ಟರೇಟ ಪಡೆದ ಸಜ್ಜಾದ ಪಾರೆ ಅವರನ್ನು ಸಂಸ್ಥೆಯ ಅಧ್ಯಕ್ಷ ನಿಸಾರ್ಅಹ್ಮದ ಸನ್ಮಾನಿಸಿದರು.

ರೆಡ್ಕ್ರಾಸ್ ವಿಂಗ್ದಿಂದ ಅಂಜುಮನ್ ಪ್ರೌಢ ಶಾಲೆ,ಕಾಲೇಜು, ಅಲ್ಲದೆ ನಗರದ ಇತರ ಶಾಲಾ ಕಾಲೇಜಿನ 25 ಬಡ ವಿದ್ಯಾಥರ್ಿ ವಿದ್ಯಾಥರ್ಿನಿಯರಿಗೆ ಪಠ್ಯ ಪುಸ್ತಕಗಳನ್ನು ಉಚಿತವಾಗಿ ನೀಡಲಾಯಿತು. ಬಿಸಿಎ, ಬಿಬಿಎ ಸೆಮಿಸ್ಟರ್ನಲ್ಲಿ ಹೆಚ್ಚು ಅಂಕ ಪಡೆದ 15 ವಿದ್ಯಾಥಿಗಳಿಗೆ ನಗದು ಪುರಸ್ಕಾರ ಹಾಗೂ ಪಾರಿತೋಷಕ ನೀಡಲಾಯಿತು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಜುಮನ್ ಇಸ್ಲಾಂ ಸಂಸ್ಥೆಯ ಆಡಳಿತ ಅಧಿಕಾರಿ ನಿಸಾರ್ ಅಹ್ಮದ ಮಾತನಾಡಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ವಿದ್ಯಾಥರ್ಿಗಳನ್ನು ಅಭಿನಂದಿಸಿ, ತಂದೆ ತಾಯಿಯರನ್ನು ಗೌರವಿಸಿ, ಉತ್ಕಟವಾದ ಗುರಿ ಹೊಂದಿ ಅದನ್ನು ಸಾಧಿಸಲು ರೂಪ ರೇಷೆ ಗೈದು ಕಠಿಣ ಪರಿಶ್ರಮದೊಂದಿಗೆ ಅಭ್ಯಾಸ ಮಾಡಿದ್ದಲ್ಲಿ ಯಶಸ್ಸು ಸಾಧ್ಯ ಎಂದರು, ಬ್ಯಾಂಕಿಂಗ್ ಕೆ.ಎ.ಎಸ್, ಹಾಗೂ ಆಯ್.ಎ.ಎಸ್. ಸ್ಪಧರ್ಾತ್ಮಕ ಪರೀಕ್ಷೆಗಳ ಮಾರ್ಗದರ್ಶನವನ್ನು  ಪದವಿಯೊಂದಿಗೆ ನೀಡಲು ಸಂಸ್ಥೆಯು ಶ್ರಮಿಸುತ್ತಿದೆ ಎಂದರು.

ಪ್ರಾಂಶುಪಾಲ ಎಮ್.ಎಲ್ ಕಿಲ್ಲೆದಾರ, ಜಿಮ್ಖಾನಾ ಚಟುವಟಿಕೆಗಳ ಚೇರ್ಮನ್ ಪ್ರೋ. ಎನ್.ಎಚ್ ಪಾಟೀಲ, ವಿದ್ಯಾಥರ್ಿಗಳ ಪ್ರಧಾನ ಕಾರ್ಯದಶರ್ಿ ಬುರಾನ್.ಎಮ್.ಬಗ್ದಾದಿ, ಉಪ ಪ್ರಧಾನ ಕಾರ್ಯದಶರ್ಿ ಆಪ್ರೀನ್.ಎನ್.ಘೊಡೆವಾಲೆ, ವಿದ್ಯಾಥರ್ಿಗಳ ಜಿಮ್ಖಾನಾ ಚಟುವಟಿಕೆಯ ಕಾರ್ಯದಶರ್ಿ ಮಹ್ಮದರಫಿಕ.ಎಮ್.ಜವಳಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

         ಸಾಹಿಲ್ ಇಂಗಳಗಿ ಬಿಸಿಎ ವಿಭಾಗದ ಅತ್ಯುತ್ತಮ ವಿದ್ಯಾಥರ್ಿ. ಹಾಗೂ ನಾಜಿಶ ಶಿವಳ್ಳಿ 2017-18 ರ ಬಿಸಿಎ ವಿಭಾಗದ ಅತ್ಯುತ್ತಮ ವಿದ್ಯಾಥರ್ಿನಿ

ಇಮ್ರಾನ ಬಳ್ಳಾರಿ ಹಾಗೂ ರುಕ್ಸಾನಾ ಬೇಗಂ 2017-18 ರ ಬಿಬಿಎ ವಿಭಾಗದ ಅತ್ಯುತ್ತಮ ವಿದ್ಯಾಥರ್ಿನಿ. ಪಾರಿತೋಷಕ ಮತ್ತು ಪ್ರಮಾಣ ಪತ್ರ ನೀಡಲಾಯಿತು  

ಕುರಾನ್ ಪಠಣ ಸನಾ ಅಬುಲ ಜಹೀರ್, ಬಸವಣ್ಣನವರ ವಚನ ತೇಜಸ್ವೀನಿ ಸಾಲಿಮಠ,  ಬೈಬಲ್ ಮಖಿಸಾ ರಾಬರ್ಟ, ನಾಡಗೀತೆ ಆಯಿಶಾ ಮತ್ತು ತಂಡ. ಕಾರ್ಯಕ್ರಮ ನಿರೂಪಣೆ ಅನೀಸ್ ಫಾತೀಮಾ ತೊರಗಲ್, ಸ್ವಾಗತ ಪ್ರೋ. ಸುಮಾ ಹಳಿಯಾಳ, ವಂದನಾರ್ಪಣೆ ಯಾಸ್ಮೀನ್ ಸೈಯ್ಯದ, ಮಾಡಿದರು.