ಎನ್‌.ಆರ್‌.ಸಿ. ಮತ್ತು ಸಿಎಎ ಕಾಯ್ದೆಯನ್ನು ಹಿಂಬಾಗಿಲಿನಿಂದ ಜಾರಿ ಮಾಡುವ ಸಂಚು ಅಡಗಿದೆ

ಎನ್‌.ಆರ್‌.ಸಿ. ಮತ್ತು ಸಿಎಎ ಕಾಯ್ದೆಯನ್ನು ಹಿಂಬಾಗಿಲಿನಿಂದ ಜಾರಿ ಮಾಡುವ ಸಂಚು ಅಡಗಿದೆ There is a conspiracy to implement NRC and CAA through the back door

ಲೋಕದರ್ಶನ ವರದಿ 

ಗಜೇಂದ್ರಗಡ 24 : ಭಾರತ ಚುನಾವಣಾ ಆಯೋಗವು ಆರಂಭಿಸಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿಯಾಗಿದೆ. ಇದರ ವಿರುದ್ಧ ವ್ಯಾಪಕ ಜನಾಂದೋಲನದ ಅಗತ್ಯವಿದೆ’ ಎಂದು ಅಂಜುಮನ್ ಇಸ್ಲಾಂ ಕಮೀಟಿ ಮಾಜಿ ಕಾರ್ಯದರ್ಶಿ ಹಾಗೂ ನ್ಯಾಯವಾದಿ ದಾವಲಸಾಬ ತಾಳಿಕೋಟಿ ಹೇಳಿದರು. ಸಮೀಪದ ವದೇಗೋಳ ಗ್ರಾಮದಲ್ಲಿ ಆಯೋಜಿಸಿದ್ದ ಎಸ್‌.ಐ.ಆರ್‌. ಜನಜಾಗೃತಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಎಸ್‌ಐಆರ್ ಮೂಲಕ ದೇಶದ ಜನಸಾಮಾನ್ಯರ ನಾಗರಿಕತ್ವವನ್ನು ಕಿತ್ತುಕೊಂಡು ನಾಗರಿಕತ್ವಕ್ಕೆ ಸಂವಿಧಾನ ರಕ್ಷಣೆಯೇ ಇಲ್ಲದಂತೆ ಮಾಡುವುದು ಇದರ ಹಿಂದಿರುವ ಅತಿದೊಡ್ಡ ಹುನ್ನಾರವಾಗಿದೆ ಎಂದರು.

ಆರ್‌. ನೆಪದಲ್ಲಿ ಈ ದೇಶದಜನರ ಮೇಲೆ ಪರೋಕ್ಷವಾಗಿ ಎಫ್‌.ಐ.ಆರ್  ಹಾಕಲು ಹೊಂಚು ಹಾಕಿದೆ.  ಚುನಾವಣಾ ಆಯೋಗವನ್ನು ಮುಂದಿಟ್ಟುಕೊಂಡು ಜನರ ಬಳಿ ಸುಲಭಕ್ಕೆ ಸಿಗದಿರುವ ದಾಖಲೆಗಳನ್ನು ಕೇಳಿ ಅವರನ್ನು ಸಂಕಷ್ಟಕ್ಕೆ ದೂಡುವುದು ಹಾಗೂ ಅವರ ಹಕ್ಕುನ್ನು ಕಿಸಿದುಕೊಳ್ಳವ ದುರುದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದ್ದು ಇದು ಕೇವಲ ಮೇಲ್ನೋಟಕ್ಕೆ ಮತಪಟ್ಟಿ ಪರಿಷ್ಕರಣೆ ಅಲ್ಲ, ಎನ್‌.ಆರ್‌.ಸಿ.ಮತ್ತು ಸಿಎಎ ಕಾಯ್ದೆಯನ್ನು ಹಿಂಬಾಗಿಲಿನಿಂದ ಜಾರಿ ಮಾಡುವ ಸಂಚು ಅಡಗಿದೆಎಂದು ಆರೋಪಿಸಿದರು. ಹಾಗಾಗಿ ನಾವು ಜಾಗೃತಗೊಳ್ಳಬೇಕಿದೆ.

ನಮ್ಮ ನೆರಹೊರೆ ಸೇರಿದಂತೆ ಯಾರೊಬ್ಬರ ಮತದಾನದ ಹಕ್ಕು ರದ್ದಾಗದಂತೆ ನೋಡಿಕೊಂಡು ನಾವೆಲ್ಲರೂ ಒಗ್ಗಟಿನಿಂದ ಈ ಸವಾಲನ್ನು ಎದುರಿಸಬೇಕಿದೆ ಎಂದರು. ಪ್ರಸ್ತಾವಿಕವಾಗಿ ಅಂಜುಮನ್ ಇಸ್ಲಾಂಕಮೀಟಿ ಕಾರ್ಯದರ್ಶಿ ಮಾಸುಮಲಿ ಮದಗಾರ ಮಾತನಾಡಿದರು. ಈ ವೇಳೆ ವದೇಗೋಳ ಅಧ್ಯಕ್ಷ ಮಾಬುಸಾಬ ಮಕಾನದಾರ, ಎ.ಕೆ.ಕಾತರಕಿ, ನಾಸೀರ್ ಅಲಿ ಸುರಪುರ, ಖಾಸಿಂಸಾಬ ಸುಂಕದ, ಮಕ್ತುಸಾಬ್ ಮಕಾನದಾರ, ಭಾಷೆಸಾಬ ಮುಲ್ಲಾ ಅಕ್ತಾರಾ ಹುಸೇನ್ ಜಿಲಿಬಿಲಿ, ಪರಿಮಸಾಬ್ ಮಕಾನದಾರ, ಮುರ್ತುಜಾ ಜೂಲಕಟ್ಟಿ,  ಸೇರಿದಂತೆ ವದೇಗೋಳ ಗ್ರಾಮದ ಸಮುದಾಯ ಭಾಂದವರು ಉಪಸ್ಥಿತರಿದ್ದರು.