ಮೂಡಲಗಿ: ಶಾಲೆಗಳ ಅಳಿವು ಉಳಿವಿಗಾಗಿ ಜನ ಪ್ರತಿನಿಧಿಗಳ ಪಾತ್ರ ಅಮೂಲ್ಯ
ಲೋಕದರ್ಶನ ವರದಿ
ಮೂಡಲಗಿ 14: ಇಂದಿನ ಸ್ಪಧರ್ಾತ್ಮಕ ಶಿಕ್ಷಣ ವ್ಯವಸ್ಥೆಯಲ್ಲಿ ನಗರ ಪ್ರದೇಶಗಳಲ್ಲಿ ಸರಕಾರಿ ಶಾಲೆಗಳ ಅಳಿವು ಉಳಿವಿಗಾಗಿ ಶಿಕ್ಷಕರ ಪಾಲಕರ ಎಸ್.ಡಿ.ಎಮ್.ಸಿ ಹಾಗೂ ಜನ ಪ್ರತಿನಿಧಿಗಳ ಸಹಕಾರದ ಪಾತ್ರ ಅಮೂಲ್ಯವಾಗಿದೆ ಎಂದು ಮೂಡಲಗಿ ಸಿ.ಆರ್.ಪಿ. ಕೆ ಎಲ್ ಮೀಶಿ ಹೇಳಿದರು.
ಇಂದು ಆಕಸ್ಮೀಕವಾಗಿ ನಗರದ ತಳವಾರ ತೋಟದ ಶಾಲೆಯಲ್ಲಿ ಜರುಗಿದ ಸರಕಾರಿ ಶಾಲಾ ಮಕ್ಕಳಿಗೆ ಪುರಿ ಪುಳಿಯೋಗರೆ ವಿಶೇಷ ಭೋಜನಕ್ಕೆ ಚಾಲನೆ ನೀಡಿ ಮಾತನಾಡಿದರು. ನಗರಕ್ಕೆ ಹೊಂದಿಕೊಂಡು ತೋಟ ಪಟ್ಟಿಯಲ್ಲಿದ್ದರು ಸುಂದರ ತಾಣದ ರೂಪದಲ್ಲಿ ಕಾಣುತ್ತಿರುವ ಶಾಲೆ ನೀಜಕ್ಕೂ ಮಾದರಿಯದಾಗಿದೆ. ಶಾಲೆಯಲ್ಲಿಯ ಮಕ್ಕಳ ಕಲಿಕೆ, ಪೂರಕ ವಾತಾವರಣ, ಪರಿಸರ ಪ್ರೇಮತ್ವ ಮೆಚ್ಚುಗೆ ನೀಡುವಂತಿದೆ.
ಪ್ರಸಕ್ತ ವರ್ಷ ಈ ಶಾಲೆಯಲ್ಲಿ 2 ಸಲ ಇಂಡ್ಲಿ, ಜಪಾತಿ, ಸೀರಾ, ಹಾಲುಗ್ಗಿಯಂತಹ ಪೌಷ್ಠಿಕಾಂಶಯುಳ್ಳ ಆಹಾರಗಳನ್ನು ಸ್ವತಃ ಹಾಗೂ ಶಿಕ್ಷಣ ಪ್ರೇಮಿಗಳಿಂದ ಪಡೆದು ನೀಡಿರುವದು ಪ್ರಶಂಸಾರ್ಹವಾಗಿದೆ. ಈ ಶಾಲೆಯ ಪ್ರಧಾನ ಗುರುಮಾತೆ ಆರ್ ಬಿ ಶೆಕ್ಕಿಯವರಿಗೆ ರಾಜ್ಯ ಮಟ್ಟದ ಉತ್ತಮ ನಲಿ ಕಲಿ ಶಿಕ್ಷಕಿ ಪ್ರಶಸ್ತಿ ದೊರೆತಿರುವದು ದುಡಿಮೆಗೆ ತಕ್ಕ ಫಲ ಸಿಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಮಧ್ಯಾಹ್ನ ಉಪಹಾರ ಯೋಜನೆಯಡಿ ಶಾಲೆಯ 60 ಮಕ್ಕಳಿಗೆ ಪುರಿ, ಪುಳಿಯೋಗರೆಯನ್ನು ನೀಡಿದರು.ಈ ಸಂದರ್ಭದಲ್ಲಿ ಪ್ರಧಾನ ಗುರುಮಾತೆ ಆರ್.ಬಿ ಶೆಕ್ಕಿ, ಎಸ್.ಎನ್ ದಬಾಡಿ, ಜಯಶ್ರೀ ಕಾಗಲಿ, ಕೆಂಪಣ್ಣ ಮಾವನೂರಿ, ಪಮ್ಮವ್ವ ತಳವಾರ, ಮಹಾದೇವಿ ಕುರಬಟ್ಟಿ ಹಾಗೂ ವಿದ್ಯಾಥರ್ಿಗಳು ಹಾಜರಿದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 