ರಾತ್ರಿ ಇಡಿ ಸುರಿದ ಮಳೆಗೆ ಮನೆಯಲ್ಲಿಯ ದವಸ, ಧಾನ್ಯ ಸಂಪೂರ್ಣ ನಾಶ

ರಾತ್ರಿ ಇಡಿ ಸುರಿದ ಮಳೆಗೆ ಮನೆಯಲ್ಲಿಯ ದವಸ, ಧಾನ್ಯ ಸಂಪೂರ್ಣ ನಾಶ The rain that poured all night completely destroyed the crops and crops in the house

ಲೋಕದರ್ಶನ ವರದಿ 

ಜಮಖಂಡಿ 10: ತಾಲೂಕಿನ ತುಂಗಳ ಗ್ರಾಮದಲ್ಲಿ ರಾತ್ರಿ ಸುರಿಯುತ್ತಿವ ಮಳೆಯ ನೀರು ಮನೆಯೊಳ್ಳಗೆ ನುಗ್ಗಿದರಿಂದ ಮನೆಯಲ್ಲಿ ಇರುವ ದಿನಸಿ ವಸ್ತುಗಳು ಸಂಪೂರ್ಣ ನಾಶವಾಗಿದ್ದಾವೆಂದು ಗ್ರಾಮಸ್ಥರು ತಮ್ಮ ಅಳಲು ತೊಂಡಿಕೊಂಡಿದ್ದಾರೆ. ಗ್ರಾಮದಲ್ಲಿ ದೊಡ್ಡ ಗಾತ್ರದ ಗಟ್ಟಾರು ಇದ್ದು. ಪಕ್ಕದಲ್ಲಿ ಜಮೀನು ಹೊಂದಿದ್ದು. ಜಮೀನಿನವರು ಗಟ್ಟಾರ ಬಂದ ಮಾಡಿದ ಪರಿಣಾಮ ರಾತ್ರಿ ಸಮಯದಲ್ಲಿ ಸುರಿಯುತ್ತಿರುವ ಮಳೆಯ ನೀರು ಪಕ್ಕದಲ್ಲಿ ದಲಿತ ಕೇರಿಯೊಳ್ಳಗೆ ನುಗ್ಗಿ. ಮನೆಯೊಳ್ಳಗೆ ಇರುವು ದಿನಸಿ ವಸ್ತುಗಳು ಹಾಗೂ ಅಕ್ಕಿ, ಬೆಳೆಕಾಳು ಸೇರಿದಂತೆ ಎಲ್ಲವೂ ಸಂಪೂರ್ಣವಾಗಿ ನಾಶವಾಗಿದ್ದಾವೆ. ರಾತ್ರಿ ಸಮಯದಲ್ಲಿ ಪುಟ್ಟ ಮಕ್ಕಳನ್ನು ಕರೆದುಕೊಂಡು ನಿದ್ರೆ ಮಾಡದೆ ಹಾಗೆ ಕುಳಿತುಕೊಳ್ಳುವ ಪರಿಸ್ಥಿತಿ ಆಗಿದೆ ಎಂದು ತಮ್ಮ ಅಳಲನ್ನು ತೊಂಡಿಕೊಂಡಿದ್ದಾರೆ.