ಲೋಕದರ್ಶನ ವರದಿ
ಅಂಕೋಲಾ 11: ಕನ್ನಡವನ್ನು ಅನ್ನದ ಭಾಷೆಯನ್ನಾಗಿ ರೂಪಿಸುವವರೆಗೆ ಈ ಭಾಷೆಯತ್ತ ಕನ್ನಡಿಗರಿಗೆ ಇರುವ ತಾತ್ಸಾರ ತಪ್ಪದು ಎಂದು ಹಿರಿಯ ಸಾಹಿತಿ ಡಾ. ಶ್ರೀಧರ ಬಳಗಾರ ನುಡಿದರು.
ಅವರು ಇಲ್ಲಿಯ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ಅಂಕೋಲಾ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಜರುಗಿದ ಎಂಟನೆಯ ತಾಲೂಕು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿ ಆಡಿದರು.
ದೊಡ್ಡ ಶಾಪ:
ಇಂದು ಭಾಷೆ, ಧರ್ಮ, ಜಾತಿಯಿಂದ ಹಿಡಿದು ಎಲ್ಲ ಕ್ಷೇತ್ರಗಳನ್ನು ರಾಜಕಾರಣಿಗಳು ಒಡೆದು ಆಳುವ ಪ್ರವೃತ್ತಿ ಅನುಸರಿಸುತ್ತಿರುವುದು ಸಮಾಜಕ್ಕೆ ಅಂಟಿದ ದೊಡ್ಡ ಶಾಪ.ಕೇವಲ ತಕ್ಷಣದ ಲಾಭಕ್ಕಾಗಿ ಭವಿಷ್ಯದ ಪರಿಣಾಮವನ್ನು ದೂರದೃಷ್ಟಿಯಿಂದ ನೋಡದೇ ವಿಘಟಿಸುವ ಕೃತ್ಯ ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಹಕಬೇಕು ಸವಾಲು ನಮ್ಮೆದುರು ಇದೆ. ಹೃದಯದ ಭಾಷೆಯ ಮೂಲಕ ಪ್ರಭುತ್ವದ ಈ ನಡೆಯನ್ನು ವಿಫಲಗೊಳಿಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ಧ ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕಕರ್ಿಕೋಡಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಸಾಹಿತಿ ಎನ್.ವಿ.ನಾಯಕ, ಪತ್ರಕರ್ತ ವಿಠ್ಠಲದಾಸ ಕಾಮತ್, ಜಿ.ಪಂ ಸದಸ್ಯರುಗಳಾದ ಉಷಾ ಉದಯ ನಾಯ್ಕ, ಸರಳಾ ದೀಕ್ಷಿತ ನಾಯಕ ಮಾತನಾಡಿ ಸಮ್ಮೇಳನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸನ್ಮಾನ- ಗೌರವ
ಇದೇ ಸಂದರ್ಭದಲ್ಲಿ ಸಮ್ಮೇಳಾಧ್ಯಕ್ಷ ನಾಗೇಂದ್ರ ನಾಯಕ ತೊಕರ್ೆ ದಂಪತಿಯನ್ನು ಸನ್ಮಾನಿಸಲಾಯಿತು. ವೈದ್ಯ ಕೀಯ ಕ್ಷೇತ್ರದಲ್ಲಿ ಡಾ. ಪಿ.ಟಿ.ಅಬ್ರಹಾಂ, ಸಾಹಿತ್ಯ ಸಂಘಟನೆಯ ಕ್ಷೇತ್ರದಲ್ಲಿ ವಾಸುದೇವ ನಾಯಕ, ಯಕ್ಷಗಾನ ಕ್ಷೇತ್ರದಲ್ಲಿ ಆನಂದು ಭಾಗ್ವತ್, ರಂಗಭೂಮಿಯಲ್ಲಿ ಕೃಷ್ಣಾ ನಾಯ್ಕ ಬೊಬ್ರವಾಡ, ಸಾಮಾಜಿಕ ಕ್ಷೇತ್ರದಲ್ಲಿ ಕವಿತಾ ಕೃಷ್ಣಾನಂದ ರಾಯ್ಕರ್ ಅವರನ್ನು ಸನ್ಮಾನಿಸಲಾಯಿತು.
ಮಂಜುನಾಥ ಡಿ. ನಾಯಕ ಸ್ವಾಗತಿಸಿದರು. ರಾಜೇಶ ನಾಯಕ ಸೂವರ್ೇ ನಿರ್ವಹಿಸಿದರು. ಡಿ.ಜೆ. ನಾಯ್ಕ ವಂದಿಸಿದರು. ಸ್ವಾಗತ ಸಮಿತಿ ಗೌರವಾಧ್ಯಕ್ಷ ಕೆ.ವಿ.ನಾಯಕ, ತಾಲೂಕು ಕಸಾಪ ಅಧ್ಯಕ್ಷ ಡಾ. ಪ್ರಕಾಶ ನಾಯಕ, ಸ್ವಾಗತ ಸಮಿತಿ ಅಧ್ಯಕ್ಷ ರವೀಂದ್ರ ಕೇಣಿ ಉಪಸ್ಥಿತರಿದ್ದರು.